ಜೂನ ಮೊದಲ ವಾರದೊಳಗೆ ಎಲ್ಲಾ ಕಾಲುವೆಗಳು ಸ್ವಚ್ಚವಾಗಬೇಕು..
ನಗರ ಸೇವಕರನ್ನು ವಿಶ್ವಾಸಕ್ಕೆ ತಗೆದುಕೊಂಡು ಕೆಲಸ ಮಾಡಬೇಕು.
ಜಯತೀರ್ಥ ಸವದತ್ತಿ, ಅಧ್ಯಕ್ಷರು ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಪಾಲಿಕೆ ಬೆಳಗಾವಿ.
ಬೆಳಗಾವಿ : ಈ ವರ್ಷ ಮಳೆ ಬೇಗನೆ ಪ್ರಾರಂಭವಾಗಿದ್ದು ನಗರದಲ್ಲಿ ಇರುವ ಎಲ್ಲಾ ದೊಡ್ಡ ಹಾಗೂ ಸಣ್ಣಪುಟ್ಟ ಕಾಲುವೆಗಳನ್ನು ಆದಷ್ಟು ಬೇಗ ಸ್ವಚ್ಛಗೊಳಿಸುವ ಕಾರ್ಯ ಆಗಬೇಕು ಆ ಮೂಲಕ ಮಳೆಗಾಲದಲ್ಲಿ ರಸ್ತೆ ಮೇಲೆ ನೀರು ನಿಲ್ಲುವ ಸಮಸ್ಯೆ ನಗರವಾಸಿಗಳಿಗೆ ಆಗಬಾರದೆಂದು ಬೆಳಗಾವಿ ಮಹಾನಗರ ಪಾಲಿಕೆಯ ನಗರ ಯೋಜನೆ ಹಾಗೂ ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಯತೀರ್ಥ ಸವದತ್ತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬುಧವಾರ ದಿನಾಂಕ 21/05/2025 ರಂದು ಪಾಲಿಕೆಯ ಸ್ಥಾಯಿ ಸಮಿತಿ ಸಭಾ ಭವನದಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಅತಿಯಾದ ಮಳೆಯಾಗುವ ಹಿನ್ನೆಲೆಯಲ್ಲಿ ಚರಂಡಿಗಳ ಹಾಗೂ ಕಾಲುವೆಗಳ ನೀರು ರಸ್ತೆಯ ಮೇಲೆ ಬಂದು ಸಾರ್ವಜನಿಕರಿಗೆ ತುಂಬಾ ಸಮಸ್ಯೆ ಮಾಡುತ್ತಿದ್ದು, ಆಯಾ ಸಮಸ್ಯೆ ನಿವಾರಣೆಗೆ ಜೂನ್ ಮೊದಲ ವಾರದ ಒಳಗೆ ನಗರದ ಎಲ್ಲಾ ಕಾಲುವೆಗಳನ್ನು ಸ್ವಚ್ಚ ಮಾಡಿ, ಮಳೆ ನೀರು ಸರಾಗವಾಗಿ ಹೋಗುವಂತೆ ಮಾಡಬೇಕೆಂದು ಸೂಚನೆ ನೀಡಿದರು.
ಇದಕ್ಕೆ ಉತ್ತರಿಸಿದ ಪಾಲಿಕೆಯ ಉಪ ಆಯುಕ್ತೆ (ಅಭಿವೃದ್ಧಿ) ಲಕ್ಷ್ಮಿ ಸುಳಗೇಕರ ಅವರು ಕಾಲುವೆಗಳ ಕುರಿತಾಗಿ ಸರಿಯಾದ ಮಾಹಿತಿ ನೀಡುತ್ತಾ , ಕೆಲ ಕಾಲುವೆಗಳು ನಾವು ಮಾಡುತ್ತೇವೆ ಮತ್ತೆ ನಿರ್ಮಿತ ಕೆಲ ಕಾಲುವೆಗಳು ಪಾಲಿಕೆಯ ಇಂಜಿನಿಯರ್ ವಿಭಾಗಕ್ಕೆ ಬರುತ್ತವೆ, ಈಗಾಗಲೇ ನಾವು ನಗರದ ಕೆಲ ಕಾಲುವೆಗಳ ಸ್ವಚ್ಚ ಕಾರ್ಯ ಆರಂಭಿಸಿದ್ದು, ಇದು ಎರಡು ಹಂತಗಳಲ್ಲಿ ಆಗುತ್ತದೆ, ಮುಖ್ಯವಾಗಿ ಹಲಗಾ ಹತ್ತಿರ ಇರುವ ದೊಡ್ಡ ಕಾಲುವೆಯನ್ನು ನಾವು ವ್ಯವಸ್ಥಿತವಾಗಿ ಸ್ವಚ್ಚ ಮಾಡಿದಾಗ ಬಹುತೇಕ ನೀರು ನಿಲ್ಲುವ ಸಮಸ್ಯೆ ದುರಾಗಬಹುದು ಎಂಬ ಸ್ಪಷ್ಟನೆ ನೀಡಿದರು.

ಇನ್ನು ಅಭಿವೃದ್ಧಿ ಸ್ಥಾಯಿ ಸಮಿತಿಯ ಸದಸ್ಯರಲ್ಲಿ ಒಬ್ಬರಾದ ಸಂತೋಷ್ ಪೆಡನೆಕರ್ ಮಾತನಾಡುತ್ತಾ, ಪಾಲಿಕೆ ವ್ಯಾಪ್ತಿಯಲ್ಲಿ ಬರುವ ಬೋರವೆಲಗಳ ವಾರ್ಷಿಕ ನಿರ್ವಹಣೆ ಹೇಗೆ ನಡೆಯುತ್ತಿದೆ, ಎಲ್ಅಂಡ್ ಟಿ ಮತ್ತು ಪಾಲಿಕೆ ವ್ಯಾಪ್ತಿಗೆ ಬರುವ ಬೋರವೆಲಗಳು ಎಷ್ಟು, ಅವುಗಳ ಬಗ್ಗೆ ಮಾಹಿತಿ ನೀಡಬೇಕು, ಬೋರವೆಲಗಳ ಬೋರ್ಡ್ ಗಳ ಮಾಹಿತಿ ಕೂಡಾ ನೀಡಬೇಕು, ಎಷ್ಟು ಸರಿಯಾಗಿವೆ ಮತ್ತೆ ಎಷ್ಟು ಹಾಲಾಗಿವೆ, ಅವುಗಳ ನಿರ್ವಹಣೆಗಾಗಿ ಪಾಲಿಕೆ ಏನೇನು ಮಾಡುತ್ತಿದೆ ಎಂಬ ಮಾಹಿತಿಯನ್ನು ಒದಗಿಸಿ ಎಂದರು.
ಇದಕ್ಕೆ ಉತ್ತರಿಸಿದ ಅಭಿವೃದ್ಧಿ ವಿಭಾಗದ ಅಧಿಕಾರಿಗಳು, ಎಲ್ಆಂಡ್ ಟಿ ಅವರಿಂದ ಆದಷ್ಟು ಬೇಗ ಮಾಹಿತಿ ತರಿಸಿಕೊಳ್ಳುತ್ತೇವೆ, ಪಾಲಿಕೆಯಿಂದ ಎಷ್ಟು ಬೋರವೆಲ್ ನೋಡಿಕೊಳ್ಳುತ್ತಿದ್ದೇವೆ, ಅವುಗಳ ನಿರ್ವಹಣೆಯ ಬಗ್ಗೆ ಈಗಾಗಲೇ ರೂಪುರೇಷೆ ಹಾಕಿಕೊಂಡಿದ್ದು ಆದಷ್ಟು ಬೇಗ ಮಾಹಿತಿಯನ್ನು ಪೂರೈಸುತ್ತವೆ ಎಂದಿದ್ದಾರೆ.

ಪಾಲಿಕೆಯ ಈ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಸಭೆಯಲ್ಲಿ ಪಾಲಿಕೆಯ ಮಹಾಪೌರರಾದ ಮಂಗೇಶ್ ಪವಾರ್, ಉಪ ಮಹಾಪೌರರಾದ ವಾಣಿ ವಿಲಾಸ ಜೋಶಿ, ಸಮಿತಿ ಅಧ್ಯಕ್ಷರಾದ ಜಯತೀರ್ಥ ಸವದತ್ತಿ, ಆಡಳಿತ ಪಕ್ಷದ ಅಧ್ಯಕ್ಷರಾದ ಹಣಮಂತ ಕೊoಗಾಲಿ, ಸಮಿತಿಯ ಇತರ ಸದಸ್ಯರು ಹಾಗೂ ಪಾಲಿಕೆಯ ಅಭಿವೃದ್ಧಿ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು..
ವರದಿ ಪ್ರಕಾಶ್ ಬಸಪ್ಪ ಕುರಗುಂದ..