ಡಿಕೆಸಿಯ ಸುಳ್ಳನ್ನು ಮೆಟ್ಟಿನಿಂತ ಸತೀಶ ಜಾರಕಿಹೊಳಿಗೆ ಹೃದಯಪೂರ್ವಕ ಅಭಿನಂದನೆಗಳು..

ಡಿಕೆಸಿಯ ಸುಳ್ಳನ್ನು ಮೆಟ್ಟಿನಿಂತ ಸತೀಶ ಜಾರಕಿಹೊಳಿಗೆ ಹೃದಯಪೂರ್ವಕ ಅಭಿನಂದನೆಗಳು..

ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಒಂದು ಕೋಟಿ ಹಣ ನೀಡಿದ್ದೇನೆ..

ಬೆಳಗಾವಿಯಿಂದಲೇ ಸರ್ಕಾರ ಪತನ ಆಗುವ ಕಾಲ ಸನೀಹವಾಗಿದೆ..

ಶಾಸಕ ರಮೇಶ ಜಾರಕಿಹೊಳಿ..

ಬೆಳಗಾವಿ : ನಾನು ಕಾಂಗ್ರೆಸ್ ಪಕ್ಷದಲ್ಲಿದ್ದಾಗ ಬೆಳಗಾವಿಯ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಶಾಸಕನಗಿದ್ದಾಗ 25 ಲಕ್ಷ, ಹಾಗೂ ಸಚಿವನಾದ ಮೇಲೆ 1ಕೋಟಿಯಷ್ಟು ಸ್ವಂತ ಹಣವನ್ನು ನೀಡಿದ್ದು, ಬೇರೆ ಬೇರೆ ಜಿಲ್ಲೆಯ ಶಾಸಕರು ಕೂಡಾ ತಲಾ 25 ಲಕ್ಷ ನೀಡಿದ್ದರು ಆದರೆ ಲಕ್ಷ್ಮಿ ಹೆಬ್ಬಾಳಕರ ಎಷ್ಟು ಹಣ ನೀಡಿದ್ದಾರೆ ಎಂದು ನನಗೆ ಗೊತ್ತಿಲ್ಲ ಎಂದು ಬಿಜೆಪಿಯ ಶಾಸಕ ರಮೇಶ ಜಾರಕಿಹೊಳಿ ಅವರು ಹೇಳಿದ್ದಾರೆ.

ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೊನ್ನೆ ಬೆಂಗಳೂರಿನಲ್ಲಿ ಕಾಂಗ್ರೆಸ್ ಪಕ್ಷದ ಸಿಎಲ್ಪಿ ಸಭೆಯಲ್ಲಿ ಬೆಳಗಾವಿ ಕಾಂಗ್ರೆಸ್ ಭವನದ ಬಗ್ಗೆ ಡಿ ಕೆ ಶಿವಕುಮಾರ್ ಅವರು ರಾಜ್ಯದ ಜನತೆಗೆ ತಪ್ಪು ಮಾಹಿತಿ ನೀಡುತ್ತಿದ್ದರು, ಆಗ ಸತೀಶ ಜಾರಕಿಹೊಳಿ ಅವರು ಮಧ್ಯ ಪ್ರವೇಶಿಸಿ ಸ್ಪಷ್ಟನೆ ನೀಡಿದ್ದಾರೆ, ಅದರಲ್ಲಿ ನನ್ನ ಹೆಸರು ಪ್ರಸ್ತಾಪ ಆದ ಕಾರಣ ಇಂದು ನಾನು ಮಾಧ್ಯಮದವರಿಗೆ ಸ್ಪಷ್ಟನೆ ನೀಡುತ್ತಿದ್ದೇನೆ ಎಂದ ಅವರು, ನಾನು ಶಾಸಕನಗಿದ್ದಾಗ ಪರಮೇಶ್ವರ ಅವರು ಪಕ್ಷದ ಅಧ್ಯಕ್ಷರಾಗಿದ್ದರು ಆಗಿನ ಪ್ರಯತ್ನ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಕಾರಣವಾಗಿತ್ತು.

ಈಗ ಡಿಕೆಸಿ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಲಕ್ಷ್ಮಿ ಹೆಬ್ಬಾಳ್ಕರ್ ಕಾರಣ ಎನ್ನುವದು ಸುಳ್ಳು, ಅದನ್ನು ಸ್ಥಳದಲ್ಲಿಯೇ ವಿರೋಧ ಮಾಡಿ, ರಾಜ್ಯದ ಜನರಿಗೆ ಸತ್ಯ ಸಂದೇಶ ತಿಳಿಸಿದ ಸತೀಶ ಜಾರಕಿಹೊಳಿ ಅವರಿಗೆ ಹೃದಯಪೂರ್ವಕ ಅಭಿನಂದನೆಗಳು ಎಂದಿದ್ದಾರೆ. ಸುಳ್ಳನ್ನು ವಿರೋಧಿಸಿ ಮಾತನಾಡಿದ ಸತೀಶ ಜಾರಕಿಹೊಳಿ ಅವರಿಗೆ ಧನ್ಯವಾದ ಎಂದ ಅವರು, 2013-2018 ರ ವರೆಗೆ ಕಾಂಗ್ರೆಸ್ ಭವನ ನಿರ್ಮಾಣವಾಗಿದ್ದು,ಆಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಹೆಬ್ಬಾಳ್ಕರ್ ಇದ್ದರೂ, ಕಟ್ಟಡ ನಿರ್ವಹಣೆಯ ಕಮಿಟಿಯ ಅಧ್ಯಕ್ಷರಾಗಿ ಮಹದೇವಪ್ಪ ಇದ್ದರು.

ಶಂಕರಾನಂದ ಅವರ ಹೆಸರಲ್ಲಿ ಇದ್ದ ಜಾಗವನ್ನು ಅವರ ಮಕ್ಕಳನ್ನು ಮನವೊಲಿಸಿ, ಜಾಗ ಬಿಟ್ಟು ಕೊಡುವಂತೆ ಮಾಡಿ, ಕಟ್ಟಡ ಮಂಜೂರಾತಿ ಪಡೆದು, 54 ಲಕ್ಷಕ್ಕೆ ಖರೀದಿ ಪ್ರಕ್ರಿಯೆ ಮಾಡಿಸಿ, ಸ್ವತ ನಾನೇ ಮೊದಲನೇ ಕಂತಿನ ಹಣವೆಂದು 27 ಲಕ್ಷ ನೀಡಿದ್ದೆ, ಆಮೇಲೆ ಕಟ್ಟಡ ಶುರುವಾಯಿತು, ಕಟ್ಟಡ ನಿರ್ಮಾಣ ಆಗುವ ಸಂದರ್ಭದಲ್ಲಿ ಬಹಳ ಗೋಲ್ಮಾಲ ಆಗಿದ್ದು, ಈಗಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಅವರನ್ನು ಕೇಳಿದರೆ ಹೇಳುತ್ತಾರೆ, ಎಂದಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರು ಇಷ್ಟು ದಿವಸ ಸೈಲೆಂಟ್ ಆಗಿದ್ದರು, ಆದರೆ ಇನ್ಮುಂದೆ ಖಡಕ್ ಆಗಿ ಇರಬೇಕು, ನೇರಾನೇರ ರಾಜಕೀಯ ಮಾಡಲಿ ಎಂದು ಅವರಿಗೆ ಸಲಹೆ ನೀಡುವೆ, ಬಿಜೆಪಿಯ ಆರ್ ಅಶೋಕ್ ಹೇಳುವ ಹಾಗೆ ಬೆಳಗಾವಿಯಿಂದಲೇ ಸರ್ಕಾರ ಪತನ ಆಗುವ ಕಾಲ ಸನಿಹವಾಗಿದೆ, ಯಾವುದೇ ಸಂದರ್ಭದಲ್ಲಿ ಪತನವಾಗಬಹುದು ಎಂದಿದ್ದಾರೆ.

ವರದಿ ಪ್ರಕಾಶ ಬಸಪ್ಪ ಕುರಗುಂದ..