ದೆಹಲಿಗೆ ಹೋಗಿ, ರಾಜ್ಯದ ವಿದ್ಯಮಾನಗಳನ್ನು ವರಿಷ್ಠರ ಗಮನಕ್ಕೆ ತರುವೆ…

ದೆಹಲಿಗೆ ಹೋಗಿ, ರಾಜ್ಯದ ವಿದ್ಯಮಾನಗಳನ್ನು ವರಿಷ್ಠರ ಗಮನಕ್ಕೆ ತರುವೆ..

ಉತ್ತರ ಕರ್ನಾಟಕದ ಸಮಸ್ಯೆ ಹಾಗೂ ಅಭಿವೃದ್ದಿಯ ಬಗ್ಗೆ ಚರ್ಚೆ ಆಗೇ ಆಗುತ್ತದೆ..

ಶಾಸಕ ಬಸನಗೌಡ ಪಾಟೀಲ್ ಯತ್ನಾಳ್

ಬೆಳಗಾವಿ ಸುವರ್ಣ ಸೌಧ : ಚಳಿಗಾಲ ಅಧಿವೇಶನ ಮೂರನೇ ದಿನ ಮಾಧ್ಯಮದೊಂದಿಗೆ ಮಾತನಾಡಿದ ಶಾಸಕ ಬಸನಗೌಡ ಪಾಟಲ್ ಯತ್ನಾಳ ಅವರು ಇತ್ತೀಚಿನ ಕೆಲವು ದಿನಗಳಲ್ಲಿ
ಕರ್ನಾಟಕದ ಬಿಜೆಪಿ ಪಕ್ಷದಲ್ಲಿ ಏನು ನಡೆದಿದೆ ಎಂದು ತಿಳಿಸುತ್ತೇನೆ, ಎರಡು ವ್ಯಕ್ತಿಗಳಿಂದ ಬಿಜೆಪಿಯಲ್ಲಿ ಗೊಂದಲ ಮತ್ತು ಗದ್ದಲ ಎರಡೂ ಆಗಿದೆ, ಅದನ್ನು ಸರಿಪಡಿಸುವದಕ್ಕಾಗಿ ದಿಲ್ಲಿಗೆ ಪಯಣ ಎಂದಿದ್ದಾರೆ..

ಭಾರತದಲ್ಲಿ ಇರಬೇಕಾದರೆ ಇಲ್ಲಿಯ ಸಂವಿಧಾನಕ್ಕೆ ಹೊಂದಿಕೊಂಡು, ಎಲ್ಲಾ ಸಮುದಾಯವನ್ನು ಗಣನೆಗೆ ತೆಗೆದುಕೊಂಡು ಆಡಳಿತ ನಡೆಸಬೇಕು, ಕೇವಲ ಮುಸ್ಲಿಮರ ಓಲೈಕೆ ಮಾತು, ಕಾರ್ಯಗಳು ಸರಿಯಲ್ಲ, ಸಿಎಂ ಅವರು ಇಡೀ ಜನಾಂಗದ ನಾಯಕ ಆಗಿರಬೇಕು, ವೋಟ್ ಬ್ಯಾಂಕ್ ಸಲುವಾಗಿ ಒಂದೇ ಸಮುದಾಯಕ್ಕೆ ಯೋಜನೆಗಳನ್ನು ಘೋಷಿಸಬಾರದು ಎಂದರು.

ಹುಬ್ಬಳ್ಳಿಯಲ್ಲಿ ಶಂಕಿತ ಉಗ್ರಗಾಮಿಗಳು ಇರುವ ಸಭೆಯಲ್ಲಿ ಸಿಎಂ ಏಕೆ ಇರಬೇಕು? ಸಿಎಂ ಭಾಗಿಯಾದ ಹುಬ್ಬಳ್ಳಿ ಸಭೆಯಲ್ಲಿ ಐಎಸ್ಐ ಸಂಘಟನೆಯ ಶಂಕಿತ ಉಗ್ರ ಕೂಡಾ ಇದ್ದಿದ್ದು, ಅಂತಹ ವೇದಿಕೆಯನ್ನು ಏಕೆ ಏರಿದ್ದು? ಭಯೋತ್ಪಾದಕನ ನಂಟು ಇವರಿಗೇಕೆ? ಇದೆಲ್ಲವನ್ನೂ ರಾಷ್ಟ್ರ ನಾಯಕರ ಗಮನಕ್ಕೆ ತರುತ್ತೇನೆ ಎಂದಿದ್ದಾರೆ..

ಉಪನಾಯಕ ಹುದ್ದೆ ನಮ್ಮ ಸಮುದಾಯಕ್ಕೆ ಸಿಕ್ಕರೆ ಅದರಲ್ಲೇನಿದೆ ಲಾಭ, ಬದನೆಕಾಯಿ, ವಾಜಪೇಯಿ ಅವಧಿಯಲ್ಲಿ ನಾನು ಮಂತ್ರಿಯಾದವನು, ಯಡಿಯೂರಪ್ಪನ ಅವಧಿಯಲ್ಲಿ ಒಂದು ಸಾರಿನೂ ಮಂತ್ರಿ ಪದವಿ ಕೇಳಲಿಲ್ಲ, ಈಗ ನನಗ್ಯಾಕೆ ಎಂದರು.

ಇಲ್ಲಿ ಸುವರ್ಣಸೌಧ ಆದಾಗಿನಿಂದ ಕೊನೆಯ ಎರಡು ದಿವಸ ಉತ್ತರ ಕರ್ನಾಟಕದ ಬಗ್ಗೆ ಚರ್ಚೆ ಆಗುತ್ತಿತ್ತು, ಆದರೆ ನನ್ನ ಪ್ರಯತ್ನದಿಂದ ಇಂದಿನಿಂದ ಉತ್ತರ ಕರ್ನಾಟಕ ಅಭಿವೃದ್ದಿ ಹಾಗೂ ಬರಗಾಲದ ಚರ್ಚೆ ಆಗುತ್ತದೆ, ಇಡೀ ಕರ್ನಾಟಕ ಒಂದೇ, ಇಲ್ಲಿ ಬೇದಬಾವ ಇಲ್ಲಾ, ಉತ್ತರ ಕರ್ನಾಟಕದ ಬಗ್ಗೆ ಸಮಗ್ರವಾದ ಚರ್ಚೆ ಆಗುತ್ತದೆ, ಸಭಾಪತಿಗಳೊಂದಿಗೆ ಮಾತುಕತೆ ಆಗಿದೆ ಇಂದಿನಿಂದ ಚರ್ಚೆ ಆಗುತ್ತದೆ ಎಂದಿದ್ದಾರೆ..

ಮೊದಲಿನಿಂದ ದಕ್ಷಿಣ ಕರ್ನಾಟಕದ ಜನಪ್ರತಿನಿಧಿಗಳಿಗೆ ಹೋಲಿಸಿದರೆ ನಮ್ಮ ಉತ್ತರ ಕರ್ನಾಟಕದ ಜನಪ್ರತಿನಿಧಿಗಳು ಸ್ವಲ್ಪ ವಿಚಾರ ಮಂಡನೆಯಲ್ಲಿ, ಚರ್ಚೆಯಲ್ಲಿ ಹಿಂದೆ ಇದ್ದರು, ಈಗ ಪರಿಸ್ಥಿತಿ ಬದಲಾಗಿದೆ, ಇಲ್ಲಿಯ ಜನರು ಹಾಗೂ ಜನಪ್ರತಿನಿಧಿಗಳು ಜಾಗೃತರಾಗಿದ್ದಾರೆ. ಈಗ ಚರ್ಚೆ ಸಮಗ್ರವಾಗಿ ಆಗಬೇಕು ಎಂದು ಜನರ ಅಪೇಕ್ಷೆ ಆಗಿದೆ, ಆದ ಕಾರಣ ಉತ್ತರ ಕರ್ನಾಟಕದ ಸಮಸ್ಯೆ ಹಾಗೂ ಅಭಿವೃದ್ದಿಯ ಚರ್ಚೆಗಳು ಈ ಅಧಿವೇಶನದಲ್ಲಿ ಆಗುತ್ತವೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು..

ವರದಿ ಪ್ರಕಾಶ ಕುರಗುಂದ..