ತರಬೇತಿ ಪಡೆದು ಉದ್ಯೋಗಿಗಳಾಗಿ: ಜಿಪಂ ಸಿಇಒ ರಾಹುಲ್ ಶಿಂಧೆ
ಬೆಳಗಾವಿ: ಅಣಬೆ ಬೇಸಾಯ, ಪ್ಲಂಬಿಂಗ್, ಗೃಹೋಪಯೋಗಿ ವಸ್ತುಗಳಾದ ಹಪ್ಪಳ, ಶ್ಯಾಂಡಿಗೆ, ಮಸಾಲಾ ಪೌಡರ್, ಜೂಟ್ ಬ್ಯಾಗ್, ಕೃಷಿ ಆಧಾರಿತ ತರಬೇತಿಗಳಾದ ಕೃಷಿ ಉದ್ಯಮಿ ಬ್ಯೂಟಿ ಪಾರ್ಲರ್, ಕಂಪ್ಯೂಟರ್ ಡಿಟಿಪಿ ತರಬೇತಿ, ಪೋಟೊಗ್ರಾಫಿ ಸೇರಿದಂತೆ ಮುಂತಾದ ಕೌಶಲ್ಯ ಆಧಾರಿತ ನಿರುದ್ಯೋಗಿಗಳು ತರಬೇತಿ ತೆಗೆದುಕೊಂಡು ಸ್ವ ಉದ್ಯೋಗಿಗಳಾಗಬೇಕು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಸೂಚಿಸಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಅಟೋ ನಗರ, ಬೆಳಗಾವಿಯಲ್ಲಿ (ಜು-23) ರಂದು ನಡೆದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಬೆಳಗಾವಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಿಂದ ಈಗಿರುವ ತರಬೇತಿಗಳನ್ನು ಉತ್ತಮ ರೀತಿಯಲ್ಲಿ ನೀಡುತ್ತಿದ್ದಾರೆ. ಇದೇ ರೀತಿ ಮುಂದುವರೆಸಿಕೊಂಡು ಹೋಗುವಂತೆ ಸೂಚಿಸಿದರು.
ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ನಿರ್ದೇಶಕ ಪ್ರವೀಣ ಕೆ.ಎಸ್. ಅವರು, ಮಹಿಳಾ ಹೋಲಿಗೆ, ಫಾಸ್ಟ್ ಫುಡ್ ತಯಾರಿಕೆ, ಎಂಬ್ರಾಡರಿ, ಆಡು ಸಾಕಾಣಿಕೆ, ಹೈನುಗಾರಿಕೆ, ಬ್ಯೂಟಿ ಪಾರ್ಲರ್, ಕೋಳಿ ಸಾಕಾಣಿಕೆ ಮತ್ತು ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಮುಂತಾದವುಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದು, ಸುಮಾರು 262 ಜನ ಸದಸ್ಯರಿಗೆ ತರಬೇತಿ ನೀಡಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂ. ಯೋಜನಾ ನಿರ್ದೇಶಕ ರವಿ ಎನ್ ಬಂಗಾರೆಪ್ಪನವರ, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸದಸ್ಯರಾದ ಸತ್ಯನಾರಾಯನ ಭಟ್, ಅಭಿನವ ಯಾದವ, ನಿತ್ಯಾನಂದ ಕುಲ್ಲೊಳಿ, ಸಂತೋಷ ನರಗುಂದ, ಮಿಥುನ ಬಾಬಾಶೆಟ್ ಜಿಲ್ಲಾ ಪಂಚಾಯತ ಎನ್.ಆರ್.ಎಲ್.ಎಮ್. ಡಿಪಿಎಮ್. ಮರಿಗೌಡ ಮತ್ತಿತರರು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಬಸಪ್ಪ ಕುರಗುಂದ..