ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭ..

ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭ..

ಬೆಳಗಾವಿ : ಬೆಳಗಾವಿ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭವು ಗುರುವಾರ ಅತ್ಯಂತ ಉತ್ಸಾಹದಲ್ಲಿ ಜರುಗಿದೆ.

ಬೆಳಗಾವಿಯ ಪೊಲೀಸ್ ಕವಾಯತ್ತು ಮೈದಾನದಲ್ಲಿ ಕಳೆದ ಮೂರು ದಿನಗಳಿಂದ ಆರಂಭಗೊಂಡಿದ್ದ ಬೆಳಗಾವಿ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭವು ಗುರುವಾರ ಅತ್ಯಂತ ಉತ್ಸಾಹದಲ್ಲಿ ನಡೆದಿದೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು ಆಗಮಿಸಿದ್ದರು. ಕೊನೆಯ ದಿನ ವಿವಿಧ ಕ್ರೀಡಾ ಕಾರ್ಯಕ್ರಮಗಳು ನಡೆದಿದ್ದು. ಅಥಣಿ ತಂಡ ವರ್ಸಸ್ ಡಿ.ಎ.ಆರ್. ತಂಡದ ನಡುವೆ ಹಗ್ಗ ಜಗ್ಗಾಟಕ್ಕೆ ಜಿಲ್ಲಾಧಿಕಾರಿಗಳಾದ ಮೊಹ್ಮದ್ ರೋಷನ್ ಅವರು ಚಾಲನೆಯನ್ನು ನೀಡಿದರು. ಇದರಲ್ಲಿ ಡಿ.ಎ.ಆರ್ ತಂಡವು ಗೆಲುವನ್ನು ಸಾಧಿಸಿತು.

ನಂತರ ಪೊಲೀಸ್ ಅಧಿಕಾರಿಗಳ ಕುಟುಂಬಸ್ಥರಿಗಾಗಿ ಸಂಗೀತ ಕುರ್ಚಿ ಸೇರಿದಂತೆ ಇನ್ನುಳಿದ ಸ್ಪರ್ಧೆಗಳು ನಡೆದವು. ಈ ವೇಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಡಾ. ಭೀಮಾಶಂಕರ್ ಗುಳೇದ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು..