ಜಿಲ್ಲಾ ಪಂಚಾಯತಿ ಬೆಳಗಾವಿಯಿಂದ ಜಿಲ್ಲಾ ಮಟ್ಟದ ಕ್ರೀಡಾಕೂಟ..
ಮೂರು ದಿನಗಳ ಕಾಲ ನಡೆಯುವ ಆರ್ಡಿಪಿಆರ್ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬ 2024.
ಬೆಳಗಾವಿ : ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖಾ ನೌಕರರ ಸಂಘ, ಜಿಲ್ಲಾ ಘಟಕ ಬೆಳಗಾವಿ, ಕರ್ನಾಟಕ ರಾಜ್ಯ ಪಂಚಾಯತ ಅಭಿವೃದ್ದಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಘಟಕ ಬೆಳಗಾವಿ ಹಾಗೂ ಆರ್ಡಿಪಿಆರ್ ಇಲಾಖೆಯ ಬೆಳಗಾವಿ ಜಿಲ್ಲೆಯ ಎಲ್ಲಾ ವೃಂದ ಸಂಘಗಳ ಜಂಟಿ ಸಹಭಾಗಿತ್ವದಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಕ್ರೀಡಾ ಮತ್ತು ಸಾಂಸ್ಕೃತಿಕ ಹಬ್ಬವನ್ನು ಆಯೋಜನೆ ಮಾಡಲಾಗಿದೆ ಎಂದು ಜಿಲ್ಲಾ ಪಿಡಿಓ ಸಂಘದ ಅಧ್ಯಕ್ಷರಾದ ಆನಂದ ಹೊಳೆನ್ನವರ ಹೇಳಿದ್ದಾರೆ..
ಮಂಗಳವಾರ ದಿನಾಂಕ 19/11/2024ರಂದು ಜಿಲ್ಲಾ ಪಂಚಾಯತಿ ಸಭಾ ಭವನದಲ್ಲಿ ಕ್ರೀಡಾಕೂಟದ ಪೋಸ್ಟರ್ ಹಾಗೂ ಟಿ ಶರ್ಟಗಳನ್ನು ಅನಾವರಣ ಮಾಡಿದ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ಶಿಂದೆ ಅವರು ಎಲ್ಲರೂ ಸ್ಪರ್ಧಾತ್ಮಕವಾಗಿ, ಖುಷಿಯಿಂದ ಕ್ರೀಡೆಯಲ್ಲಿ ಪಾಲ್ಗೊಳ್ಳಿ, ಈ ಕ್ರೀಡೆಯಿಂದ ನಮ್ಮಲ್ಲಿ ಮತ್ತಷ್ಟು ವೃತ್ತಿಸಾಮರ್ಥ್ಯ, ಅನ್ಯೂನ್ಯತೆ ಬೆಳೆಯಲಿ, ಜೊತೆಗೆ ಇನ್ನು ಕೆಲವೇ ದಿನಗಳಲ್ಲಿ ಚಳಿಗಾಲ ಅಧಿವೇಶನ ಪ್ರಾರಂಭವಾಗುವುದರಿಂದ ತಾವೆಲ್ಲರೂ ಬಾಕಿ ಇರುವ ಎಲ್ಲಾ ಕೆಲಸಗಳನ್ನು ಮುಗಿಸಿರಬೇಕು ಎಂದು ಪಿಡಿಓಗಳಿಗೆ ಕಿವಿಮಾತು ಹೇಳಿದರು..

ಬೆಳಗಾವಿಯ ಮಚ್ಚೆ ಸಮೀಪದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ಇದೇ ತಿಂಗಳು ದಿನಾಂಕ 29, 30, 31ರಂದು ನಡೆಯುವ ಈ ಕ್ರೀಡಾಕೂಟದಲ್ಲಿ ಕ್ರಿಕೆಟ್, ಕಬಡ್ಡಿ, ಥ್ರೋಬಾಲ್, ಹಗ್ಗಜಗ್ಗಾಟ, ಕೇರಂ, ಚದುರಂಗ ಹಾಗೂ ಬ್ಯಾಡ್ಮಿಂಟನ್ ಕ್ರೀಡೆಗಳಿದ್ದು, ಮಹಿಳಾ ಹಾಗೂ ಪುರುಷ ಸಿಬ್ಬಂದಿಗಳು ಈ ಕ್ರೀಡಾಕೂಟದಲ್ಲಿ ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
ಇನ್ನು ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರತಿದಿನ ಸಾಯಂಕಾಲ 5-30ರಿಂದ 7-30 ರವರೆಗೆ ನಡೆಯುತ್ತಿದ್ದು, ಅದರಲ್ಲಿ ಹಾಡು, ನೃತ್ಯ, ನಟನೆ, ಕಾವ್ಯ, ಹಾಗೂ ಸಂಗೀತ ವಾದ್ಯಗಳ ನುಡಿಸುವಿಕೆ ಹೀಗೆ ಹಲವಾರು ಚಟುವಟಿಕೆಗಳಲ್ಲಿ ಮಹಿಳಾ ಮತ್ತು ಪುರುಷ ಸಿಬ್ಬಂದಿಗಳು ಭಾಗಿಯಾಗುವರೆಂಬ ಮಾಹಿತಿ ಇದೆ.
ಮೂರನೇ ದಿನ ಕಬಡ್ಡಿ, ಕ್ರಿಕೆಟ್, ವಾಲಿಬಾಲ್ ಥ್ರೋಬಾಲ್ ಅಂತಿಮ ಅಂತಿಮ ಪಂದ್ಯಗಳು ನಡೆಯುತ್ತಿದ್ದು, ಸಂಜೆ 5-30ಕ್ಕೆ ಸಮಾರೋಪ ಸಮಾರಂಭ ನಡೆಯುತ್ತದೆ ಎಂದಿದ್ದಾರೆ..

ಕ್ರೀಡಾಕೂಟದ ಪೋಸ್ಟರ್ ಹಾಗೂ ಟಿ ಶರ್ಟ್ ಅನಾವರಣ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿಗಳಾದ ಪರಶುರಾಮ ದುಡಗುಂಟಿ, ಆಡಳಿತ ಉಪಕಾರ್ಯದರ್ಶಿಗಳಾದ ಬಸವರಾಜ ಹೆಗ್ಗನಾಯಕ, ಅಭಿವೃದ್ಧಿ ಉಪಕಾರ್ಯದರ್ಶಿಗಳಾದ ಬಸವರಾಜ ಅಡವಿಮಠ, ಮುಖ್ಯ ಯೋಜನಾಧಿಕಾರಿಗಳಾದ ಗಂಗಾಧರ ದಿವಟರ, ಯೋಜನಾ ನಿರ್ದೇಶಕರಾದ ಆರ್ ಎನ್ ಬಂಗಾರಪ್ಪ, ಪಿಡಿಓಗಳು ಹಾಗೂ ಜಿಲ್ಲಾ ಪಂಚಾಯತಿಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..