ಜಿಲ್ಲೆಯ ಜನತೆಗಾಗಿ ಬ್ರಹ್ಮ ವಿಷ್ಣು ಮಹೇಶ್ವರರಂತೆ ಒಂದಾದ ಜನನಾಯಕರು..

ಜಿಲ್ಲೆಯ ಜನತೆಗಾಗಿ ಬ್ರಹ್ಮ ವಿಷ್ಣು ಮಹೇಶ್ವರರಂತೆ ಒಂದಾದ ಜನನಾಯಕರು..

ದೇವರ ಅನುಗ್ರಹದಿಂದ, ಜಿಲ್ಲೆಯ ಅಭಿವೃದ್ಧಿಗಾಗಿ ನಾವು ಸಹೋದರರು ಹೀಗೆ ಒಂದಾಗಿರಬೇಕು..

ಬಾಲಚಂದ್ರ ಜಾರಕಿಹೊಳಿ, ಶಾಸಕರು ಅರಭಾವಿ..

ಬೆಳಗಾವಿ : ದೇವರ ಅನುಗ್ರಹ ಹಾಗೂ ಆಶೀರ್ವಾದದಿಂದ ಜಿಲ್ಲೆಯ ಅಭಿವೃದ್ಧಿಗಾಗಿ, ಜನರ ಒಳ್ಳೆಯದಕ್ಕಾಗಿ ನಾವು ಸಹೋದರರು ಹೀಗೆ ಒಂದಾಗಿ ಇರಬೇಕೆಂಬ ಇಚ್ಛೆಯನ್ನು ಶಾಸಕರು ಹಾಗೂ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಬಾಲಚಂದ್ರ ಜಾರಕಿಹೊಳಿ ಅವರು ವ್ಯಕ್ತಪಡಿಸಿದ್ದಾರೆ..

ಕಳೆದ ಬುಧವಾರ ದಿನಾಂಕ 13/11/2024ರಂದು ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷರ ಚುನಾವಣೆಯ ಪೂರ್ವಭಾವಿ ಸಭೆಯ ನಂತರ, ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಮಾತನಾಡಿದ ಅವರು, ನಾವು ಮೂರು ಜನ ಸಹೋದರರು ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದು ದೇವರ ಅನುಗ್ರಹ, ಆಶೀರ್ವಾದ. ಜಿಲ್ಲೆಯ ಅಭಿವೃದ್ಧಿಗಾಗಿ ನಾವು ಹೀಗೆ ಸೇರುತ್ತಿರಲಿ ಎಂಬ ತಮ್ಮ ಆಶಯವನ್ನು ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಡಿಸಿಸಿ ಬ್ಯಾಂಕಿನ ಆಡಳಿತ ಮಂಡಳಿಯಲ್ಲಿ ಬಹುಪಾಲು ನಿರ್ದೇಶಕರು ಬಿಜೆಪಿ ಪಕ್ಷದವರೇ ಇದ್ದರೂ, ಅಧ್ಯಕ್ಷ ಸ್ಥಾನ ಮಾತ್ರ ಕಾಂಗ್ರೆಸ್ ಅಭ್ಯರ್ಥಿಗೆ ದೊರಕಿದ್ದರ ಬಗ್ಗೆ ಸಮರ್ಥನೆ ಮಾಡಿಕೊಂಡ ಶಾಸಕರು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇರುವದರಿಂದ ಅಧ್ಯಕ್ಷರು ಆ ಪಕ್ಷದವರೇ ಆಗಿದ್ದರೆ ಸರ್ಕಾರದಿಂದ ಸಿಗುವ ಸೌಲಭ್ಯದಲ್ಲಿ ಅನೂಕೂಲ ಆಗುತ್ತದೆ ಎಂದಿದ್ದಾರೆ.

ಇನ್ನು ಅಧ್ಯಕ್ಷ ಸ್ಥಾನದ ಬಗ್ಗೆ ಎಲ್ಲರಲ್ಲಿಯೂ ಅನೇಕ ಊಹಾಪೋಹಗಳು ಕಾಣಿಸಿಕೊಂಡಿದ್ದು ಘಟಾನುಘಟಿ ನಾಯಕರ ಹೆಸರುಗಳು ಕೇಳಿಬರುತ್ತಿದ್ದವು, ಆದರೆ ಬಿಡಿಸಿಸಿ ಆಡಳಿತದಲ್ಲಿ ಪ್ರಥಮ ಬಾರಿಗೆ ನೇರವಾಗಿ ಪ್ರವೇಶ ಮಾಡಿದ ಸಚಿವ ಸತೀಶ ಜಾರಕಿಹೊಳಿ ಅವರ ಕಾರ್ಯತಂತ್ರದಿಂದ ಪಕ್ಷದ ಒಬ್ಬ ಸಾಮಾನ್ಯ ಸದಸ್ಯನಿಗೆ ಬಿಡಿಸಿಸಿ ಅಧ್ಯಕ್ಷ ಪಟ್ಟ ಸಿಕ್ಕಿದ್ದು ಎಲ್ಲರೂ ಹುಬ್ಬೇರಿಸುವಂತಾಗಿದೆ..

ಏನೇ ಬೆಳವಣಿಗೆ ಆಗಿದ್ದರೂ, ಜಾರಕಿಹೊಳಿ ತ್ರಿಮೂರ್ತಿ ಸಹೋದರರು ಬ್ರಹ್ಮ, ವಿಷ್ಣು, (ಮಹೇಶ್ವರ) ರುದ್ರರಂತೆ ರಮೇಶ ಜಾರಕಿಹೊಳಿ, ಸತೀಶ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಒಂದೇ ಸಭೆಯ ವೇದಿಕೆಯಲ್ಲಿ ಕಾಣಿಸಿಕೊಂಡು ಒಂದು ನಿರ್ಣಯ ತೆಗೆದುಕೊಂಡಿದ್ದು, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಧನಾತ್ಮಕ ಬೆಳವಣಿಗೆಯೇ ಆಗಿದ್ದು, ಅವರನ್ನು ಬೆಂಬಲಿಸುವ, ಗೌರವಿಸುವ, ಹಿಂಬಾಲಿಸುವ ಜನಸಾಗರದಲ್ಲಿ ಸ್ವಾಭಿಮಾನದ ಸಂತಸ ಇಮ್ಮಡಿಯಾಗಿದೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..