ಅಪ್ಪು ಅವರ ಅಗಲಿಕೆಯ ನೋವನ್ನು ಮರೆಸುತ್ತರಾ ಯುವ??
ತುಂಬು ಹೃದಯದಿಂದ ಸ್ವಾಗತಿಸಲು ಸಿದ್ದರಾದ ಅಭಿಮಾನಿಗಳು..
ಬೆಳಗಾವಿ : ಕನ್ನಡ ಚಿತ್ರರಂಗದಲ್ಲಿನ ಯಾಜಮಾನನಂತ ಇರುವ ಡಾ ರಾಜಕುಮಾರ ಮನೆತನ ಮೊದಲಿನಿಂದಲೂ ತಾವು ಬೆಳೆಯುತ್ತಾ ಚಿತ್ರರಂಗವನ್ನು ಬೆಳೆಸುತ್ತಾ, ಸಮಸ್ಯೆ, ತೊಂದರೆ, ಮನಸ್ತಾಪಗಳು ಆದಾಗ ಅವೆಲ್ಲವನ್ನೂ ಬಗೆಹರಿಸುತ್ತಾ, ಕನ್ನಡ ಚಿತ್ರರಂಗವನ್ನು ಒಂದು ಕುಟುಂಬದಂತೆ ಕರೆದೊಯ್ಯುತ್ತಿದ್ದರು.

ಆದರೆ ಡಾ ರಾಜ ಕಾಲವಾದ ನಂತರ ಇಡೀ ಚಿತ್ರರಂಗ ಒಕ್ಕಟ್ಟಿನ ಸಮಸ್ಯೆ ಎದುರಿಸಿ, ಯಜಮಾನನಿಲ್ಲದ ಮನೆಯಾಗಿ, ಚಿತ್ರರಂಗ ತಮಗೆ ಇಷ್ಟ ಬಂದ ಹಾಗೆ ಇರತೊಡಗಿತು, ಆದರೆ 2021 ಡಿಸೆಂಬರ್ 29ರಂದು ಪುನೀತ್ ಅಸುಣಿಗಿದಾಗ ದೊಡ್ಮನೆಯ ಕೀರ್ತಿ, ತೇಜಸ್ಸು ಕುಗ್ಗಿದಂತಾಗಿ ಅಭಿಮಾನಿಗಳಲ್ಲಿ ಮನದಲ್ಲಿ ನಿರಾಸೆಯ ಮೌನ ಆವರಿಸಿತ್ತು.
ಆದರೆ ಈಗ ಮತ್ತೆ ರಾಜ್ ಮನೆತನದ ಅಭಿಮಾನಿಗಳಲ್ಲಿ ಹೊಸಬೆಳಕು ಮೂಡಿ ಹೊಸ ಕನಸು ಚಿಗುರೊಡೆದು, ಮತ್ತೊಮ್ಮೆ ಅಪ್ಪುವನ್ನು ತೆರೆಮೇಲೆ ನೋಡುತ್ತೇವೆ ಎಂಬ ಸಂತಸದ ಸುದಿನಕ್ಕಾಗಿ ಕಾಯುತ್ತಿದ್ದಾರೆ, ಅದಕ್ಕೆ ಕಾರಣವಾದದ್ದು ಕನ್ನಡದ ಪ್ರತಿಷ್ಠಿತ ನಿರ್ಮಾಣ ಸಂಸ್ಥೆಯಾದ ಹೊಂಬಾಳೆ ಫಿಲ್ಮ್ಸ್.


ನಿಜ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ, ಸಂತೋಷ್ ಆನಂದರಮ ನಿರ್ದೇಶನದಲ್ಲಿ, ರಾಜ್ ಕುಟುಂಬದ ಕುಡಿ, ಹೊಸ ಪವರ್, ಪೂರ್ತಿ ತಯಾರಿಯೊಂದಿಗೆ ಆಕಾಡಕ್ಕೆ ಇಳಿದ ಯುವ ರಾಜಕುಮಾರ ಅಭಿನಯದ “ಯುವ” ಚಿತ್ರ ಮಾರ್ಚ 28 ರಂದು ರಾಜ್ಯಾದ್ಯಂತ ಬಿಡುಗಡೆ ಆಗುವದೆಂಬ ಮಾಹಿತಿಯನ್ನು ಚಿತ್ರರಂಗ ನೀಡಿದೆ..
ಅದೇ ರೀತಿ ಮಾರ್ಚ್ ಎರಡನೆಯ ತಾರಿಕಿಗೇ ಯುವ ಚಿತ್ರದ ಮೊದಲ ಹಾಡನ್ನು (“ಒಬ್ಬನೇ ಶಿವ ಒಬ್ಬನೇ ಯುವ”) ಚಾಮರಾಜನಗರದ ದೇವಸ್ಥಾನದ ಆವರಣದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ಮಾಡಿಕೊಂಡಿದ್ದು, ಅಭಿಮಾನಿಗಳ ಖುಷಿಯನ್ನು ಇಮ್ಮಡಿಗೊಳಿಸಿದೆ,
ಇನ್ನು ಯುವ ಚಿತ್ರದ ಬಗ್ಗೆ ಅಭಿಮಾನಿಗಳಲ್ಲಿ ಹಾಗೂ ರಾಜ್ ಪರಿವಾರದಲ್ಲಿ ತುಂಬಾ ನಿರೀಕ್ಷೆಯಿದ್ದು, ಚಿತ್ರ ತುಂಬಾ ಚೆನ್ನಾಗಿ ಮೂಡಿ ಬಂದಿದ್ದು, ಯುವ ರಾಜಕುಮಾರ ಕೂಡಾ ತುಂಬಾ ಶಿಸ್ತು, ಶೃದ್ದೆ, ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ್ದು, ಚಿತ್ರ ಅಭೂತಪೂರ್ವ ಯಶಸ್ವಿ ಆಗುತ್ತದೆ ಎಂಬ ಮತಿದ್ದು, ಯುವನಿಂದ ರಾಜ್ ಮನೆತನ ಮತ್ತೆ ರಾರಾಜಿಸುತ್ತದೆ ಎಂಬ ಆಸೆಗಳು ಅಭಿಮಾನಿಗಳಲ್ಲಿ ಮಿಂಚುತ್ತಿವೆ..
ಒಟ್ಟಿನಲ್ಲಿ ಅಪ್ಪು ಅಗಲಿಕೆಯಿಂದ ನೊಂದು, ನಿರಾಶರಾಗಿದ್ದ ಅಭಿಮಾನಿಗಳಿಗೆ ಯುವ ಹೊಸ ಚೈತನ್ಯ ನೀಡಿ, ಮತ್ತೆ ಅಭಿಮಾನಿಗಳು ಚಿತ್ರಮಂದಿರದ ಕಡೆಗೆ ಬರುವಂತ ಸುದಿನವನ್ನು ಸೃಷ್ಟಿಸಿದ್ದಾರೆ, ಈ ಮೂಲಕ ಮತ್ತೆ ಬೆಳ್ಳಿ ಪರದೆ ಮನರಂಜನೆಯ ರಸದೌತಣ ನೀಡುವ ತಾಣವಾಗಲಿ, ಆ ಮೂಲಕ ಅಭಿಮಾನಿಗಳ ಮನದಲ್ಲಿ ಅಭಿಮಾನದ ಹೊಳೆ ನಿರಂತರ ಹರಿಯುತ್ತಿರಲಿ..
ವರದಿ ಪ್ರಕಾಶ್ ಕುರಗುಂದ..