ತಾನು, ತಮ್ಮವರೆಂಬ ಸ್ವಾರ್ಥತೆಯ ಬದುಕಲ್ಲಿ ನಮ್ಮಲ್ಲೊಬ್ಬರು ಪರಿಸರ ಹಾಗೂ ಸ್ವಚ್ಛತಾ ಸ್ನೇಹಿ..
ಪರಿಸರ, ಸ್ವಚ್ಛತೆ ಹಾಗೂ ನಶಿಸಿದ ದೇವರ ವಿಗ್ರಹಗಳ ಸಂರಕ್ಷಣೆಯಿಂದ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವ ಆದರ್ಶ ಜೀವಿ..
ವಿರೇಶ ಬಸಯ್ಯ ಹಿರೇಮಠರ ಕಳಕಳಿಯ ಕಾರ್ಯಕ್ಕೆ ಸಾರ್ಬಜನಿಕರ ಮೆಚ್ಚುಗೆ..
ಬೆಳಗಾವಿ : ನಾವು ಪರಿಸರವನ್ನು ಸ್ವತ್ಛವಾಗಿಟ್ಟುಕೊಳ್ಳುವುದು, ಹಸುರಿನ ಸಂರಕ್ಷಿಸಬೇಕಾದ ತುರ್ತಿನ ಸಂಗತಿಯಾಗಿದೆ, ಕುಟುಂಬ, ನೆರೆಹೊರೆ, ಸ್ನೇಹಿತರಲ್ಲಿ ಈ ವಿಚಾರ ವಿನಿಮಯಗೊಂಡು ಕಾರ್ಯರೂಪಕ್ಕೆ ಬರಬೇಕಿದೆ ಎಂದು ಸರ್ವಲೋಕಾ ಸೇವಾ ಫೌಂಡೇಶನ್ ಸಂಸ್ಥಾಪಕ, ಅಧ್ಯಕ್ಷ ವೀರೇಶ ಬಸಯ್ಯ ಹಿರೇಮಠ ಹೇಳಿದರು

ಶನಿವಾರ ಕಾಕತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪತ್ರಿಗಿಡದ ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿ ಮಾತನಾಡಿದರು.ಪರಿಸರ ನಾಶದಿಂದ ಪರಿಸರದಲ್ಲಿ ಏರು ಪೇರು ಉಂಟಾಗಿ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದೇವೆ, ಆದ್ದರಿಂದ ಇನ್ನಾದರು ನಾವು ಪರಿಸರ ರಕ್ಷಣೆ ಬಗ್ಗೆ ಜಾಗೃತರಾಗೋಣ, ಮಕ್ಕಳಲ್ಲಿ ಪರಿಸರ ಪ್ರಜ್ಞೆ ಬೆಳೆಸೋಣ, ಎಲ್ಲರೂ ಪರಿಸರ ಬಗ್ಗೆ ಜಾಗೃತಿ ಮೂಡಿಸಬೇಕು ಎಂದರು.

ಈ ಸಂದರ್ಭದಲ್ಲಿ ಕಾಕತಿ ಸಿಪಿಐ ಉಮೇಶ ಎಂ, ಪಿಎಸ್ಐ ಮೃತ್ಯುಂಜಯ ಮಠದ, ಮಂಜುನಾಥ ಹುಲಕುಂದ, ಪ್ರಕಾಶ ಬಲಾಲ, ಅನಿಲ್ ಪಾವಸೆ, ಬಾಳು ಮೇಸ್ತ್ರಿ, ಬಾಳು ಕಣಬರಕ, ಜೈರಾಮ ಪಾಟೀಲ್ ಹಾಗೂ ಕಂಗ್ರಾಳಿ ಗಣೇಶ ಮಂಡಳದ ಸದಸ್ಯರು ಉಪಸ್ಥಿತರಿದ್ದರು.
ವರದಿ ಪ್ರಕಾಶ ಬಸಪ್ಪ ಕುರಗುಂದ..