ಡಾ ರಾಜ್ ಮೊಮ್ಮಗ ಯುವರಜಕುಮಾರ ಇಂದು ಬೆಳಗಾವಿಯಲ್ಲಿ..
ಬೆಳಗಾವಿ : ಕುಂದಾನಗರಿ ಬೆಳಗಾವಿಗೂ ಹಾಗೂ ಡಾ ರಾಜ್ ಮನೆಯನಕ್ಕೂ ಅವಿನಾಭಾವ ಸಂಬಂಧ ವಿದೆ, ಇಲ್ಲಿಯ ಅಭಿಮಾನಿ ಸಂಘಗಳ ಅಭಿಮಾನವೂ ಕೂಡಾ ಆಕಾಶದೆತ್ತರಲ್ಲಿದ್ದು, ಅಷ್ಟೇ ಪ್ರೀತಿಯನ್ನು ರಾಜ್ ಮನೆತನದ ಎಲ್ಲಾ ನಾಯಕ ನಟರು ಇಲ್ಲಿನ ಜನತೆಯ ಮೇಲೆ ಇಟ್ಟಿದ್ದಾರೆ..
ಇಂದು ಮಂಗಳವಾರ, ರಾಜ್ ಕುಟುಂಬದ ಮೂರನೇ ತಲೆಯ, ಯುವ ಸಮುದಾಯದ ಕ್ರೇಜ್ ಆಗಿರುವ, ಯಶಸ್ವಿ ಪ್ರದರ್ಶನ ಕಾಣುತ್ತಿರುವ “ಯುವ” ಚಿತ್ರದ ನಾಯಕನಾದ ಯುವ ರಾಜಕುಮಾರ ಬೆಳಗಾವಿಗೆ ಆಗಮಿಸುತ್ತಿದ್ದು, ಎಲ್ಲಾ ಯುವಸಮೂಹ ಹಾಗೂ ರಾಜ್ ಮನೆತನದ ಅಭಿಮಾನಿಗಳು ಆಗಮಿಸಿ, ಅಭಿಮಾನಿ ದೇವರುಗಳು ಯುವನಿಗೆ ಆಶೀರ್ವದಿಸುವ ಶುಭದಿನವಾಗಿದೆ..

ಈ ವಿಶೇಷ ದಿನದಂದು, ಯುವ ಚಿತ್ರದ ಯಶಸ್ವಿ ಪ್ರದರ್ಶನದ ಹಿನ್ನೆಲೆಯಲ್ಲಿ ಬೆಳಗಾವಿಗೆ ಯುವ ರಾಜಕುಮಾರ ಆಗಮಿಸಿ, ನಗರದ ಚೆನ್ನಮ್ಮ ವೃತ್ತದಲ್ಲಿರುವ ಚೆನ್ನಮ್ಮ ಪ್ರತಿಮೆಗೆ ಮಾಲಾರ್ಪಣೆ ಮಾಡಿ, ಅಲ್ಲಿಂದ ಚಿತ್ರಾ ಚಿತ್ರಮಂದಿರದವರೆಗೆ ಅಭಿಮಾನಿಗಳೊಂದಿಗೆ ಸಾಗುವರು ಎಂಬ ಮಾಹಿತಿಯಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಬೆಳಗಾವಿಗರು ಸೇರಿ ಈ ಬೇಟಿಯನ್ನು ಯಶಸ್ವಿ ಗೊಳಿಸಬೇಕು ಎಂದು ಅಖಿಲ ಕರ್ನಾಟಕ ಡಾ ಶಿವರಾಜಕುಮಾರ ಅಭಿಮಾನಿಗಳ ಸಂಘದ ಜಿಲ್ಲಾಧ್ಯಕ್ಷರಾದ ಶೇಖರ್ ಕಾಲೇರಿ ಅವರು ವಿನಂತಿಸಿಕೊಂಡಿದ್ದಾರೆ..
ವರದಿ ಪ್ರಕಾಶ ಕುರಗುಂದ.