ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ..

ಜಿದ್ದಾಜಿದ್ದಿಗೆ ಕಾರಣವಾಗಿದ್ದ ಬೆಳಗಾವಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಪಾಧ್ಯಕ್ಷ ಚುನಾವಣೆ..

ಜಾರಕಿಹೊಳಿ ಸಹೋದರರ ಬಣಕ್ಕೆ ವಿಜಯಮಾಲೆ..

ಜೊಲ್ಲೆಗೆ ಅಧ್ಯಕ್ಷ, ಕಾಗೆಗೆ ಉಪಾಧ್ಯಕ್ಷ ಪಟ್ಟ..

ಬೆಳಗಾವಿ : ಕಳೆದ ನಾಲ್ಕೈದು ತಿಂಗಳಿನಿಂದ ತೀವ್ರ ಜಿದ್ದಾಜಿದ್ದಿಗೆ ಬಿದ್ದಿದ್ದ, ಜಿಲ್ಲಾ ರಾಜಕಾರಣದಲ್ಲಿ ವಾದ ವಿವಾದಕ್ಕೆ, ಕುಟುಂಬಗಳ ರಾಜಕೀಯ ಪ್ರತಿಷ್ಠೆಗೆ ಇಳಿದಂತೆ ಸ್ಪರ್ಧೆ ನಡೆದಿದ್ದು, ಇಡೀ ರಾಜ್ಯವೇ ಬೆಳಗಾವಿಯತ್ತ ತಿರುಗಿ ನೋಡುವಂತೆ ಆಗಿದ್ದ, ಡಿಸಿಸಿ ಬ್ಯಾಂಕ್ ಚುನಾವಣೆ ಇಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡುವ ಮೂಲಕ ಅಂತ್ಯಗೊಂಡಿದೆ.

ಜಾರಕಿಹೊಳಿ ಬಣದವರು ಅಧ್ಯಕ್ಷರಾಗೋಲ್ಲ ಎನ್ನುವ ಮಾತುಗಳು ವಿರೋಧಿ ಬಣದಲ್ಲಿ ಕೇಳಿ ಬರುತ್ತಿರುವ ನಡುವೆಯೂ, ತಮ್ಮ ರಾಜಕೀಯ ಚಾಣಾಕ್ಷತನದಿಂದ ಮತ್ತೋಮ್ಮೆ ಜಿಲ್ಲೆಯಲ್ಲಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಿದ ಜಾರಕಿಹೊಳಿ ಸಹೋದರರು ತಮ್ನ ಬಣದಿಂದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಿ, ತಮ್ಮ ವಿರೋಧಿಗಳಿಗೆ ಚೆಕ್ ಮೆಟ್ ನೀಡಿದ್ದಾರೆ.

ಜಾರಕಿಹೊಳಿ ಬಣದ ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಅಧ್ಯಕ್ಷರಾಗಿ ಹಾಗೂ ಶಾಸಕ ರಾಜು ಕಾಗೆ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆ ಆಗಿದ್ದಾರೆ, ಶಾಸಕ ಬಾಕಚಂದ್ರ ಜಾರಕಿಹೊಳಿ ಅವರ ಕಾರಿನಲ್ಲಿಯೇ ನಾಮಪತ್ರ ಸಲ್ಲಿಸಲು ಕಾಗೆ ಹಾಗೂ ಜೊಲ್ಲೆ ಅವರು ತೆರಳಿದರು..

ವರದಿ ಪ್ರಕಾಶ ಬಸಪ್ಪ ಕುರಗುಂದ..