ತಂದೆಯ ಸಾವಿನ ರಹಸ್ಯ ಬಯಲಿಗೆಳೆದ ಚಾಣಾಕ್ಷ ಮಗಳು..
ಸ್ವಂತ ತಾಯಿಯ ಮೇಲಿನ ಅನುಮಾನವನ್ನು ಸಾಭಿತುಪಡಿಸಿದ ಮಗಳು..
48 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಬೆಳಗಾವಿ ಮಾಳಮಾರುತಿ ಪೊಲೀಸರು..
ಬೆಳಗಾವಿ : ನಗರದ ಉದ್ಯಮಿ ಸಂತೋಷ ಪದ್ಮಣ್ಣವರ ವಾರದ ಹಿಂದೆ ಹೃದಯಾಘಾತದಿಂದ ಸಹಜವಾಗಿ ಸಾವನ್ನಪ್ಪಿದ್ದಾರೆ ಎಂದು ಸುದ್ದಿ ಆಗಿ, ಸಹಜ ರೀತಿಯಲ್ಲಿಯೇ ಅಂತ್ಯಕ್ರಿಯೆ ಕೂಡಾ ಆಗಿತ್ತು, ಒಂದು ವಾರದ ನಂತರ ಮೃತನ ಮಗಳಿಗೆ ತನ್ನ ತಾಯಿಯ ಮೇಲೆಯೇ ಅನುಮಾನ ಶುರುವಾಗಿ, ತಾಯಿಯ ವಿರುದ್ಧವೇ ಪೊಲೀಸರಿಗೆ ದೂರು ನೀಡಿದಾಗ, ಪೊಲೀಸ್ ಕಾರ್ಯಾಚರಣೆಯಿಂದ, ತನ್ನ ತಂದೆಯ ಸಾವಿಗೆ ತನ್ನ ತಾಯಿಯೇ ಕಾರಣ ಎಂಬ ಆಶ್ಚರ್ಯಕರ ವಿಷಯವನ್ನು ಬಯಲಿಗೆಳೆದು ತನ್ನ ತಂದೆಯ ಸಾವಿಗೆ ನ್ಯಾಯ ತಂದು ಕೊಟ್ಟ ಮಗಳಾಗಿದ್ದಾಳೆ..
ಮಗಳ ದೂರಿನ ಹಿನ್ನೆಲೆಯಲ್ಲಿ ಸಂತೋಷನ ಶವವನ್ನು ಸಮಾಧಿಯಿಂದ ಹೊರತೆಗೆದು ಶವ ಪರೀಕ್ಷೆ ನಡೆಸಲಾಗಿತ್ತು, ಇದರ ಪರಿಣಾಮ ಸಂತೋಷ ಸಾವು ಸಹಜ ಸಾವಲ್ಲ ಅದು ಹತ್ಯ ಎಂದು ತೀರ್ಮಾನಿಸಿ , ಅದಕ್ಕೆ ಕಾರಣರಾದ ಸಂತೋಷನ ಪತ್ನಿ ಉಮಾ ಹಾಗೂ ಆಕೆಯ ಫೇಸ್ ಬುಕ್ ಗೆಳೆಯ ಶೋಭೇಶ ಗೌಡ್ ಮತ್ತು ಶೋಭೇಶ್ ಗೌಡನ ಸ್ನೇಹಿತ ಪವನ ಎಂಬುವವರನ್ನು ಬೆಳಗಾವಿ ಮಾಳಮರುತಿ ಪೊಲೀಸರು ಬಂಧಿಸಿ ಜೈಲಿಗೆ ತಳ್ಳಿದ್ದಾರೆ..

ಆರೋಪಿಯಾದ ಪತ್ನಿ ಉಮಾ ಗಂಡ ಸಂತೋಷನಿಗೆ ರಾಗಿ ಅಂಬಲಿಯಲ್ಲಿ ನಿದ್ರೆ ಮಾತ್ರೆ ಬೆರೆಸಿ ನೀಡಿ, ನಿದ್ರೆಗೆ ಜಾರಿದ ನಂತರ ಪತಿಯ ಕತ್ತು ಹಿಸುಕಿ ಕೊಲೆ ಮಾಡುವ ಪ್ರಯತ್ನ ಮಾಡಿದ್ದಳು, ಆದರೆ ಸಂತೋಷ್ ಉಸಿರು ನಿಲ್ಲಿಸದ ಕಾರಣ ತನ್ನ ಗೆಳೆಯ ಶೋಭೇಶ ಗೌಡ ಹಾಗೂ ಆತನ ಸ್ನೇಹಿತ ಪವನ ನನ್ನು ಕರೆಸಿ ತನ್ನ ಪತಿ ಸಂತೋಷನ ಕಥೆ ಮುಗಿಸಿದ್ದಾಳೆ ಎಂಬ ವಿಚಾರ ಹರಿದಾಡುತ್ತಿದ್ದು, ಕೊಲೆ ನಡೆದಿರುವ ಚಿತ್ರಣದ ಬಗ್ಗೆ ಪೊಲೀಸ್ ಇಲಾಖೆಯಿಂದ ದೃಢವಾಗಬೇಕಿದೆ.
ಮೃತ ಸಂತೋಷ್ ಪದ್ಮನ್ನವರ ಮನೆಯ ಸಿಸಿ ಟಿವಿ ದೃಶ್ಯಗಳು ಡಿಲಿಟ್ ಆಗಿದ್ದು, ಪಕ್ಕದ ಮನೆಯ ಸಿಸಿ ಟಿವಿ ದೃಶ್ಯಗಳನ್ನು ಆಧರಿಸಿ ತನಿಖೆ ಪ್ರಾರಂಭ ಮಾಡಿದ ಪೊಲೀಸರು, ಈ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆಯ ಮೇಲೆ ಸಂತೋಷ್ ಪತ್ನಿ ಉಮಾ ಹಾಗೂ ಆಕೆಯ ಇಬ್ಬರು ಸ್ನೇಹಿತರನ್ನು ಸೇರಿ ಒಟ್ಟು ಮೂರು ಆರೋಪಿಗಳನ್ನು ಬಂಧಿಸಲಾಗಿದೆ. ಬೆಳಗಾವಿಯ ಮಾಳ ಮಾರುತಿ ಠಾಣೆಯ ಪಿಐ ಕಾಲಿಮಿರ್ಚಿ ಅವರ ನೇತೃತ್ವದ ಪೊಲೀಸ್ ತಂಡ 18 ಗಂಟೆಗಳಲ್ಲಿ ಪ್ರಕರಣ ಬೇಧಿಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮೃತ ಸಂತೋಷನ ಮಗಳು ಸಂಜನಾ ಮಾಡಿದ ದೈರ್ಯವನ್ನು ಮೆಚ್ಚಲೇಬೇಕು, ಸ್ವತ ತಾಯಿಯ ವಿರುದ್ಧ ಪೊಲೀಸರಿಗೆ ದೂರು ನೀಡಿ, ತನ್ನ ತಂದೆಯ ಹಂತಕರನ್ನು ಜೈಲಿಗೆ ಅಟ್ಟಿ, ತನ್ನ ತಂದೆಯ ಸಾವಿಗೆ ನ್ಯಾಯ ತಂದುಕೊಟ್ಟ ಮಗಳಾಗಿದ್ದಾಳೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..