ತ್ವರಿತ ಅಭಿವೃದ್ಧಿ ಕಾರ್ಯಕ್ಕೆ ಮತ್ತೊಂದು ಹೆಸರೇ ಮೋದಿಯವರು..
ಬೆಳಗಾವಿಗೆ ವಂದೇ ಭಾರತ ವಿಷಯದಲ್ಲಿ ನುಡಿದಂತೆ ನಡೆದ ಸಂತಸ ನನಗಿದೆ..
ಸಂಸದ ಜಗದೀಶ್ ಶೆಟ್ಟರ್..
ಬೆಳಗಾವಿ : ಬೆಳಗಾವಿ ಜಿಲ್ಲೆಯ ನಗರವಾಸಿಗಳ ಬಹುದಿನಗಳ ಕನಸು ಒಂದೇ ಭಾರತ ರೈಲು ಬೆಳಗಾವಿಗೆ ಬರುವದಾಗಿತ್ತು, ನಮ್ಮ ನೆಚ್ಚಿನ ಪ್ರಧಾನಿ ನರೇಂದ್ರ ಮೋದಿಯವರ ತ್ವರಿದ ಗತಿಯ ಕಾರ್ಯವೈಖರಿಯ ಫಲವಾಗಿ ಇಂದು ಬೆಳಗಾವಿ ಜಿಲ್ಲೆಯ ಜನತೆಗೆ “ವಂದೇ ಭಾರತ” ರೈಲಿನ ಸೇವೆಯು ನಾಳೆಯಿಂದ ಲಭಿಸುವಂತಾಗಿದೆ ಎಂದು ಸಂಸದ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಶನಿವಾರ ನಗರದ ಖಾಸಗಿ ಹೋಟೆಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸದ ಜಗದೀಶ್ ಶೆಟ್ಟರ್ ಅವರು
ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗಾಗಿ ಮೊದಲೇ ಹೇಳಿದಂತೆ ಅನೇಕ ಯೋಜನೆ ಹಾಕಿಕೊಂಡಿದ್ದು ಅದರಲ್ಲಿ ಈ ಬಹುಮುಖ್ಯ ವಂದೇ ಭಾರತ ರೈಲನ್ನು ಬೆಳಗಾವಿಯಿಂದ ಬೆಂಗಳೂರಿಗೆ ಪಯಣಿಸುವಂತೆ ಮಾಡುವುದು ಪ್ರಮುಖವಾಗಿತ್ತು, ಅದು ನಾಳೆ ನೆರವೇರುತಿದ್ದು ಸಂತಸ ತಂದಿದೆ ಎಂದಿದ್ದಾರೆ, ಈ ವಿಚಾರವಾಗಿ ಹಿಂದೆ ಅನೇಕ ಪ್ರಯತ್ನ ಮಾಡಿದ್ದು, ಜೂನ್ 28 2024ಕ್ಕೆ ರೈಲು ಸಚಿವರನ್ನು ಬೇಟಿ ಮಾಡಿ ವಿಷಯ ತಿಳಿಸಿದ್ದೆ, ಆಗ ಅವರು ಭರವಸೆ ನೀಡಿದ್ದರು.
ಧಾರವಾಡದಿಂದ ಬೆಂಗಳೂರಿಗೆ ಇದ್ದ ವಂದೇ ಭಾರತ ರೈಲನ್ನು ವಿಸ್ತರಿಸುವಂತೆ ನಾವು ಪದೇ ಪದೇ ಪ್ರಯತ್ನ ಮಾಡುತ್ತಾ ಇದ್ದೆವು, ನಂತರ ವಿಸ್ತರಣೆ ಕುರಿತಾಗಿ ಪ್ರಧಾನಿಯವರ ಜೊತೆಗೂ ಚರ್ಚೆ ಮಾಡಿದ್ದೆ, ಆಗ ರೇಲ್ವೆ ಮಂತ್ರಿಗಳು ಹೊಸ ರೈಲನ್ನು ಕೊಡುತ್ತೇವೆ ಎಂದು 08/05/2025ಕ್ಕೆ ಘೋಷಣೆ ಮಾಡಿದರು, ಆದರೆ ಅದೂ ಕೂಡಾ ಇಲ್ಲಿಯವರೆಗೆ ಆಗಿರಲಿಲ್ಲ..
ಒಂದೇ ಭಾರತ ದೇಶದ ಅತೀ ಪ್ರಮುಖವಾದ ಹಾಗೂ ಯಶಸ್ವಿಯಾದ ರೈಲು ಆಗಿದ್ದು, ಮೂರು ತಿಂಗಳಾದರೂ ಇನ್ನು ನಮ್ಮ ಕೆಲಸ ಆಗಿಲ್ಲ ಎಂದು ಪ್ರಧಾನಿ ಮೋದಿ ಅವರ ಹತ್ತಿರ ಹೇಳಿದಾಗ, ಕೇವಲ ಒಂದೇ ದಿನದಲ್ಲಿ ಅದನ್ನು ಲೋಕಾರ್ಪಣೆ ಮಾಡುವ ಮಹತ್ವದ ನಿರ್ಧಾರವನ್ನು ತಗೆದುಕೊಂಡು ನಾಳೆ ಅದಕ್ಕೆ ಚಾಲನೆ ಕೂಡಾ ನೀಡುವವರಿದ್ದಾರೆ ಎಂದರು.

ನಾಳೆ ರವಿವಾರ 10ನೇ ತಾರಿಕಿನಂದು ಬೆಂಗಳೂರಿನಲ್ಲಿ ಮೂರು ರೈಲುಗಳಿಗೆ ಪ್ರಧಾನಿಯವರು ಚಾಲನೆ ನೀಡುವವರಿದ್ದು, ಅದರಲ್ಲಿ ಬೆಂಗಳೂರು ಬೆಳಗಾವಿ ರೈಲು ಕೂಡಾ ಇದೆ, ಅಭಿವೃದ್ಧಿ ವಿಷಯವಾಗಿ ತ್ವರಿತ ನಿರ್ಧಾರಕ್ಕೆ ಮತ್ತೊಂದು ಹೆಸರೇ ಮೋದಿ ಅವರು ಎಂದು ಬಣ್ಣಿಸಿದರು.
ಲೋಕಸಭೆ ಚುನಾವಣೆ ವೇಳೆ ಇದು ನನ್ನ ಜವಾಬ್ದಾರಿ ಎಂದು ಜನರಿಗೆ ಮಾತು ನೀಡಿದ್ದೆ, ಈಗ ಅದನ್ನು ಕಾರ್ಯಗತ ಮಾಡಿದ್ದಕ್ಕೆ ತುಂಬಾ ಸಂತಸ ಎನಿಸುತ್ತಿದೆ ಎಂದ ಸಂಸದರು, ಇದರಲ್ಲಿ ಪ್ರಧಾನಿಯಾದಿಯಾಗಿ, ಪಕ್ಷದ ಎಲ್ಲಾ ಪ್ರಮುಖರು, ಹಾಲಿ ಮಾಜಿ ಶಾಸಕರು, ಎಲ್ಲರ ವಿಶೇಷ ಪ್ರಯತ್ನದಿಂದ ಈ ವಂದೇ ಭಾರತ ರೈಲು ಬೆಳಗಾವಿಗೆ ದೊರಕಿದೆ, ಅವರೆಲ್ಲರಿಗೂ ಧನ್ಯವಾದ ಎಂದರು.
ವಂದೇ ಭಾರತ ರೈಲು ಬೆಂಗಳೂರಿನಿಂದ ಬೆಳಗಾವಿಗೆ ನಾಳೆ ಸಾಯಂಕಾಲ ಆರುವರೆಗೆ ಆಗಮಿಸುತ್ತಿದ್ದು, ಬೆಳಗಾವಿಯ ಸಮಸ್ತ ಜನತೆ ಆಗಮಿಸಿ ಅದನ್ನು ಸ್ವಾಗತ ಮಾಡಿಕೊಳ್ಳಬೇಕು ಮುಂದೆ ಉತ್ತಮ ಗುಣಮಟ್ಟದ ಈ ರೈಲಿನ ಸೇವೆಯನ್ನು ಎಲ್ಲರೂ ಪಡೆಯಬೇಕು ಎಂದು ಜನತೆಯಲ್ಲಿ ಮನವಿ ಮಾಡುವೆ ಎಂದರು.
ಇನ್ನು ರಾಹುಲ ಗಾಂಧಿ ಅವರು ಚುನಾವಣಾ ಅಕ್ರಮ ಹಾಗೂ ನಕಲಿ ಮತ ಚಲಾವಣೆ ಬಗ್ಗೆ ಇತ್ತೀಚೆಗೆ ಅವರು ನಡೆದುಕೊಳ್ಳುವ ನಡುವಳಿಕೆಗಳು ಅವರ ಅಪ್ರಬುದ್ಧ ನಾಯಕತ್ವವನ್ನು ತೋರಿಸುತ್ತದೆ,
ಕಾಂಗ್ರೆಸ್ ಪಕ್ಷ ಒಂದು ವಿರೋಧ ಪಕ್ಷವಾಗಿ ಯಾವ ರೀತಿ ಕಾರ್ಯ ಮಾಡಬೇಕೋ ಅದನ್ನು ಮಾಡ್ತಾ ಇಲ್ಲಾ, ಎಲ್ಲಿ ಮಾತಾಡಬೇಕೋ ಅಲ್ಲಿ ಮಾತನಾಡುವುದಿಲ್ಲ, ಬೀದಿಯಲ್ಲಿ ಚರ್ಚೆ ಮಾಡುತ್ತಾರೆ, ಸಾಮಾನ್ಯ ಜ್ಞಾನವೇ ಇಲ್ಲದಂತೆ ವರ್ತಿಸುತ್ತಾರೆ.
ರಾಹುಲ್ ಗಾಂಧಿಯವರಿಂದ ಮೂರ್ಖತನದ ಪರಮಾವಧಿಯ ನಡುವಳಿಕೆಗಳು ಆಗುತ್ತಿದ್ದು, ಕಾಂಗ್ರೆಸ್ ಹತಾಶೆಯಿಂದ ಸುಳ್ಳು ಆರೋಪ ಮಾಡುತ್ತಿದೆ, ಇದರಲ್ಲಿ ಯಾವುದೇ ಹುರುಳಿಲ್ಲ, ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರ್ಕಾರ ಉತ್ತಮ ಆಡಳಿತ ನೀಡುತ್ತಿದೆ ಎಂದು ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..