ಜ್ಞಾನ ತಾಣವಾದ ಬೆಳಗಾವಿಯ ಮಹಾನಗರ ಪಾಲಿಕೆಯ ಮುಖ್ಯ ಕಚೇರಿ..!!!

ಜ್ಞಾನ ತಾಣವಾದ ಬೆಳಗಾವಿಯ ಮಹಾನಗರ ಪಾಲಿಕೆಯ ಮುಖ್ಯ ಕಚೇರಿ..!!!

ಬೆಳಗಾವಿ : ಬೆಳಗಾವಿ ಮಹಾನಗರ ಪಾಲಿಕೆ ತನ್ನ ವಿಶಾಲತೆ ಹಾಗೂ ವೈಶಿಷ್ಟ್ಯಪೂರ್ಣ ಕಾರ್ಯಗಳಿಂದ ಸದಾ ಸುದ್ದಿಯಲ್ಲಿ ಇರುತ್ತಿದ್ದು, ಮೊನ್ನೆ ಆಗಸ್ಟ್ 15 ರಂದು ಮತ್ತೊಂದು ಜನಪರವಾದ ಕಾರ್ಯ ಪಾಲಿಕೆಯಲ್ಲಿ ಜರುಗಿದ ಪರಿಣಾಮಕ್ಕಾಗಿ ಸುದ್ದಿಯಾಗಿದೆ..

ಅದೇನಂದರೆ ಪಾಲಿಕೆಗೆ ತಮ್ಮ ಕೆಲಸದ ನಿಮಿತ್ತ ಆಗಮಿಸಿದ ಸಾರ್ವಜನಿಕರಿಗೆ, ಇತರ ಇಲಾಖೆಯ ಅಧಿಕಾರಿ, ಸಿಬ್ಬಂದಿಗಳಿಗೆ ಹಾಗೂ ಜನಪ್ರತಿನಿಧಿಗಳಿಗೆ ಸೇರಿದಂತೆ ಸರ್ವರಿಗೂ ಓದಲಿಕ್ಕೆ ಪಾಲಿಕೆಯ ಒಳಾಂಗಣ ಹಾಲದಲ್ಲಿ ಒಂದು ಸುಂದರವಾದ, ಚಿಕ್ಕ ಗ್ರಂಥಾಲಯವನ್ನು ನಿರ್ಮಾಣ ಮಾಡಲಾಗಿದೆ..

ಈ ಚಿಕ್ಕ ಗ್ರಂಥಾಲಯದಲ್ಲಿ ವಿವಿಧ ಕ್ಷೇತ್ರಗಳ ವಿಷಯಗಳ ಜ್ಞಾನಾರ್ಜನೆಗೆ ಬೇಕಾಗುವ ಪುಸ್ತಕ ಹಾಗೂ ಗ್ರಂಥಗಳು ಇದ್ದು, ದಿನಪತ್ರಿಕೆಗಳು, ನಿಯತಕಾಲಿಕೆಗಳು, ಮಾಸಪತ್ರಿಕೆಗಳು, ಮಹಾ ಲೇಖಕರ ಕಥೆ, ಕಾದಂಬರಿ, ಕವನಗಳ ಪುಸ್ತಕಗಳ ಸಂಗ್ರಹವಿದ್ದು, ಕುಳಿತು ಓದಲಿಕ್ಕೆ ಉತ್ತಮ ಆಸನದ ವ್ಯವಸ್ಥೆ ಮಾಡಲಾಗಿದೆ..

ಪಾಲಿಕೆಯ ಆಡಳಿತದ ಈ ವಿಶೇಷ ಆಲೋಚನೆಯ ಗ್ರಂಥಾಲಯ ವ್ಯವಸ್ಥೆಗೆ ಎಲ್ಲರ ಮೆಚ್ಚುಗೆ ವ್ಯಕ್ತವಾಗಿದ್ದು, ಅನೇಕ ಮಹನೀಯರು ಈ ಪಾಲಿಕೆ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕಾಣಿಕೆಯಾಗಿ ನೀಡಲು ಮುಂದೆ ಬರುತ್ತಿರುವದು ಉತ್ತಮ ಬೆಳವಣಿಗೆ ಎನ್ನಬಹುದು..

ವರದಿ ಪ್ರಕಾಶ ಕುರಗುಂದ..