ತ್ರಿಪದಿ ಕವಿ ಸರ್ವಜ್ಞರ 504ನೆಯ ಜಯಂತಿಯ ಅರ್ಥಪೂರ್ಣ ಆಚರಣೆಗೆ ಸಿದ್ಧತೆ..

ತ್ರಿಪದಿ ಕವಿ ಸರ್ವಜ್ಞರ 504ನೆಯ ಜಯಂತಿಯ ಅರ್ಥಪೂರ್ಣ ಆಚರಣೆಗೆ ಸಿದ್ಧತೆ..

ಬೆಳಗಾವಿ : ಮಂಗಳವಾರ ದಿನಾಂಕ 20/02/2024 ರಂದು
ಜಿಲ್ಲಾ ಆಡಳಿತ, ಕರ್ನಾಟಕ ಯುವ ಸೈನ್ಯ ಹಾಗೂ ಕರ್ನಾಟಕ ಪ್ರದೇಶ ಕುಂಬಾರರ ಸಂಘದ ಜಿಲ್ಲಾ ಘಟಕದ ವತಿಯಿಂದ ಇಲ್ಲಿನ ಕುಮಾರ ಗಂಧರ್ವ ರಂಗಮಂದಿರದಲ್ಲಿ ಫೆ.೨೦ ರಂದು ತ್ರಿಪದಿ ಕವಿ ಸರ್ವಜ್ಞ ರವರ ೫೦೪ ನೇ ಜಯಂತಿ ಉತ್ಸವ ಆಯೋಜಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ನಿಂಗಪ್ಪ ಕುಂಬಾರ ಹೇಳಿದರು.

ನಗರದ ಖಾಸಗಿ ಹೋಟೆಲ್‌ನಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೨೦೨೨-೨೦೨೩ರ ಶೈಕ್ಷಣಿಕ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ, ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಗುವುದು ಎಂದರು.

ಇದೇ ಸಂದರ್ಭದಲ್ಲಿ ಸಮಾಜದ ಕಲಾವಿಧರಿಂದ ಹಾಗೂ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಪ್ರದರ್ಶನ ನಡೆಯಲಿದೆ ಎಂಬ ಮಾಹಿತಿ ನೀಡಿದ್ದಾರೆ..

ಸುದ್ದಿಗೋಷ್ಠಿಯಲ್ಲಿ ರಮೇಶ್ ಕುಂಬಾರ, ಸಂತೋಷ ಕುಂಬಾರ, ಮಾಂತೇಶ್ ಕುಂಬಾರ, ಐ.ಎಸ್.ಕುಂಬಾರ, ಸಿ.ಬಿ.ಯಡಿಯೂರು, ಅಣ್ಣಪ್ಪ ಕುಂಬಾರ, ಶಿವಾನಂದ ಕುಂಬಾರ ಇದ್ದರು.

ವರದಿ ಪ್ರಕಾಶ ಕುರಗುಂದ..