ಜಿಲ್ಲಾಧಿಕಾರಿ ಕಟ್ಟಡದ ನವೀಕರಣ ಕಾರ್ಯ ವೀಕ್ಷಿಸಿದ ಉಸ್ತುವಾರಿ ಸಚಿವರು.
ಹಳೆಯ ಹಾಗೂ ಹೊಸ ಕಟ್ಟಡಗಳ ವಿನ್ಯಾಸಗಳ ಬಗ್ಗೆ ಸಚಿವರಿಗೆ ವಿವರಿಸಿದ ಜಿಲ್ಲಾಧಿಕಾರಿಗಳು..
ಬೆಳಗಾವಿ : ಶುಕ್ರವಾರ ದಿನಾಂಕ 12/09/2025ರಂದು ಬೆಳಗಾವಿಯ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡದ ನವೀಕರಣ ಕಾಮಗಾರಿಯನ್ನು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ್ ಜಾರಕಿಹೊಳಿ ವೀಕ್ಷಿಸಿ, ಪರಿಶೀಲನೆ ನಡೆಸಿದರು.
ಈ ವೇಳೆ ಹಳೆಯ ಕಟ್ಟಡದ ಪ್ರಗತಿಯಲ್ಲಿರುವ ನವೀಕರಣದ ಕಾರ್ಯವನ್ನು ಹಾಗೂ ಮುಂಬರುವ ದಿನಗಳಲ್ಲಿ ಅದರ ಉಪಯೋಗವನ್ನು ಸಚಿವರಿಗೆ ಸವಿಸ್ತಾರವಾಗಿ ಜಿಲ್ಲಾಧಿಕಾರಿಗಳು ವಿವರಿಸಿದ್ದು, ಹೊಸದಾಗಿ ವಿನ್ಯಾಸಗೊಳ್ಳುತ್ತಿರುವ ಜಿಲ್ಲಾಧಿಕಾರಿ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದ ಕುರಿತು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು ಸಚಿವರಿಗೆ ಮಾಹಿತಿ ನೀಡಿದ್ದಾರೆ.

ಅತ್ಯಾಧುನಿಕ ವಿಡಿಯೋ ಕಾನ್ಫರೆನ್ಸ್ ಸಭಾಂಗಣ ಮಾಡಲಾಗುತ್ತಿದ್ದು, ಕಟ್ಟಡದ ಮೇಲೊಂದು ಸ್ಟೋರ್ ರೂಂ ಮಾಡಿ, ಕಚೇರಿಯ ಹಳೆಯ ಮಹತ್ವದ ದಾಖಲೆಗಳನ್ನೆಲ್ಲ ಆ ರೂಮಲ್ಲಿ ಇಡಲಾಗುತ್ತಿದ್ದು, ಕಟ್ಟಡದ ನವೀಕರಣ ಕಾರ್ಯವನ್ನು ಅತೀ ಶೀಘ್ರದಲ್ಲೇ ಪೂರ್ಣಗೊಳಿಸುವಾದಕ್ಕಾಗಿ ಕಾಮಗಾರಿಯೂ ವೇಗವಾಗಿ ನಡೆಯುತ್ತಿದೆ ಎಂದಾಗ, ಸಚಿವರು ಉತ್ತಮ ಕಾರ್ಯ ಮಾಡುತ್ತಿದ್ದೀರಾ ಎನ್ನುತ್ತಾ ಹಳೆಯ ಕಟ್ಟಡದ ಮೇಲಿನ ದೂಳುಗಳನ್ನು ಸ್ವಚ್ಛಗೊಳಿಸಿ, ಪೆಂಟ್ ಮಾಡಿಸಿ ಎಂಬ ಸಲಹೆ ನೀಡಿದರು..
ಹಳೆ ಕಟ್ಟಡದ ಕಂಪೌಂಡ ಎಲ್ಲಿ ಮುಗಿಯುತ್ತದೆ ಹಾಗೂ ಹೊಸ ಕಟ್ಟಡ ಎಲ್ಲಿಲ್ಲಿ ಬರುತ್ತದೆ, ಅದು ಮುಖ್ಯ ರಸ್ತೆಯಿಂದ ನೇರವಾಗಿ ಹೇಗೆ ಸಂಪರ್ಕಕ್ಕೆ ಸಾಧ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಸಚಿವರಿಗೆ ವಿವರಿಸಿದ್ದಾರೆ.