ದೆಹಲಿಯಲ್ಲಿ ನಡೆದ ಸ್ಮಾರ್ಟ್ ಸಿಟಿ-2 ಕಾರ್ಯಾಗಾರದಲ್ಲಿ ಬೆಳಗಾವಿ ಅಧಿಕಾರಿಗಳು..

ದೆಹಲಿಯಲ್ಲಿ ನಡೆದ ಸ್ಮಾರ್ಟ್ ಸಿಟಿ-2 ಕಾರ್ಯಾಗಾರದಲ್ಲಿ ಬೆಳಗಾವಿ ಅಧಿಕಾರಿಗಳು..

ಮಹಾನಗರ ಪಾಲಿಕೆ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಭಾಗಿ..

ಬೆಳಗಾವಿ : ಬುಧವಾರ ದಿನಾಂಕ 28/01/2026 ರಂದು ದೆಹಲಿಯ ಹೆಬಿಟೇಟ್ ಸೆಂಟರನಲ್ಲಿ ಜರುಗಿದ ಸ್ಮಾರ್ಟ್ ಸಿಟಿ -2 ಯೋಜನೆಯ ಮಹತ್ವದ ಕಾರ್ಯಗಾರದಲ್ಲಿ ಬೆಳಗಾವಿಯ ಮಹಾನಗರ ಪಾಲಿಕೆಯ ಹಾಗೂ ಸ್ಮಾರ್ಟ್ ಸಿಟಿ ಅಧಿಕಾರಿಗಳು ಭಾಗಿಯಾಗಿದ್ದರು.

ಬೆಳಗಾವಿಯಿಂದ ಪಾಲಿಕೆಯ ಆಯುಕ್ತರಾದ ಕಾರ್ತಿಕ ಎಮ್, ಸ್ಮಾರ್ಟ್ ಸಿಟಿಯ ಎಂ ಡಿ ಯವರಾದ ಕವಿತಾ ವಾರಂಗಲ್, ಪಾಲಿಕೆಯ ಪರಿಸರ ಅಭಿಯಂತರರಾದ ಹಣಮಂತ ಕಲಾದಗಿ ಹಾಗೂ ಅಭಿವೃದ್ಧಿ ಅಭಿಯಂತರರಾದ ಸಿದಗೌಡ ಪಾಟೀಲ ಅವರೆಲ್ಲ ಈ ವಿಶೇಷ ಕಾರ್ಯಾಗಾರದಲ್ಲಿ ಭಾಗಿಯಾಗಿದ್ದರು.

ತಮಿಳುನಾಡು, ಕೇರಳ, ಆಂಧ್ರ ಪ್ರದೇಶ, ತೆಲಂಗಾಣ ಹಾಗೂ ಇನ್ನಿತರ ರಾಜ್ಯಗಳ ನಗರಾಭಿವೃದ್ಧಿ ಇಲಾಖೆಯ ಹಾಗೂ ಸಂಸ್ಥೆಗಳ ಅಧಿಕಾರಿಗಳು ಭಾಗಿಯಾಗಿರುವ ಈ ಕಾರ್ಯಾಗಾರ ನಗರದ ಉನ್ನತಿಕರಣ ಹಾಗೂ ಆಧುನಿಕರಣದ ಅನೇಕ ಅಂಶಗಳ ವೇದಿಕೆಯಾಗಿದ್ದು ಇದರ ಫಲವಾಗಿ ಬೆಳಗಾವಿ ನಗರ ಸ್ವಚ್ಛ, ಶಿಸ್ತಿನ, ಸುಸಜ್ಜಿತ ನಗರವಾಗಿ ಹೊರಹೋಮ್ಮಿ, ಸಾರ್ವಜನಿಕರಿಗೆ ಗುಣಮಟ್ಟದ ಮೂಲಭೂತ ಸೌಲಭ್ಯ ಸೌಕರ್ಯ ಸಿಗುವಂತಾಗಲಿ ಎಂಬುದೇ ಬೆಳಗಾವಿ ನಾಗರಿಕರ ಆಶಯ…

ವರದಿ ಪ್ರಕಾಶ್ ಬಿ ಕೆ..

Leave a Reply

Your email address will not be published. Required fields are marked *