ದೇಶದ ಜನಪರವಾದ ಬಜೆಟ್..

ದೇಶದ ಜನಪರವಾದ ಬಜೆಟ್..

ಜಿಲ್ಲಾಧ್ಯಕ್ಷ ಸುಭಾಷ್ ಪಾಟೀಲ

ಬೆಳಗಾವಿ : ನರೇಂದ್ರ ಮೋದಿಜೀ ಅವರ ನೇತೃತ್ವದ ಭಾರತ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2025-26 ರ ಕೇಂದ್ರ ಬಜೆಟ್ ಆರ್ಥಿಕ ಬಜೆಟ್ ಜನಪರವಾದ ಬಜೆಟ್ ಆಗಿದೆ.

ಆರ್ಥಿಕ ಬೆಳವಣಿಗೆ, ಸಾಮಾಜಿಕ ಕಲ್ಯಾಣ, ತಾಂತ್ರಿಕ ಪ್ರಗತಿಗೆ ಮಾರ್ಗಸೂಚಿ ಹಾಗೂ ಕೃಷಿ, ಮೂಲಸೌಕರ್ಯ, ತೆರಿಗೆ ಪರಿಹಾರ ಮತ್ತು ಡಿಜಿಟಲ್ ರೂಪಾಂತರಕ್ಕೆ ಬಲವಾದ ಉತ್ತೇಜನದೊಂದಿಗೆ, ರಕ್ಷಣಾ ಆಧುನೀಕರಣ, ಸೈಬರ್ ಭದ್ರತೆ ಮತ್ತು ಬಾಹ್ಯಾಕಾಶ ಪರಿಶೋಧನೆಗೆ ಒತ್ತು ನೀಡಿದೆ.

ರೈತರಿಗೆ ಹೆಚ್ಚಿನ ಸಾಲ, ಮಧ್ಯಮ ವರ್ಗದವರಿಗೆ ತೆರಿಗೆ ಕಡಿತ ಒಟ್ಟಾರೆಯಾಗಿ ಇದೊಂದು ದೇಶದ ಅತ್ಯುತ್ತಮ ಜನಪರ ಬಜೆಟ್ ಆಗಿದೆ ಎಂದು ಭಾರತೀಯ ಜನತಾ ಪಾರ್ಟಿ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವರದಿ ಪ್ರಕಾಶ ಬಸಪ್ಪ ಕುರಗುಂದ..