ತಳವಾರ ಜಾತಿಯ ಜನರಿಗೆ ಎಸ್ಟಿ ಪ್ರಮಾಣಪತ್ರ ವಿತರಿಸಬೇಕು..

ತಳವಾರ ಜಾತಿಯ ಜನರಿಗೆ ಎಸ್ಟಿ ಪ್ರಮಾಣಪತ್ರ ವಿತರಿಸಬೇಕು..

ಉಚ್ಚ ನ್ಯಾಯಾಲಯದ ನಿರ್ದೇಶನ ಪಾಲಿಸಲು ಸಮುದಾಯದ ಮನವಿ..

ಬೆಳಗಾವಿ : ಗುರುವಾರ ದಿನಾಂಕ 12/09/2024ರಂದು “ಕರ್ನಾಟಕ ರಾಜ್ಯ ತಳವಾರ ಮಹಾಸಭಾದ” ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ, ಕರ್ನಾಟಕ ಉಚ್ಛ ನ್ಯಾಯಾಲಯದ ನಿರ್ದೇಶನದಂತೆ ತಳವಾರ ಜಾತಿಯ ಜನತೆಗೆ ಎಸ್ಟಿ (ಪರಿಶಿಷ್ಟ ಪಂಗಡ) ಪ್ರಮಾಣಪತ್ರ ನೀಡಬೇಕೆಂದು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ..

ರಾಜ್ಯ ಗೌರವಾನ್ವಿತ ಉಚ್ಛ ನ್ಯಾಯಾಲಯ wp ಸಂಖ್ಯೆ 13777/23ರಕ್ಕೆ, ದಿನಾಂಕ 12/08/2024ರಂದು ತಳವಾರ ಜಾತಿಯ ಪ್ರಮಾಣಪತ್ರಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ, ನೈಜ ತಳವಾರ ಜಾತಿಯವರ ದಾಖಲೆಗಳನ್ನು ಪರಿಶೀಲಿಸಿ, ಪರಿಶಿಷ್ಟ ಪಂಗಡದ (ST) ಪ್ರಮಾಣಪತ್ರ ನೀಡುವಂತೆ ರಾಜ್ಯ ಸರ್ಕಾರಕ್ಕೆ ಮತ್ತು ಸಂಭಂದಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಅದು ಇನ್ನು ಕಾರ್ಯರೂಪಕ್ಕೆ ಬರದ ಹಿನ್ನೆಲೆಯಲ್ಲಿ ಜಿಲ್ಲಾ ಘಟಕದ ಮುಖಂಡರು ಮತ್ತೆ ಮನವಿ ನೀಡಿದ್ದಾರೆ..

ಹಿಂದೆ ಒಂದು ಜಾತಿಯ ಸಂಘಟನೆಯವರು ಸರ್ಕಾರಕ್ಕೆ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ, ತಳವಾರ ಜನತೆಗೆ ಎಸ್ಟಿ ಪ್ರಮಾಣಪತ್ರ ನೀಡಬಾರದು ಎಂದು ಅನಾವಶ್ಯಕ ಒತ್ತಡ ಹಾಕಿದ್ದರಿಂದ ಅಧಿಕಾರಿಗಳು ಗೊಂದಲಕ್ಕಿಡಾಗಿದ್ದರು, ಆದರೆ ಮಾನ್ಯ ಉಚ್ಚ ನ್ಯಾಯಾಲಯ ಸಾಂವಿಧಾನಿಕವಾಗಿ ತಳವಾರ ಜಾತಿಯವರಿಗೆ ಎಸ್ಟಿ ಪ್ರಮಾಣಪತ್ರ ಕೊಡುವುದನ್ನು ಮುಂದುವರೆಸಬೇಕೆಂದು ನ್ಯಾಯಾಲಯ ನಿರ್ದೇಶಿಸಿದೆ ಎಂದು ಸಮುದಾಯದ ಮುಖಂಡರು ಸ್ಪಷ್ಟಪಡಿಸಿದ್ದಾರೆ..

ಅದೇರೀತಿ ಪ್ರಮಾಣಪತ್ರ ಕೊಡದಂತೆ ಉಚ್ಚ ನ್ಯಾಯಾಲಯ ಇನ್ನುವರೆಗೂ ಯಾವುದೇ ನಿರ್ದೇಶನವನ್ನು ಸರ್ಕಾರಕ್ಕೆ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ..

ಆದರಿಂದ ಸಂಭಂದಪಟ್ಟ ಅಧಿಕಾರಿಗಳು ತಳವಾರ ಜಾತಿಯ ಜನಕ್ಕೆ ಎಸ್ಟಿ ಪ್ರಮಾಣಪತ್ರ ನೀಡಿ, ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯ ಒದಗುವಂತೆ ಮಾಡಬೇಕು ಎಂದು ರಾಜ್ಯ ತಳವಾರ ಮಹಾಸಭಾದ ಬೆಳಗಾವಿ ಜಿಲ್ಲಾ ಘಟಕದ ಪ್ರಮುಖರು ಮನವಿ ಮಾಡಿಕೊಂಡಿದ್ದಾರೆ..

ಈ ಸಂದರ್ಭದಲ್ಲಿ ತಳವಾರ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷರಾದ ಪ್ರಕಾಶ್ ಕೋಳಿ, ಮಲ್ಲಿಕಾರ್ಜುನ್ ದಳವಾಯಿ, ಕುಮಾರ ಗಸ್ತಿ, ಮತ್ತಿತರರು ಭಾಗಿಯಾಗಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..