ಜೈನ ಮುನಿ ಹಂತಕರಿಗೆ ಕಠಿಣ ಶಿಕ್ಷೆ ನೀಡಬೇಕೆಂದು, ಬೆಳಗಾವಿ ವಕೀಲರ ಸಂಘದಿಂದ ಒತ್ತಾಯ..
ಬೆಳಗಾವಿ : ಮಂಗಳವಾರ ನಗರದ ನ್ಯಾಯಾಲಯದ ಆವರಣದಿಂದ ಜಿಲ್ಲಾಧಿಕಾರಿಗಳ ಕಛೇರಿಯ ಆವರಣದವರೆಗೆ ಘೋಷಣೆ ಕೂಗುತ್ತ ಬಂದಂತ ನೂರಾರು ನ್ಯಾಯವಾದಿಗಳು, ಜಿಲ್ಲೆಯಲ್ಲಿ ಅಪರಾಧ ಪ್ರಕರಣಗಳು ನಿಲ್ಲಬೇಕು ಮತ್ತು ಅಪರಾಧ ಮಾಡುವವರಿಗೆ ಶಿಕ್ಷೆ ಆಗಬೇಕು ಎಂಬ ಬೇಡಿಕೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು..
ಕಳೆದ ವಾರ ಬುಧವಾರದಂದು ಜಿಲ್ಲೆಯ ಚಿಕ್ಕೋಡಿ ಪಕ್ಕದ ಹಿರೇಕೊಡಿ ಎಂಬ ಗ್ರಾಮದಲ್ಲಿ 108 ಶ್ರೀ ಕಾಮಕುಮಾರ ನಂದಿಮಹಾರಾಜರ ಭೀಕರ ಹತ್ಯಾ ಆಗಿದ್ದು ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವ ಘಟನೆಯಾಗಿದೆ, ಅಹಿಂಸಾ ಪರಮೋಧರ್ಮ ಎನ್ನುವ ಸಮುದಾಯದ ಒಬ್ಬ ಸ್ವಾಮೀಜಿಯನ್ನು ಈ ರೀತಿಯಾಗಿ ಹಿಂಸೆಯ ಹತ್ಯ ಮಾಡಿ, ಸಮಾಜಕ್ಕೆ ಆಘಾತಕಾರಿ ಸಂದೇಶ ನೀಡುತ್ತಿರುವ ಇಂತಹ ಘಟನೆಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಮನವಿ ನೀಡುವ ವೇಳೆ ವಕೀಲರ ಸಂಘದ ಮುಖಂಡರು ಹೇಳಿದರು..
ಸಮಾಜದ ನಾಗರಿಕರ ಮೇಲೆ ಅತ್ಯಂತ ನಕಾರಾತ್ಮಕವಾಗಿ ಪ್ರಭಾವ ಬೀರುವ ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು, ಈ ಕುಕೃತ್ಯಕ್ಕೆ ಕಾರಣರಾದ ದುಷ್ಟರ ವಿರುದ್ಧ ಪಾರದರ್ಶಕವಾದ ತನಿಖೆ ಆಗಿ, ಕಠಿಣ ಶಿಕ್ಷೆ ಆಗಬೇಕು ಎಂದು ಜಿಲ್ಲಾಧಿಕಾರಿಗಳ ಮುಖಾಂತರ ದೇಶದ ಪ್ರಧಾನಿ, ಗೃಹಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿ ಹಾಗೂ ಗೃಹಮಂತ್ರಿಗಳಿಗೆ ಮನವಿ ಮಾಡಲಾಯಿತು..
ಈ ಸಂದರ್ಭದಲ್ಲಿ ಬೆಳಗಾವಿ ವಕೀಲರ ಸಂಘದ ಪದಾಧಿಕಾರಿಗಳಾದ ಗಿರಿರಾಜ್ ಪಾಟೀಲ್, ರಾವಸಾಹೇಬ್ ಪಾಟೀಲ್, ಬಂಟಿ ಕಪಾಲಿ, ಸುದೀರ್ ಚವಾಣ್, ಪ್ರವೀಣ್ ಕೊಪ್ಪದ, ಮಹಾಂತೇಶ ಪಾಟೀಲ್, ಅಭಿಷೇಕ್ ಉದೋಷಿ, ಆದರ್ಶ ಪಾಟೀಲ್, ಇನ್ನೂ ನೂರಾರು ನ್ಯಾಯವಾದಿಗಳು ಉಪಸ್ಥಿತರಿದ್ದರು…
ವರದಿ ಪ್ರಕಾಶ ಕುರಗುಂದ..
