ದೇವಿಗೆ ಪೂಜೆ, ಪುನಸ್ಕಾರ ಮಾಡಿ, ಆಶೀರ್ವಾದ ಪಡೆಯಿರಿ,,

ದೇವಿಗೆ ಪೂಜೆ, ಪುನಸ್ಕಾರ ಮಾಡಿ, ಆಶೀರ್ವಾದ ಪಡೆಯಿರಿ,,

ಆದರೆ ಪ್ರಾಣಿಬಲಿ ನಡೆದರೆ ಶಿಸ್ತು ಕ್ರಮ..

ಅಧಿಕಾರಿಗಳ ತಿಳಿಹೇಳಿಕೆ..

ಬೆಳಗಾವಿ : ತಾಲೂಕಿನ ಉಚಗಾಂವ ಗ್ರಾಮದ ಶ್ರೀ ಮಳೆಕರ್ನಿ ದೇವಿಯ ದೇವಸ್ಥಾನದಲ್ಲಿ ಪ್ರತಿ ಮಂಗಳವಾರ ಹಾಗೂ ಶುಕ್ರವಾರ ಹೊರಗಿನ ಭಕ್ತರು ಬಂದು, ಪ್ರಾಣಿ ಬಲಿ ಮಾಡುವುದರಿಂದ ಗ್ರಾಮದಲ್ಲಿ ಬಹಳಷ್ಟು ನೈರ್ಮಲ್ಯ ಸಮಸ್ಯೆ ಉಂಟಾಗುತ್ತದೆ, ಕಾರಣ ಗ್ರಾಮ ಪಂಚಾಯತಿ ಉಚಗಾಂವ ಆಡಳಿತ ಮಂಡಳಿಯವರು ಪ್ರಾಣಿ ಬಲಿ ಆಗಬಾರದೆಂದು ನಿರ್ಧಾರ ತೆಗೆದುಕೊಂಡಿರುತ್ತಾರೆ..

ಅದೇ ಕಾರಣಕ್ಕೆ ಇಂದು ದಿನಾಂಕ 31/05/2024 ರಂದು ಉಚಗಾಂವ ಗ್ರಾಮದ ಮಳೆಕರ್ಣಿ ದೇವಸ್ಥಾನಕ್ಕೆ ಬೆಳಗಾವಿಯ ಉಪವಿಭಾಗಾಧಿಕಾರಿಗಳ ಬಸವಣ್ಣೆಪ್ಪ ಕಲಶೆಟ್ಟಿ, ಬೆಳಗಾವಿಯ ತಹಶೀಲ್ದಾರರಾದ ಸಿದ್ದರಾಯ ಭೋಸಗಿ, ಬೆಳಗಾವಿ ಗ್ರಾಮೀಣ ಪೊಲೀಸ್ ಉಪಾಧೀಕ್ಷರಾದ ಗಂಗಾರಾಮ ಬಿ, ಎಂ, ಕಾಕತಿ ಆರಕ್ಷಕ ವೃತ್ತ ನಿರೀಕ್ಷಕರಾದ ಉಮೇಶ ಎಂ ಇವರುಗಳು ಭೇಟಿ ನೀಡಿರುತ್ತಾರೆ..

ಈ ಸಮಯದಲ್ಲಿ ಬೆಳಗಾವಿ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಪಶುಸಂಗೋಪನಾ ಅಧಿಕಾರಿಗಳು, ಕಂದಾಯ ಇಲಾಖಾ ಸಿಬ್ಬಂದಿಗಳು, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಹಾಜರಿದ್ದು, ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ತಿಳಿಹೇಳಿದ್ದು, ಇನ್ನು ಮುಂದೆ ಉಚಗಾಂವ ಗ್ರಾಮದಲ್ಲಿ ಪ್ರಾಣಿಬಲಿ ನಡೆಯಬಾರದೆಂದು ಹೇಳಲಾಗಿದೆ..

ಇನ್ನು ಮುಂದೆ ಜನರು ಮಳೆಕರ್ಣಿ ದೇವಸ್ಥಾನಕ್ಕೆ ಬಂದು ತಮ್ಮ ಭಕ್ತಿಯಿಂದ ಪೂಜೆ ಪುನಸ್ಕಾರ ಮಾಡಲಿ, ದೇವರ ದರ್ಶನ ಪಡೆಯಲಿ, ಆದರೆ ಪ್ರಾಣಿ ಬಲಿಗೆ ಅವಕಾಶವಿಲ್ಲ, ಒಂದು ವೇಳೆ ಪ್ರಾಣಿ ಬಲಿ ಆದದ್ದು ಕಂಡು ಬಂದಲ್ಲಿ ಅಂತಹವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ..

ವರದಿ ಪ್ರಕಾಶ ಬಸಪ್ಪ ಕುರಗುಂದ..