ದೇಶಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಗಾಂಧಿ ಮನೆತನ ಹಾಗೂ ಕಾಂಗ್ರೆಸ್, ಬಿಜೆಪಿಯ ದ್ವೇಷ, ಷ್ಯಢ್ಯoತ್ರದ ರಾಜಕಾರಣಕ್ಕೆ ಹೆದರುವುದಿಲ್ಲ…
ವಿನಯ ನಾವಲಗಟ್ಟಿ ಹೇಳಿಕೆ…
ಬೆಳಗಾವಿ : ಬುಧವಾರ ನಗರದ ಕಾಂಗ್ರೆಸ್ ಭವನದ ಎದುರಿಗೆ ಜಿಲ್ಲಾ ಕಾಂಗ್ರೆಸ್ಸಿನ ಬಹುತೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಒಂದು ದಿನದ ಮೌನ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಎಐಸಿಸಿ ಮತ್ತು ಕೆಪಿಸಿಸಿ ಆದೇಶದ ಮೇರೆಗೆ ದೇಶ ಮತ್ತು ರಾಜ್ಯದಲ್ಲಿ ಬಹುತೇಕ ಕಡೆಗಳಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು ಮತ್ತು ಬೆಂಬಲಿಗರು, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಈ ಒಂದು ದಿನದ ಮೌನ ಸತ್ಯಾಗ್ರಹವನ್ನು ನಡೆಸುತ್ತಿದ್ದಾರೆ.
ಈ ವೇಳೆ ಬೆಳಗಾವಿ ಜಿಲ್ಲಾ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷರಾದ ವಿನಯ್ ನಾವಲಗಟ್ಟಿ ಅವರು ಮಾತನಾಡಿ,
ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಅವರು ಈ ದೇಶದ ಏಕತೆಗಾಗಿ, ರಕ್ಷಣೆಗಾಗಿ, ನಾಗರಿಕರ ಹಕ್ಕುಗಳ ರಕ್ಷಣೆಗಾಗಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೂ ಭಾರತ ಜೋಡೋ ಯಾತ್ರೆ ಮಾಡಿ, ರಾಷ್ಟ್ರದ ಸಾಮಾನ್ಯ ಜನರ ಮನಸನ್ನು ಗೆದ್ದಿದ್ದಾರೆ, ಅವರ ಜನಪ್ರಿಯತೆಯನ್ನು ನೋಡಲಾರದೆ ತಡೆದುಕೊಳ್ಳಲಾರದೆ, ಬಿಜೆಪಿಯವರು ಅವರ ಜನಪ್ರಿಯತೆ, ವರ್ಚಸ್ಸನ್ನು ಕುಗ್ಗಿಸುವದಕ್ಕಾಗಿ ಅವರನ್ನು ಸಮಸ್ಯೆಗೆ ಸಿಲುಕಿಸುವ ತಂತ್ರ ಮಾಡುತ್ತಿದ್ದಾರೆ..
ರಾಹುಲ್ ಗಾಂಧಿ ಅವರು ಪ್ರಧಾನಿ ಅವರಿಗೆ, ದೇಶದ ಆರ್ಥಿಕತೆಗೆ ಸಂಭಂದಿಸಿದಂತೆ ಕೆಲವು ಪ್ರಶ್ನೆಗಳನ್ನು ಕೇಳಿದಾಗ, ಆ ಪ್ರಶ್ನೆಗಳಿಗೆ ಅವರ ಹತ್ತಿರ ಉತ್ತರವಿಲ್ಲದೇ, ಇದು ಹೀಗೆ ಮುಂದುವರೆದರೆ, ದೇಶದ ಜನರ ಮುಂದೆ ನಮ್ಮ ಬಂಡವಾಳ ಬಯಲು ಆಗಿ ಮುಂದೆ ಅಧಿಕಾರ ಸಿಗುವದಿಲ್ಲ ಎಂದು, ಹೇಗಾದರೂ ಮಾಡಿ ರಾಹುಲ್ ಅವರನ್ನು ಹತ್ತಿಕ್ಕಬೇಕು, ಲೋಕಸಭೆ ಸ್ಥಾನದಿಂದ ತಗೆದು ಹಾಕಬೇಕು ಎಂಬ ನಿಟ್ಟಿನಲ್ಲಿ, ಷ್ಯಢ್ಯoತ್ರ ಹಾಗೂ ಕುತಂತ್ರ ರೂಪಿಸಿ ಅವರ ಬೆನ್ನು ಬಿದ್ದಿದ್ದಾರೆ..
ಆದಕಾರಣ ಇಂದು ನಾವು ಕಾಂಗ್ರೆಸ್ಸಿನ ಎಲ್ಲಾ ಸೈನಿಕರು, ಕಾರ್ಯಕರ್ತರು ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರ ಜೊತೆಗೆ ನಿಲ್ಲುತ್ತೇವೆ, ಅವರ ಜೊತೆ ಹೆಜ್ಜೆ ಹಾಕಿ ಬೆಂಬಲ ಸೂಚಿಸುತ್ತೇವೆ, ಇವತ್ತು ಏನು ಬಿಜೆಪಿಯವರು ಕ್ಷುಲ್ಲಕ ರಾಜಕಾರಣ ಮಾಡುತ್ತಿದ್ದಾರೆ ಅದರ ವಿರುದ್ಧ ಮೌನ ಪ್ರತಿಭಟನೆ ಮಾಡುವ ಮೂಲಕ ರಾಹುಲ್ ಗಾಂಧಿಯವರಿಗೆ ನಾವು ಬೆಂಬಲವಾಗಿ ನಿಂತಿದ್ದೇವೆ ಎಂದಿದ್ದಾರೆ..
ಕಾಂಗ್ರೆಸ್ ಪಕ್ಷ ಹಾಗೂ ಗಾಂಧಿ ಮನೆತನ ದೇಶಕ್ಕಾಗಿ ತ್ಯಾಗ ಬಲಿದಾನ ಮಾಡಿದ್ದು, ಬಿಜೆಪಿಯ ಇಂತಹ ದ್ವೇಷ ಹಾಗೂ ಷ್ಯಢ್ಯoತ್ರದ ರಾಜಕಾರಣಕ್ಕೆ ಕಾಂಗ್ರೆಸ್ ಪಕ್ಷ ಮತ್ತು ಕಾಂಗ್ರೆಸ್ಸಿಗರು ಯಾವತ್ತೂ ಹೆದರುವುದಿಲ್ಲ, ಮುಂದಿನ ದಿನಗಳಲ್ಲಿ ಇದಕ್ಕೆ ತಕ್ಕ ಉತ್ತರ ನೀಡುತ್ತೇವೆ ಎಂದಿದ್ದಾರೆ..
ಈ ಮೌನ ಪ್ರತಿಭಟನೆಯಲ್ಲಿ ಪಕ್ಷದ ಜಿಲ್ಲಾ ಪ್ರಮುಖ ಪದಾಧಿಕಾರಿಗಳು, ಸದಸ್ಯರು, ಹಾಗೂ ನೂರಾರು ಸಂಖ್ಯೆಯ ಕಾರ್ಯಕರ್ತರು ಉಪಸ್ಥಿತರಿದ್ದರು..
ವರದಿ ಪ್ರಕಾಶ ಕುರಗುಂದ..