ಡಾ ಪ್ರಭಾಕರ ಕೋರೆ ಜನ್ಮ ದಿನದ ನಿಮಿತ್ತ ಉಚಿತ ಐಎಎಸ್, ಕೆಎಎಸ್ ತರಬೇತಿ..

ಡಾ ಪ್ರಭಾಕರ ಕೋರೆ ಜನ್ಮ ದಿನದ ನಿಮಿತ್ತ ಉಚಿತ ಐಎಎಸ್, ಕೆಎಎಸ್ ತರಬೇತಿ..

ಭರವಸೆ ಧಾರವಾಡ ಹಾಗೂ ಕಿಯೋನಿಕ್ಸ್ ತರಬೇತಿ ಕೇಂದ್ರ ಚಿಕ್ಕೋಡಿಯ ಆಯೋಜನೆ..

ರಾಜೇಶ್ ಚೌಗಲಾ, ಕಿಯೋನಿಕ್ಸ್ ಮುಖ್ಯಸ್ಥರು ಬೆಳಗಾವಿ..

ಬೆಳಗಾವಿ : ಭರವಸೆ ಧಾರವಾಡ ಹಾಗೂ ಕಿಯೋನಿಕ್ಸ್ ಕಂಪ್ಯೂಟರ ತರಬೇತಿ ಕೇಂದ್ರ ಚಿಕ್ಕೋಡಿಯ ಸಹಯೋಗದಲ್ಲಿ ರಾಜ್ಯದ ಶೈಕ್ಷಣಿಕ, ಸಾಮಾಜಿಕ ಮುತ್ಸದಿ ಹಾಗೂ ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ ಪ್ರಭಾಕರ ಬ ಕೋರೆ ಅವರ 78ನೇಯ ಜನ್ಮ ದಿನದ ಅಂಗವಾಗಿ ಉಚಿತ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಯನ್ನು ಆಯೋಜನೆ ಮಾಡಲಾಗಿದೆ ಎಂದು ಕಿಯೋನಿಕ್ಸ್ ಬೆಳಗಾವಿ, ಚಿಕ್ಕೋಡಿ, ರಾಯಭಾಗ ಹಾಗೂ ನಿಪ್ಪಾಣಿಯ ಮುಖ್ಯಸ್ಥರಾದ ರಾಜೇಶ್ ಚೌಗಲಾ ಅವರು ತಿಳಿಸಿದ್ದಾರೆ.

ತಮ್ಮ ನೆಚ್ಚಿನ ನಾಯಕರಾದ ಪ್ರಭಾಕರ ಕೋರೆ ಅವರ ಹುಟ್ಟು ಹಬ್ಬದ ಪ್ರಯುಕ್ತ 100 ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಐಎಎಸ್ ಕೆಎಎಸ್ ಹಾಗೂ ಪಿಎಸ್ಐ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ, ಆಸಕ್ತ ವಿದ್ಯಾರ್ಥಿಗಳು ಬೆಳಗಾವಿ ಚಿಕ್ಕೋಡಿ ರಾಯಬಾಗ ಹಾಗೂ ನಿಪ್ಪಾಣಿಯ ಕಿಯೋನಿಕ್ಸ್ ಕೇಂದ್ರಗಳಲ್ಲಿ ಪಡೆಯಬಹುದೆಂಬ ಮಾಹಿತಿ ನೀಡಿದ್ದಾರೆ.

ಶಿಕ್ಷಣ ಪ್ರೇಮಿಗಳಾಗಿ, ತಮ್ಮ ಸಾಮಾಜಿಕ ಸೇವೆಯಿಂದ ಮಹಾನ ಆದರ್ಶ ವ್ಯಕ್ತಿತ್ವವಾಗಿ ನಮ್ಮೆದುರು ಇರುವ ನೆಚ್ಚಿನ ನಾಯಕರ ನೆರಳಿನಲ್ಲಿ, ಸಾಧಿಸುವ ಛಲವಿರುವ ಯುವ ಸಮೂಹ ಉತ್ತಮ ತರಬೇತಿ ಹೊಂದಿ, ಭವಿಷ್ಯದಲ್ಲಿ ಉತ್ತಮ ಸ್ಥಾನಮಾನ ಪಡೆದು, ಪ್ರಗತಿಪರ ಸಮಾಜವನ್ನು ನಿರ್ಮಿಸುವಲ್ಲಿ ಯಶಸ್ವಿಯಾಗಲಿ ಎಂಬ ಸದುದ್ದೇಶದಿಂದ ಈ ಉಚಿತ ತರಬೇತಿ ಕಾರ್ಯಾಗಾರವನ್ನು ಆಯೋಜಿಸಿದ್ದು, ಹೆಚ್ಚಿನ ಮಾಹಿತಿಗಾಗಿ 8050958447, 8431883719, 9342788999 ಹಾಗೂ 7019950224 ಸಂಖ್ಯೆಗೆ ಸಂಪರ್ಕಿಸಲು ಕೋರಿದ್ದಾರೆ.

ವರದಿ ಪ್ರಕಾಶ್ ಬಸಪ್ಪ ಕುರಗುಂದ..

Leave a Reply

Your email address will not be published. Required fields are marked *