ಬಿಜೆಪಿ – ಜೆಡಿಎಸ್ ಜಂಟಿ ಸುದ್ದಿಗೋಷ್ಠಿ ..
ಜಾತಿ ಮೇಲೆ ಮತ ಕೇಳುವುದಿಲ್ಲ,
ಮೋದಿಯನ್ನು ಮತ್ತೆ ಪ್ರಧಾನಿ ಮಾಡಲು ಮತ ಕೇಳುತ್ತೇವೆ..
ಜಗದೀಶ್ ಶೆಟ್ಟರ್..
ಬೆಳಗಾವಿ : ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯದಲ್ಲಿ ಎನ್ ಡಿಎ ಮೈತ್ರಿಕೂಟಕ್ಕೆ ಜೆಡಿಎಸ್ ಪಕ್ಷ ಸೇರಿಕೊಂಡ ಹಿನ್ನೆಲೆಯಲ್ಲಿ ಇಂದು ನಗರದಲ್ಲಿ ಜಿಲ್ಲಾ ಮಟ್ಟದ ಬಿಜೆಪಿ – ಜೆಡಿಎಸ್ ಒಕ್ಕೂಟದ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ..
ಈ ವೇಳೆ ಮಾತನಾಡಿದ ರಾಜ್ಯಸಭಾ ಸದಸ್ಯರಾದ ಈರಣ್ಣ ಕಡಾಡಿ ಅವರು, ರಾಷ್ಟ್ರಮಟ್ಟದಲ್ಲಿ ಎನ್ ಡಿಎ ಮೈತ್ರಿಕೂಟದಿಂದ ರಾಜ್ಯ ಹಾಗೂ ಜಿಲ್ಲೆಯಲ್ಲಿಯೂ ಕೂಡಾ ಹೊಂದಾಣಿಕೆ ಮಾಡಿಕೊಂಡು ಈ ಲೋಕಸಭಾ ಚುನಾವಣೆಯಲ್ಲಿ ಕಾರ್ಯ ಪ್ರವರ್ತರಾಗಿದ್ದೇವೆ..
ಮೂರು ಕ್ಷೇತ್ರಗಳನ್ನು ಜೆಡಿಎಸ್ ಪಕ್ಷಕ್ಕೆ ಬಿಟ್ಟು, ಉಳಿದ 25 ಕ್ಷೇತ್ರಗಳಲ್ಲಿ ನಾವು ಸ್ಪರ್ಧೆ ಮಾಡುತ್ತಿದ್ದೇವೆ, ಬರುವ ದಿನಗಳಲ್ಲಿ ಎರಡು ಪಕ್ಷಗಳ ಕಾರ್ಯಕರ್ತರು ಒಂದಾಗಿ ಹಾಲುಜೇನಿನಂತೆ ಕೂಡಿ ಕೆಲಸ ಮಾಡಿ ಬಿಜೆಪಿ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರನ್ನು ಗೆಲ್ಲಿಸಬೇಕು ಎಂಬ ಪಣ ತೊಟ್ಟಿದ್ದೇವೆ ಎಂದಿದ್ದಾರೆ..

ಇನ್ನು ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶಂಕರ ಮಾಡಲಗಿ ಮಾತನಾಡಿ, ನಾವು ಹಾಗೂ ಬಿಜೆಪಿ ಹೊಂದಾಣಿಕೆ ಮಾಡಿಕೊಂಡು ನಮ್ಮ ವರಿಷ್ಠರು ಹೇಳಿದ ರೀತಿಯಲ್ಲಿ, ಪ್ರಚಾರದಲ್ಲಿ ಭಾಗಿಯಾಗಿ, ನಮ್ಮ ಎನ್ ಡಿಎ ಅಭ್ಯರ್ಥಿಯಾದ ಶೆಟ್ಟರ ಅವರನ್ನು ಆಯ್ಕೆ ಮಾಡಿಯೇ ತೀರುತ್ತೇವೆ ಎಂದರು..
ಇನ್ನು ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಎನ್ ಡಿಎ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿದ್ದು ಉತ್ತಮ ಮತ್ತು ಸಂತೋಷದ ಬೆಳವಣಿಗೆ, ಹಿಂದೆ ಒಂದೇ ಭಾವನೆಯಿರುವ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರ ಪಡೆದು ಅನೇಕ ಮಹಾ ನಾಯಕರು ಉತ್ತಮ ಕೆಲಸ ಮಾಡಿ ಅಭಿವೃದ್ದಿ ಮಾಡಿದ್ದಾರೆ..
ಹಿಂದಿನಿಂದಲೂ ನಮ್ಮ ಪಕ್ಷಗಳ ಹೊಂದಾಣಿಕೆ ಇದ್ದಿದ್ದು, ದೇವೇಗೌಡರ ಮಾರ್ಗದರ್ಶನ ಪಕ್ಷಾತೀತವಾಗಿ ಎಲ್ಲರಿಗೂ ಅವಶ್ಯಕವಾಗಿದೆ, ರಾಜ್ಯಮಟ್ಟದಲ್ಲಿ ಆಗಿ, ಈಗ ಜಿಲ್ಲಾಮಟ್ಟದಲ್ಲಿ ಹೊಂದಾಣಿಕೆ ಆಗಿದೆ, ಇದರಿಂದ ಬಿಜೆಪಿ ಹೆಚ್ಚಿನ ಮತಗಳ ಅಂತರದಲ್ಲಿ ಜಯ ಸಾಧಿಸುವ ವಿಶ್ವಾಸ ಇದೆ ಎಂದರು..
ರಾಮದುರ್ಗ ಮತ್ತು ಬೈಲಹೊಂಗಲದ ಬಿಜೆಪಿ ವಲಯದಲ್ಲಿ ಯಾವುದೇ ಗೊಂದಲ ಇಲ್ಲಾ, ಯಾವುದೇ
ಜಾತಿಗಳ ಮೇಲೆ ಮತ ಕೇಳೋದಿಲ್ಲ, ಮೋದಿ ಅವರು ಪ್ರಧಾನಿ ಆಗಲೆಂದು ನಾವು ಜನರಲ್ಲಿ ಮತ ಕೇಳುತ್ತೇವೆ,
ಸ್ಲೋ ಆಗಿ ಗ್ಯಾರೆಂಟಿ ಯೋಜನೆಗಳನ್ನು ಮಾಯ ಮಾಡುತ್ತಾರೆ, ಜೊತೆಗೆ ಸರ್ಕಾರವು ಕೂಡಾ ಪತನವಾಗಬಹುದು ಎಂದರು..
ವರದಿ ಪ್ರಕಾಶ ಕುರಗುಂದ..