ತಮ್ಮ ಮತದಾರ ಪ್ರಭುಗಳು ನೀಡಿದ ಮರುಜನ್ಮದ ಹುಟ್ಟುಹಬ್ಬಕ್ಕೆ ಸಂಭ್ರಮ, ಸಡಗರದ ಆಚರಣೆ..

ಜನ್ಮ ತಾರೀಖಿನ ನಿಜ ಹುಟ್ಟುಹಬ್ಬದ್ದು ಸರಳ ಆಚರಣೆ..

ತಮ್ಮ ಮತದಾರ ಪ್ರಭುಗಳು ನೀಡಿದ ಮರುಜನ್ಮದ ಹುಟ್ಟುಹಬ್ಬಕ್ಕೆ ಸಂಭ್ರಮ, ಸಡಗರದ ಆಚರಣೆ..

ಸದಾ ತಮ್ಮ ಜನರಿಗಾಗಿ ಸಂಭ್ರಮಿಸುವ ವಿಶೇಷ ರಾಜಕಾರಣಿ ಲಕ್ಷ್ಮಿ ಅಕ್ಕ ಹೆಬ್ಬಾಳ್ಕರ್..

ಅಜಿತ ಮಾದರ, ಸಾಮಾಜಿಕ ಕಾರ್ಯಕರ್ತರು ಬೆಳಗಾವಿ..

ಬೆಳಗಾವಿ : ಜನ್ಮ ದಿನಗಳು ಎನ್ನುವದು ಎಲ್ಲರಿಗೂ ಸಂಭ್ರಮ ಪಡುವ ದಿನವಾಗಿದ್ದು ಅವರವರ ಇಷ್ಟದಂತೆ ಸರ್ವರೂ ತಮ್ಮ ತಮ್ಮ ಹುಟ್ಟುಹಬ್ಬಗಳನ್ನು ಆಚರಣೆ ಮಾಡಿಕೊಳ್ಳುವರು, ಇನ್ನು ರಾಜಕಾರಣಿಗಳಂತೂ ಸ್ವಲ್ಪ ಅದ್ದೂರಿಯಾಗಿಯೇ ತಮ್ಮ ಬೆಂಬಲಿಗರೊಂದಿಗೆ ಆಚರಿಸಿಕೊಳ್ಳುವರು, ಆದರೆ ಅವರೆಲ್ಲರ ಆ ಸಂಭ್ರಮ ವರ್ಷದಲ್ಲಿ ಒಂದೇ ದಿನ ಇರುವದು ಸಾಮಾನ್ಯ.

ಆದರೆ ವರ್ಷದಲ್ಲಿ ಎರಡು ಸಲ ತಮ್ಮ ಜನ್ಮದಿನವನ್ನು ಆಚಾರಿಕೊಳ್ಳುವ ವಿಶೇಷ ರಾಜಕಾರಣಿ ಎಂದರೆ, ಅದು ನಮ್ಮ ರಾಜ್ಯ ಸರ್ಕಾರದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆಯರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಎಂದು ಹೇಳಲು ನಮಗೆಲ್ಲ ಹೆಮ್ಮೆ ಆಗುತ್ತದೆ ಎಂದು ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಅಜಿತ ಮಾದರ ಅವರು ಹೇಳಿಕೊಂಡಿದ್ದಾರೆ.

ಬಹುತೇಕ ರಾಜಕಾರಣಿಗಳಲ್ಲಿ ಸಚಿವೆ ಲಕ್ಷಿ ಹೆಬ್ಬಾಳಕರ ಅವರು ವಿಶೇಷವಾಗಿ ಕಾಣುತ್ತಾರೆ ಹೇಗೆ ಎಂದರೆ, ಪ್ರತಿವರ್ಷ ತಮ್ಮ ನಿಜವಾದ ಜನ್ಮ ದಿನಾಚರಣೆಯನ್ನು ಅಂದರೆ ಫೆಬ್ರುವರಿ 14ರ ದಿನವನ್ನು ಅತ್ಯಂತ ಸರಳವಾಗಿ ಆಚರಣೆ ಮಾಡಿಕೊಂಡು, ತಮಗೆ ರಾಜಕೀಯ ಮರುಜನ್ಮ ನೀಡಿದ ತಮ್ಮ ಕ್ಷೇತ್ರದ ಮತದಾರರಿಗಾಗಿ, ಅವರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ, ತಾವು ವಿಜಯಿಯಾದ ಮೇ 12ನೇ ತಾರೀಖಿನ ದಿನದಂದು ಅತೀ ಸಂಭ್ರಮ ಸಡಗರದಿಂದ ತಮ್ಮ ಕ್ಷೇತ್ರದ ನೆಚ್ಚಿನ ಜನರೊಂದಿಗೆ ತಮ್ಮ ಜನ್ಮ ದಿನಾಚರಣೆಯನ್ನು ಆಚರಣೆ ಮಾಡಿಕೊಳ್ಳುವರು.

ಚುನಾವಣೆಯಲ್ಲಿ ಮತನೀಡಿ ರಾಜಕೀಯವಾಗಿ ತಮಗೆ ಮರುಜನ್ಮ ನೀಡಿದ ಮತದಾರರಿಗೆ ಕೃತಜ್ಞತಾ ಪೂರ್ವಕವಾಗಿ ಜನ್ಮದಿನ ಆಚರಿಕೊಳ್ಳುವ ರಾಜ್ಯದ ವಿಶೇಷ ವಿರಳ ರಾಜಕಾರಣಿ, ಪ್ರತಿ ದಿನವೂ ಕ್ಷೇತ್ರದ ಜನರ ಪರವಾಗಿ ನಿಲ್ಲುವ, ಜನರ ಸಂತೋಷವೇ ನನ್ನ ಸಂತೋಷ ಎನ್ನುವ ನಮ್ಮೆಲ್ಲರ ಅಕ್ಕ ಲಕ್ಷಿ ಹೆಬ್ಬಾಳಕರ ಅಂತವರನ್ನು ಶಾಸಕಿಯಾಗಿ, ಸಚಿವೆಯಾಗಿ ರಾಜಕೀಯ ನಾಯಕಿಯಾಗಿ ಪಡೆದ ನಾವೆಲ್ಲರೂ ಅದೃಷ್ಟವಂತರು ಎಂದು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ.

ಜನ್ಮತಾರೀಖಿನ ಪ್ರಕಾರ ಇಂದು ಅಂದರೆ ಫೆಬ್ರುವರಿ 14ರಂದು ನಮ್ಮೆಲ್ಲರ ನೆಚ್ಚಿನ ನಾಯಕಿಯವರಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಜನ್ಮ ದಿನವಾಗಿದ್ದು, ಅಭಿಮಾನಿಗಳಾದ ನಾವು ಅವರಿಗೆ ತುಂಬು ಹೃದಯದ ಶುಭಾಶಯಗಳನ್ನು ತಿಳಿಸುತ್ತಾ, ದೇವರು ಅವರಿಗೆ ಮತ್ತಷ್ಟು ಆರೋಗ್ಯ ಕೀರ್ತಿ ಆಯಸ್ಸು ಯಶಸ್ಸು ನೀಡಿ ಸದಾ ಕಾಲ ಸುಖವಾಗಿ ಇರುವಂತೆ ಆಶೀರ್ವದಿಸಲಿ ಎಂದು ದೇವರಲ್ಲಿ ಪ್ರಾರ್ಥಿಸುಕೊಳ್ಳುತ್ತೇವೆ ಎಂದು ತಮ್ಮ ನೆಚ್ಚಿನ ನಾಯಕಿಯವರಿಗೆ ಅಜಿತ ಮಾದರ ಅವರು ಶುಭಾಶಯ ಕೋರಿದ್ದಾರೆ..

ಮಾನ್ಯ ಸಚಿವರಿಗೆ ಶುಭಾಶಯ ಕೋರಿ ತಮ್ಮ ಅನಿಸಿಕೆಗಳನ್ನು ಈ ಕೆಳಗಿಂನಂತೆ ಹೇಳಿಕೊಂಡಿದ್ದಾರೆ..

ಕರ್ನಾಟಕದ ಇತಿಹಾಸದಲ್ಲೆ ಮೊದಲ ರಾಜಕಾರಣಿ

ಕರ್ನಾಟಕ ರಾಜ್ಯ ರಾಜಕೀಯದ ಇತಿಹಾಸದಲ್ಲೇ ಮೊದಲಿಗರು ಮತ್ತು ಕೊನೆಯವರು ಎಂಬುವುದರಲ್ಲಿ ತಪ್ಪಾಗಲಾರದು ಕಾರಣ ಚುನಾಯಿತ ಪ್ರತಿನಿಧಿಯಾಗಿ ವಿಧಾನ ಸಭೆಗೆ ತಮ್ಮನ್ನು ತಮ್ಮ ಮತದಾರರು ಆಯ್ಕೆ ಮಾಡಿ ಕಳುಹಿಸಿದ ಹಿನ್ನೆಲೆಯಲ್ಲಿ ತಮ್ಮ ಹುಟ್ಟು ಹಬ್ಬವನ್ನು ಮತದಾರರಿಗೆ ಗೌರವ ರೂಪದಲ್ಲಿ ಸಮರ್ಪಿಸಲು ತಮ್ಮ ಹುಟ್ಟು ಹಬ್ಬವನ್ನು ಫೆಬ್ರವರಿ ೧೪ರ ಬದಲು ಮೇ ೧೨ ರಂದು ಆಚರಣೆ ಮಾಡಿಕೊಳ್ಳುವ ಕರ್ನಾಟಕದ ಮೊದಲ ರಾಜಕಾರಣಿ ಹಾಗೂ ಕರ್ನಾಟಕದ ಉಕ್ಕಿನ ಮಹಿಳೆ, ಅಭಿವೃದ್ಧಿಯ ಹರಿಕಾರಿಣಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಮನೆ ಮಗಳು ಪ್ರತಿಯೊಬ್ಬರನ್ನು ಪ್ರೀತಿ ವಿಶ್ವಾಸದಿಂದ ಕಾಣುವ ಕರುಣಾಮಯಿ ಬಂದ ಜನರ ಕಣ್ಣೀರು ಒರೆಸುವ ಮಹಾತಾಯಿ ಆಪ್ತಭಾಂದವಳು ಜನಸೇವಕಿ ಕಾಂಗ್ರೆಸ್ ಪಕ್ಷದ ಪ್ರಭಾವಿ ನಾಯಕಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮೀ ಅಕ್ಕಾ ಹೆಬ್ಬಾಳಕರ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು..

ಇಂತಿ ನಿಮ್ಮವ ಅಜಿತ ಮಾದರ..