ಜಿಪಂ ಮುಖ್ಯಲೆಕ್ಕಾಧಿಕಾರಿ ಬೀಸಿದ ಚಾಟಿಗೆ ಎಚ್ಚೆತ್ತುಕೊಂಡ ಹಾಸ್ಟೆಲ್ ಸಿಬ್ಬಂದಿ..
ತಪ್ಪು ತಿದ್ದಿಕೊಂಡ ತಾಲೂಕು ಹಿಂದುಳಿದ ವರ್ಗಗಳ ಸಿಬ್ಬಂದಿ ಹಾಗೂ ನಿಲಯ ಪಾಲಕ..
ಒಂದೇ ದಿನದಲ್ಲಿ ಶಿಸ್ತಿನ ಸ್ವಚ್ಛತೆ ಕಂಡ ವಸತಿ ನಿಲಯ..
ಬೆಳಗಾವಿ : ಮಂಗಳವಾರ ದಿನಾಂಕ 20/08/2024ರಂದು ಜಿಲ್ಲಾ ಪಂಚಾಯತಿಯ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ ಅವರು ತಮ್ಮ ಸಿಬ್ಬಂದಿಯೊಂದಿಗೆ, ಸವದತ್ತಿ “ತಾಲೂಕು ಪಂಚಾಯತಿ ಪ್ರಗತಿ ಪರಿಶೀಲನಾ ಸಭೆಗೆ” ಹೋಗಿದ್ದು, ಸಭೆಯ ಬಳಿಕ ತಾಲೂಕಿನ ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಕ್ಕೆ ಬೇಟಿ ನೀಡಿದ್ದರು..
ನಗರದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯಕ್ಕೆ ಬೇಟಿ ನೀಡಿದ ಅಧಿಕಾರಿಗಳ ತಂಡ, ವಸತಿ ನಿಲಯದಲ್ಲಿಯ ಸಿಬ್ಬಂದಿಗಳ ಗೈರು, ಹಾಗೂ ಅಲ್ಲಿಯ ಅಸ್ವಚ್ಛತೆಗೆ ಬಗ್ಗೆ ಅಸಮಾಧಾನಗೊಂಡು, ಎಚ್ಚರಿಕೆಯ ಸೂಚನೆ ನೀಡಿ ಬಂದಿದ್ದರು..

ಅಧಿಕಾರಿಗಳ ಬೇಟಿ ಹಾಗೂ ಖಡಕ್ ಸೂಚನೆಯ ನಂತರ ಕೇವಲ ಒಂದೇ ದಿನದಲ್ಲಿ ಅಂದರೆ ನಿನ್ನೆಯಷ್ಟೇ, ವಸತಿ ನಿಲಯದ ಸಿಬ್ಬಂದಿಗಳು ಹಾಗೂ ಇಲಾಖಾ ಸಹಾಯಕ ನಿರ್ದೇಶಕರು ಎಚ್ಚೆತ್ತುಕೊಂಡು ಆಗಿರುವ ತಪ್ಪುಗಳನ್ನು ತಿದ್ದಿಕೊಂಡು, ವಸತಿ ನಿಲಯವನ್ನು ಸ್ವಚ್ಛವಾಗಿಟ್ಟುಕೊಂಡಿದ್ದು, ಆಹಾರ ಸಾಮಗ್ರಿ, ವಿಧ್ಯಾರ್ಥಿಗಳ ಕೊಠಡಿಗಳು, ಶೌಚಾಲಯ, ಸ್ನಾನ ಗೃಹಗಳು ಹೀಗೆ ಎಲ್ಲವನ್ನೂ ಅಚ್ಚುಕಟ್ಟಾಗಿ ಶಿಸ್ತುಬದ್ಧವಾಗಿ ಇಟ್ಟುಕೊಂಡಿದ್ದಾರೆ..

ಜಿ ಪಂ ಮುಖ್ಯಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ ಅವರ ಬೇಟಿಯ ಫಲವಾಗಿ ವಸತಿ ನಿಲಯದಲ್ಲಿ ಅಚ್ಚುಕಟ್ಟಾದ ಸುಧಾರಣೆ ಆಗಿದ್ದರಿಂದ ಅಲ್ಲಿಯ ವಿಧ್ಯಾರ್ಥಿಗಳು ಹರ್ಶಿತರಾಗಿದ್ದು, ತಮ್ಮ ವಿಧ್ಯಾಭ್ಯಾಸ ಹಾಗೂ ಆರೋಗ್ಯದ ಹಿತದೃಷ್ಟಿಯಿಂದ ಇಂತಹ ಸುಧಾರಣೆಗೆ ಕಾರಣೀಬೂತರಾದ ಅಧಿಕಾರಿಗಳಿಗೆ ಪರೋಕ್ಷವಾಗಿ ಧನ್ಯವಾದ ತಿಳಿಸಿದ್ದಾರೆ, ಅದೇ ರೀತಿ ಉಳಿದ ವಸತಿ ನಿಲಯಗಳ ಸ್ಥಿತಿಗತಿ ಕೂಡಾ ಸುಧಾರಣೆ ಮಾಡಬೇಕು ಎಂಬ ವಿನಂತಿ ಮಾಡಿಕೊಂಡಿದ್ದಾರೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..