ಜನೆವರಿ 23ಕ್ಕೆ ಬಹುನಿರೀಕ್ಷಿತ ಕಲ್ಟ್ ಚಿತ್ರ ಬಿಡುಗಡೆ..

ಜನೆವರಿ 23ಕ್ಕೆ ಬಹುನಿರೀಕ್ಷಿತ ಕಲ್ಟ್ ಚಿತ್ರ ಬಿಡುಗಡೆ..

ಬೇರೆ ಭಾಷೆಗಳಿಗೂ ಸ್ಪರ್ಧೆ ನೀಡುವ ಗುಣಮಟ್ಟದ ಚಿತ್ರ ಮಾಡಿದ್ದೇವೆ..

ವಿಶೇಷ ಕಥೆಯುಳ್ಳ ಕಲ್ಟ್ ಚಿತ್ರ ಎಲ್ಲಾ ವರ್ಗದ ಜನತೆಗೂ ಇಷ್ಟ ಆಗುತ್ತದೆ..

ಬೆಳಗಾವಿ : ಬರುವ ಜನೆವರಿ 23/ 2026ರಂದು ರಾಜ್ಯದಾಡ್ಯಂತ ಕಲ್ಟ್ ಚಿತ್ರ ಬಿಡುಗಡೆ ಆಗುತ್ತಿದ್ದು, ಉತ್ತಮ ಸಂದೇಶ ಇರುವ, ಗುಣಮಟ್ಟದ ಚಿತ್ರವನ್ನು ಮಾಡಿದ್ದು, ಎಲ್ಲರೂ ನೋಡಿ, ಯಶಸ್ವಿಗೊಳಿಸಬೇಕೆಂದು ಚಿತ್ರದ ನಾಯಕ ನಟ ಜಾಯಿದ ಖಾನ ಹೇಳಿದ್ದಾರೆ.

ಗುರುವಾರ ನಗರದ ಖಾಸಗಿ ಸ್ಥಳದಲ್ಲಿ ಸುದ್ದಿಗೋಷ್ಠಿ ನಡೆಸಿ ಸಿನಿಮಾ ಪ್ರಚಾರದ ಬಗ್ಗೆ ಮಾತನಾಡಿದ ಚಿತ್ರದ ನಾಯಕ ನಟ ಜಾಯೀದ್ ಖಾನ್ ಅವರು ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದೆ, ಯುವ ಸಮೂಹದ ಜೊತೆ ಎಲ್ಲಾ ವರ್ಗದ ಜನತೆಗೆ ಈ ಚಿತ್ರ ಇಷ್ಟ ಆಗುತ್ತದೆ, ಚಿತ್ರದ ನಿರ್ದೇಶಕರು ತುಂಬಾ ಶ್ರಮವಹಿಸಿ ಉತ್ತಮ ಚಿತ್ರ ಮಾಡಿದ್ದಾರೆ, ಚಿತ್ರಕ್ಕೆ ಬೇಕಾದ ಎಲ್ಲಾ ಅವಶ್ಯಕತೆಗಳನ್ನು ನಿರ್ದೇಶಕರಿಗೆ ನೀಡಿದ್ದೇವೆ, ಉತ್ತಮ ನಿರ್ಮಾಣ ಸಂಸ್ಥೆಯಿಂದ ಗುಣಮಟ್ಟದ ಚಿತ್ರ ಸಿದ್ದವಾಗಿದೆ, ಕನ್ನಡಿಗರು ಚಿತ್ರ ನೋಡಿ ಆಶೀರ್ವದಿಸಬೇಕು ಎಂದಿದ್ದಾರೆ..

ನನಗೆ ಮೊದಲಿನಿಂದಲೂ ಸಿನಿಮಾ ಬಗ್ಗೆ ಆಸಕ್ತಿ ಇದೆ, ರಾಜಕೀಯಕ್ಕೆ ಬರುವ ಉದ್ದೇಶ ಇಲ್ಲಾ, ಅಭಿಮಾನಿಗಳು ಬಯಸುವ ಚಿತ್ರಗಳನ್ನು ಮಾಡುತ್ತೇನೆ, ಇನ್ನು ಮೇಲೆ ವರ್ಷಕ್ಕೆ ಒಂದಾದರೂ ಚಿತ್ರವನ್ನು ಮಾಡುತ್ತೇನೆ, ಮುಂದಿನ ಸಲ ಎಲ್ಲಾ ಚಿತ್ರತಂಡದೊಂದಿಗೆ ಬೆಳಗಾವಿಗೆ ಬರುತ್ತೇವೆ ಎಂದರು.

ಸುದ್ದಿಗೋಷ್ಠಿಗೂ ಮೊದಲು ನಾಯಕನಟ ಜೈಯಿದ್ ಖಾನ ಅವರ ಅಭಿಮಾನಿಗಳು, ಪುಷ್ಪರ್ಚನೆ, ಜೈಕಾರ ಹಾಕುತ್ತ ಸಿನಿಮಾ ಪ್ರಚಾರ ಕಾರ್ಯಕ್ರಮಕ್ಕೆ ಅವರನ್ನು ಕರೆತಂದರು, ನಂತರ ವೇದಿಕೆ ಕಾರ್ಯಕ್ರಮದಲ್ಲಿ ಕರ್ನಾಟಕ ರತ್ನ ಪುನೀತ್ ರಾಜಕುಮಾರ ಭಾವಚಿತ್ರಕ್ಕೆ ಪುಸ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು..

ಲೋಕಿ ಸಿನಿಮಾ ಅವರ ನಿರ್ಮಾಣದಲ್ಲಿ ತಯಾರಾದ ಈ ಕಲ್ಟ್ ಚಿತ್ರವನ್ನು ಅನಿಲ್ ಕುಮಾರ ಅವರು ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ, ಅರ್ಜುನ್ ಜನ್ಯ ಅವರ ಸಂಗೀತ, ಕೆ ಎಂ ಪ್ರಕಾಶ ಅವರ ಸಂಕಲನ, ರವಿವರ್ಮ ಅವರ ಸಾಹಸ ಈ ಚಿತ್ರಕ್ಕೆ ಇದ್ದು, ನಾಯಕ ಜೈದ್ ಖಾನ ಅವರಿಗೆ ಜೋಡಿಯಾಗಿ ರಚಿತಾ ರಾಮ್ ಹಾಗೂ ಮತ್ತೊಬ್ಬ ನವ ನಟಿ ನಾಯಕಿಯಾಗಿ ನಟಿಸಿದ್ದಾರೆ.

ಇದೇ ವೇಳೆ ಬೆಳಗಾವಿಯ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ನಾಯಕ ಜೈದ್ ಖಾನ್ ಅವರಿಗೆ ಗೌರವಿಯ ಸನ್ಮಾನವನ್ನು ನೆರವೇರಿಸಲಾಯಿತಿ, ಈ ಕಲ್ಟ್ ಸೀನಿಮಾ ಪ್ರಚಾರದ ವೇಳೆ ನಾಯಕ ನಟನೊಂದಿಗೆ ಬೆಳಗಾವಿಯ ಯುವ ನಾಯಕರಾದ ಅಮನ್ ಸೇಠ್ ಹಾಗೂ ಮೃನಾಲ್ ಹೆಬ್ಬಾಳ್ಕರ್ ಕೂಡಾ ಉಪಸ್ಥಿತರಿದ್ದರು..

ವರದಿ ಪ್ರಕಾಶ ಬಿ ಕೆ..

Leave a Reply

Your email address will not be published. Required fields are marked *