ಟೆಂಡರ್ ಆಗಿಲ್ಲವೆಂದು ಸಾರ್ವಜನಿಕರ ಕೆಲಸದಲ್ಲಿ ವಿಳಂಬ ಆಗಬಾರದು.
ಜನರು ಕೇಳುವ ಪ್ರಶ್ನೆಗಳಿಗೆ ನಾವು ಏನು ಹೇಳಬೇಕು??
ಜಯತೀರ್ಥ ಸವದತ್ತಿ, ಅಧ್ಯಕ್ಷರು, ಅಭಿವೃದ್ಧಿ ಸ್ಥಾಯಿ ಸಮಿತಿ..
ಬೆಳಗಾವಿ : ಟೆಂಡರ್ ಆಗಿಲ್ಲ ಎಂಬ ಕಾರಣಕ್ಕಾಗಿ ಜನರ ಸಮಸ್ಯೆಗಳನ್ನು ಸರಿಪಡಿಸದಿದ್ದರೆ ನಾವೆಲ್ಲಾ ಇದ್ದು ಏನು ಪ್ರಯೋಜನೆ? ಅಧಿಕಾರಿಗಳಾಗಿ ನೀವು ಕಾರಣ ಹೇಳಿ ಕೈ ತೊಳೆದುಕೊಳ್ಳುತ್ತಿರಿ, ಜನರು ಕೇಳುವ ಪ್ರಶ್ನೆಗಳಿಗೆ ಜನಪ್ರತಿನಿಧಿಗಳಾದ ನಾವು ಉತ್ತರ ನೀಡಬೇಕಾಗುತ್ತದೆ ಎಂದು ಪಾಲಿಕೆಯ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜಯತೀರ್ಥ ಸವದತ್ತಿ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ.
ಮಂಗಳವಾರ ದಿನಾಂಕ 07/01/2025 ರಂದು ಪಾಲಿಕೆಯ ಸ್ಥಾಯಿ ಸಮಿತಿಯ ಸಭಾಗೃಹದಲ್ಲಿ ನಡೆದ ಪಾಲಿಕೆಯ ನಗರ ಯೋಜನೆ ಮತ್ತು ಅಭಿವೃದ್ಧಿ ಸ್ಥಾಯಿ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷರಾದ ಜಯತೀರ್ಥ ಸವದತ್ತಿ ಅವರು, ನಗರದ ವಿವಿಧ ವಾರ್ಡುಗಳಲ್ಲಿ ವಿದ್ಯುತ್ ದ್ವೀಪದ ಅಳವಡಿಕೆಯಲ್ಲಿ ವಿಳಂಬ ಆಗಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ಪ್ರಶ್ನೆ ಮಾಡಿ, ತಮ್ಮ ಅಸಮಾಧಾನ ಹೊರಹಾಕಿದ್ದಾರೆ..

ಈಗಾಗಲೇ ಕೆಲ ನಗರ ಸೇವಕರು ಸುಮಾರು ಒಂದು ವರ್ಷಗಳಿಂದ ತಮ್ಮ ವಾರ್ಡುಗಳಲ್ಲಿ ಬೀದಿ ದ್ವೀಪಗಳ ಅಳವಡಿಕೆಗಾಗಿ ಮನವಿ ನೀಡಿದ್ದರೂ ಇನ್ನು ಕೆಲಸ ಆಗದೇ ಇರುವದರಿಂದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಮಿತಿ ಅಧ್ಯಕ್ಷ ಜಯತೀರ್ಥ ಸವದತ್ತಿ ಹಾಗೂ ಸಮಿತಿಯ ಸದಸ್ಯರಾದ ಸಂತೋಷ್ ಪೆಡ್ನೇಕರ್ ಅವರು ಟೆಂಡರ್ ಸಮಸ್ಯೆ ಏನೇ ಇರಬಹುದು, ಇವು ಸಣ್ಣ ಮೊತ್ತದ ಕೆಲಸಗಳಾಗಿದ್ದು, ಏನಾದರೂ ಪರಿಹಾರ ಹುಡುಕಿಕೊಂಡು ಜನರ ಕೆಲಸ ಮಾಡಿ ಕೊಡಬೇಕು.
ಅವರು ಬಂದಿಲ್ಲ, ಇವರು ಬಂದಿಲ್ಲ ಎಂದು ಕಾರಣ ಹೇಳಿ ನುನುಚಿಕೊಳ್ಳಬೇಡಿ, ಸಮಸ್ಯೆಗಳಿಗೆ ದಾರಿಗಳು ಇದ್ದೆ ಇರುತ್ತವೆ, ಅದನ್ನು ಮಾಡಿ, ಜನರ ಸಮಸ್ಯೆಗಳನ್ನು ಹಾಗೆ ಉಳಿಸಬೇಡಿ, ಹೀಗಾದರೆ ನಾವು ಜನರಿಗೆ ಏನು ಉತ್ತರ ನೀಡಬೇಕು? ಆದಷ್ಟು ಬೇಗ ಬೀದಿ ದ್ವೀಪಗಳನ್ನು ಕೂರಿಸುವ ಕೆಲಸ ಮಾಡಿ ಎಂದರು.

ಇನ್ನು ಹಿಂದಿನ ಸಭೆಯಲ್ಲಿ ಆದ ನಡಾವಳಿಗಳನ್ನು ಓದಿ ದೃಢೀಕರಣ ಮಾಡಲಾಯಿತು, ಪಾಲಿಕೆಯ ಒಡೆತನದಲ್ಲಿರುವ ಸಮುದಾಯ ಭವನಗಳ ಬಾಡಿಗೆ ದರ ಪರಿಷ್ಕರಣೆ, ಬಸವೇಶ್ವರ ವೃತ್ತದಲ್ಲಿ ಹೈಮಾಸ್ಟ್ ಅಳವಡಿಸುವುದು, ರಸ್ತೆ ಸುಧಾರಣೆ, ಬೀದಿ ದ್ವೀಪ ಅಳವಡಿಕೆ, ಅಧಿವೇಶನದ ಅವಧಿಯಲ್ಲಿ ತುರ್ತು ಕಾಮಗಾರಿಯ ಬಿಲ್ ಸಂದಾಯ ಹೀಗೆ ಹಲವು ವಿಷಯಗಳಿಗೆ ಸಭೆಯಲ್ಲಿ ಚರ್ಚಿಸಿ ಅನುಮೋದನೆಯನ್ನು ಪಡೆಯಲಾಯಿತು.
ವರದಿ ಪ್ರಕಾಶ ಬಸಪ್ಪ ಕುರಗುಂದ..