ಜನ ಔಷಧಿ ಕೇಂದ್ರಗಳಲ್ಲಿ ಔಷಧಿ ವಿತರಣೆಯಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ..
ಛಲವಾದಿ ನಾರಾಯಣಸ್ವಾಮಿ, ವಿಧಾನ ಪರಿಷತ್ ವಿಪಕ್ಷ ನಾಯಕರು.
ಬೆಳಗಾವಿ : ಜನ ಔಷಧಿ ಕೇಂದ್ರಗಳಲ್ಲಿ ಔಷಧಿಗಳನ್ನು ಕೊಡಲು ರಾಜ್ಯ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ವಿಧಾನ ಪರಿಷತ್ತಿನ ವಿಪಕ್ಷ ನಾಯಕ ಚಲವಾದಿ ನಾರಾಯಣಸ್ವಾಮಿ ಹೇಳಿದರು.
ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕೇಂದ್ರ ಸರಕಾರ ಜಾರಿಗೆ ತಂದಿರುವ ಜನ ಔಷಧಿ ಕೇಂದ್ರವನ್ನು ರಾಜ್ಯದಲ್ಲಿ ಸಂಪೂರ್ಣ ಬಂದ್ ಮಾಡಲಾಗಿದೆ. ಇದನ್ನು ಆರಂಭಿಸಿದರೆ ಎಲ್ಲಿ ಕೇಂದ್ರ ಸರಕಾರಕ್ಕೆ ಶ್ರೇಯಸ್ಸು ಸಲ್ಲುತ್ತದೆ ಎಂದು ರಾಜ್ಯ ಸರಕಾರ ಬಂದ್ ಮಾಡಿದೆ ಎಂದರು.
ಆರ್ ಎಸ್ ಎಸ್ ವಿರುದ್ಧವಾಗಿ ಮಾತನಾಡಿದವರ ವಿರುದ್ಧ ಯಾವುದೇ ಕೇಸ್ ದಾಖಲಿಸಿಲ್ಲ. ಯಾರ ಓಲೈಕೆಗೆ ಸರಕಾರ ಇದನ್ನ ಮಾಡುತ್ತಿದೆ, ಇದಕ್ಕೆಲ್ಲ ಉತ್ತರವನ್ನು ರಾಜ್ಯದ ಜನರು ಕೊಡತ್ತಾರೆ ಎಂದರು.
ಒಳಮೀಸಲಾತಿ ತರುತ್ತೇನೆ ಎಂದು ಯಾವ ಆಧಾರದ ಮೇಲೆ ಮೀಸಲಾತಿ ನೀಡಿದರು. ಅನೇಕ ಕಾರಣದಿಂದ ಮೀಸಲಾತಿ ಪರವಾಗಿ ಅನೇಕರು ಒತ್ತಡ ಹಾಕುತ್ತಿದ್ದಾರೆ ಆದರೂ ಕೂಡಾ ಸರಕಾರ ಮೀಸಲಾತಿ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ ಎಂದರು.