ಡಿಕೆಶಿಯ ಡ್ರಾಮಾ ಕಂಪನಿಗೆ, ಬಿಜೆಪಿಯಿಂದ ತಕ್ಕ ಉತ್ತರ ನೀಡಲು ಈ ಸುದ್ದಿಗೋಷ್ಠಿ..
ಲಾಟರಿ ಮೂಲಕ ಅಧಿಕಾರ ಪಡೆದವರಿಗೆ ಆಯುಷ್ಯ ಕಡಿಮೆ..
ನೇರವಾಗಿ ಹೋರಾಡಿ ಗೆಲ್ಲುವ ತಾಕತ್ತು ಡಿಕೆಶಿ ಡ್ರಾಮಾ ಕಂಪನಿಗೆ ಇಲ್ಲಾ…
ಡಿಕೆಶಿ ಮಂತ್ರಿಗಿರಿಯೇ ಕಾಂಗ್ರೆಸ್ ಸರ್ಕಾರಕ್ಕೆ ಅಪಾಯ..
ಬೆಳಗಾವಿಯಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆ..
ಬೆಳಗಾವಿ: ‘ಬಿಜೆಪಿ ಆಪರೇಷನ್ ಕಮಲ ಮಾಡಿ ಸರ್ಕಾರ ಬೀಳಿಸಲು ಯತ್ನಿಸುತ್ತಿದೆ ಎಂಬುದು ಸುಳ್ಳು. ‘ಗ್ಯಾರಂಟಿ’ಗಳನ್ನು ನೀಗಿಸಲು ಆಗದ ಕಾಂಗ್ರೆಸ್ಸಿಗರು ಬಿಜೆಪಿ ಹೆಸರು ಕೆಡಿಸುತ್ತಿದ್ದಾರೆ. ಜನರ ಚಿತ್ತ ಬೇರೆಡೆ ಸೆಳೆಯುವ ಯತ್ನವಿದು’ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು.
ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಒಂದು ವೇಳೆ ಈ ಸರ್ಕಾರ ಬಿದ್ದರೂ ಬೆಳಗಾವಿಯ ರಾಜಕಾರಣವೇ ಕಾರಣವಾಗುತ್ತದೆ’ ಎಂದರು.

‘ಸರ್ಕಾರ ಬೀಳಬಾರದು, ಬಹಳ ದಿನ ಬಾಳಬೇಕು ಎಂಬುದು ನಮ್ಮ ಆಕಾಂಕ್ಷೆ ಕೂಡ. ಇವರ ಯೋಗ್ಯತೆ ಗೊತ್ತಾಗಿ ಜನರೇ ಇದನ್ನು ಬೀಳಿಸುತ್ತಾರೆ. ಅದಕ್ಕೂ ಮುನ್ನ ನಾವು ಬೀಳಿಸಿದರೆ ಕಾಂಗ್ರೆಸ್ಸಿಗರು ಮತ್ತೆ ಅನುಕಂಪ ಪಡೆದು ಗೆಲ್ಲುತ್ತಾರೆ’ ಎಂದರು.
‘2019ರಲ್ಲಿ ಸರ್ಕಾರ ಬೀಳಿಸಿದ್ದು ರಮೇಶ ಜಾರಕಿಹೊಳಿ ಹಾಗೂ ತಂಡ. ಬಿಜೆಪಿ ಅಲ್ಲ. ಆಗ ಡಿ.ಕೆ.ಶಿವಕುಮಾರ ಉಪಟಳ ವಿಪರೀತವಾಗಿತ್ತು. ಅವನಿಗೆ ಬುದ್ಧಿ ಕಲಿಸಲು ಸರ್ಕಾರ ಬೀಳಿಸಿದೆ. ಈಗ ಅಂಥ ಕೆಲಸಕ್ಕೆ ನಾನು ಕೈಹಾಕುವುದಿಲ್ಲ’ ಎಂದೂ ಹೇಳಿದರು.
‘ಚುನಾವಣೆಯಲ್ಲಿ ಸೋಲಾದ ಬಳಿಕ ಆರು ತಿಂಗಳು ಯಾರೂ, ಏನೂ ಮಾತನಾಡಬಾರದು ಎಂದು ನಿರ್ಧರಿಸಿದ್ದೆವು. ಆದರೆ, ಡಿ.ಕೆ.ಶಿವಕುಮಾರ ದಿನಕ್ಕೊಂದು ಖಾಲಿಡಬ್ಬ ಬಾರಿಸುತ್ತಿದ್ದಾನೆ. ಅನಿವಾರ್ಯವಾಗಿ ನಾನು ಬಾಯಿಬಿಡಬೇಕಾಗಿದೆ’ ಎಂದರು.

ಶೀಘ್ರ ಮಾಜಿ:
‘ಡಿ.ಕೆ.ಶಿವಕುಮಾರ ಶೀಘ್ರವೇ ಮಾಜಿ ಮಂತ್ರಿ ಆಗಲಿದ್ದಾನೆ’ ಎಂದು ರಮೇಶ ಜಾರಕಿಹೊಳಿ ಏಕವಚನದಲ್ಲಿ ಮೂದಲಿಸಿದರು.
‘ಅವನು ಜೈಲಿಗೆ ಹೋಗುತ್ತಾನೋ ಇಲ್ಲವೋ ನನಗೆ ಗೊತ್ತಿಲ್ಲ. ಆದರೆ, ಮಾಜಿ ಆಗುವುದು ಗ್ಯಾರಂಟಿ’ ಎಂದರು.
‘ಎಲ್ಲಿಯವರೆಗೆ ಡಿ.ಕೆ.ಶಿವಕುಮಾರ ಮಂತ್ರಿ ಆಗಿರುತ್ತಾನೋ ಅಲ್ಲಿಯವರೆಗೆ ಸರ್ಕಾರ ಅಪಾಯದಲ್ಲಿದೆ ಎಂದರ್ಥ. ಡಿಕೆಶಿ ಮತ್ತು ಅವರ ಆಪ್ತರು ಯಾವತ್ತೂ ನೇರವಾಗಿ ಹೋರಾಡಿ ಗೆದ್ದವರಲ್ಲ. ಬರೀ ಹೊಂದಾಣಿಕೆ, ಹಿಂಬಾಗಿಲಿನ ಗೆಲುವು ಕಂಡಿದ್ದಾರೆ. ಈ ಬಾರಿ ಲಾಟರಿ ಹೊಡೆದಿದ್ದಾರೆ. ಈ ಲಾಟರಿ ಮಂತ್ರಿಗಳೆಲ್ಲ ಬಹಳ ದಿನ ನಿಲ್ಲುವುದಿಲ್ಲ’ ಎಂದೂ ದೂರಿದರು.
‘ನೆಲಮಂಗಲ ಮತ್ತು ಕೊಳ್ಳೇಗಾಲದ ಇಬ್ಬರು ಮಾಜಿ ಶಾಸಕರಿಗೂ ಡಿ.ಕೆ.ಶಿವಕುಮಾರ ‘ಬ್ಲ್ಯಾಕ್ಮೇಲ್’ ಮಾಡುತ್ತಿದ್ದಾನೆ. ರಮೇಶ ಜಾರಕಿಹೊಳಿ ಮತ್ತು ನಿಮ್ಮಿಬ್ಬರದು ಹೆಚ್ಚಾಗಿದೆ, ನಿಮ್ಮನ್ನು ಜೈಲಿಗೆ ಕಳಿಸುತ್ತೇನೆ ಎಂದು ಬೆದರಿಸಿದ ವಿಷಯ ನನಗೆ ಗೊತ್ತಾಗಿದೆ.

ನನ್ನನ್ನು ಮುಂದಿಟ್ಟುಕೊಂಡು ನೂರು ಸಿ.ಡಿ ಮಾಡಿದರೂ ಏನೂ ಮಾಡಿಕೊಳ್ಳಲು ಆಗುವುದಿಲ್ಲ’ ಎಂದರು.
ಬೆಳಗಾವಿ ರಾಜಕಾರಣದಿಂದಲೇ ಸರ್ಕಾರ ಪತನವಾದರೂ ಅಚ್ಚರಿಯಿಲ್ಲ, ಡಿ ಕೆ ಶಿವಕುಮಾರ್ ಹಾಗೂ ಅವರ ನಾಟಕ ಕಂಪನಿ ಲಾಟರಿ ಮೂಲಕ ಅಧಿಕಾರ ಪಡೆದವರು, ಅಂತವರ ಭವಿಷ್ಯ ತುಂಬಾ ಕಡಿಮೆ, ಡಿಕೆಸಿ ಮುಖ್ಯಮಂತ್ರಿ ಆಗಿದ್ದರೆ ಆಗ ನಾವು ಏನು ಎಂದು ತೋರಿಸುತ್ತಿದ್ದೇವು ಎಂದ ಅವರು ಆದಷ್ಟೂ ಬೇಗ್ ಡಿಕೆಸಿ ಮತ್ತು ಅವರ ಕಂಪನಿ ಮಾಜಿ ಮಂತ್ರಿಗಳ ಪಟ್ಟಿಯಲ್ಲಿ ಸೇರುತ್ತಾರೆ ಎಂದರು…
ವರದಿ ಪ್ರಕಾಶ ಕುರಗುಂದ..