ತಾಲ್ಲೂಕು ‌ಮಟ್ಟದ ನಾಟಕ ಸ್ಪರ್ಧೆ: ಶಿವ‌ಬಸವೇಶ್ವರ ಪ್ರೌಢಶಾಲೆ ಪ್ರಥಮ.

ತಾಲ್ಲೂಕು ‌ಮಟ್ಟದ ನಾಟಕ ಸ್ಪರ್ಧೆ:
ಶಿವ‌ಬಸವೇಶ್ವರ ಪ್ರೌಢಶಾಲೆ ಪ್ರಥಮ

ಬೆಳಗಾವಿ: ಸಾರ್ವಜನಿಕ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ತಾಲ್ಲೂಕು ಮಟ್ಟದ ‌ವಿಜ್ಞಾನ ನಾಟಕ ಸ್ಪರ್ಧೆಯಲ್ಲಿ ಬೈಲಹೊಂಗಲ‌ ತಾಲೂಕಿನ ಶಿವಬಸವೇಶ್ವರ ಪ್ರೌಢಶಾಲೆ ವಿದ್ಯಾರ್ಥಿಗಳು ಪ್ರಥಮ‌ ಸ್ಥಾನ ಪಡೆದುಕೊಂಡಿದ್ದಾರೆ.

ಮಂಗಳವಾರ ಸಿಆರ್ ಸಿ ಕಚೇರಿಯಲ್ಲಿ ಏರ್ಪಡಿಸಿದ್ದ ನಾಟಕ‌ ಸ್ಪರ್ಧೆಯಲ್ಲಿ ಶಿವಬಸವೇಶ್ವರ ಪ್ರೌಢಶಾಲೆಯ ವಿದ್ಯಾರ್ಥಿಗಳು ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಮಾಡಿದ ನಾಟಕ ಎಲ್ಲರ ಮೆಚ್ಚುಗೆಯೊಂದಿಗೆ ಪ್ರಥಮ‌ ಸ್ಥಾನ ಪಡೆದರು.

ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವ‌ ಬೆಳೆಸುವ ಉದ್ದೇಶದಿಂದ ‌ಈ‌ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಬೈಲಹೊಂಗಲ‌ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಈ ನಾಟಕ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ನಾಟಕ ಸ್ಪರ್ಧೆಯಲ್ಲಿ ‌ಶ್ರೇಯಾ ಭಾಂವಿಹಾಳ, ವೈಷ್ಣವಿ ವಾರಿ, ಮಧು ತಿರಕನ್ನವರ, ಶ್ರೇಯಾ ಜಿಡ್ಡಿಮನಿ, ಅಕ್ಷತಾ ಮರದ, ತೇಜಶ್ವಿನಿ ಹೊಳೆಪ್ಪನವರ, ಸೃಷ್ಟಿ ವಕ್ಕುಂದ ಭಾಗವಹಿಸಿದ್ದರು. ಈ ವಿದ್ಯಾರ್ಥಿಗಳಿಗೆ ವಿಜ್ಞಾನ ಶಿಕ್ಷಕಿ ಶ್ರೀಮತಿ ನೇತ್ರಾ ಅಂಗಡಿ ಮಾರ್ಗದರ್ಶನ ನೀಡಿದ್ದರು.

ವಿದ್ಯಾರ್ಥಿಗಳ ಈ ಸಾಧನೆಗೆ ಮುಖ್ಯೋಪಾಧ್ಯಾಯ ರವೀಂದ್ರ ಮಧಾಳೆ, ಸ್ಥಳೀಯ ಆಡಳಿತ ಮಂಡಳಿ ಅಧ್ಯಕ್ಷರು, ಸದಸ್ಯರು, ಶಿಕ್ಷಕ ವರ್ಗ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
….
ಸಂತೋಷ ಮೇತ್ರಿ, ಅಗಸಗೆ