ನಂದಾದೀಪ ನೇತ್ರಾಲಯದಲ್ಲಿ ಮಾಜಿ ಸೈನಿಕರಿಗಾಗಿ ಇಸಿಎಚ್‌ಎಸ್ ಸೇವೆಯ ಉದ್ಘಾಟನೆ..
ಮಾಜಿ ಸೈನಿಕರಿಗೆ ಉಚಿತ ನೇತ್ರ ತಪಾಸಣಾ ಶಿಬಿರ..
ಬೆಳಗಾವಿ : ನಗರದ ಪ್ರತಿಷ್ಠಿತ ಕಣ್ಣಿನ ಆಸ್ಪತ್ರೆಯಾದ ನಂದಾದೀಪ ನೇತ್ರಾಲಯದಲ್ಲಿ ಮಾಜಿ ಸೈನಿಕರಿಗಾಗಿ ಇಸಿಎಚ್ಎಸ್ ಸೇವೆಯನ್ನು ಆರಂಭಿಸಿದ್ದು, ಬೆಳಗಾವಿ ಜಿಲ್ಲಾ ಮಾಜಿ ಸೈನಿಕರ ಸಂಘಟನೆಯ ಮಹಾ ಒಕ್ಕೂಟದ ಸದಸ್ಯರಿಂದ ಯೋಜನೆಯ ಉದ್ಘಾಟನಾ ಕಾರ್ಯಕ್ರಮ ನೆರವೇರಿದೆ.
ಬುಧವಾರ ದಿನಾಂಕ 19/02/2025 ರಂದು ನಗರದ ನಂದಾದೀಪ ಆಸ್ಪತ್ರೆಯ ಬೆಳಗಾವಿ ಶಾಖೆಯಲ್ಲಿ ಜಿಲ್ಲೆಯ ಮಾಜಿ ಸೈನಿಕರ ಸಂಘದ ಸದಸ್ಯರು ಆಗಮಿಸಿ ಇಸಿಎಚ್ಎಸ್ ಯೋಜನೆಯನ್ನು ಉದ್ಘಾಟನೆ ಮಾಡಿದ್ದು, ಇದೇ ವೇಳೆ ನೆರೆದ ನೂರಾರು ಸೈನಿಕರಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಆಯೋಜನೆ ಮಾಡಲಾಗಿತ್ತು.

ಈ ವಿಶೇಷ ಶಿಬಿರದ ಮೂಲಕ ನಂದಾದೀಪ ನೇತ್ರಾಲಯದ ಬೆಳಗಾವಿ ಶಾಖೆಯಲ್ಲಿ ಮಾಜಿ ಸೈನಿಕರಿಗಾಗಿ ಇಸಿಎಚ್ಎಸ್ ಸೇವೆಯನ್ನು ಪ್ರಾರಂಭಿಸಿದ್ದು ಸರ್ವ ಮಾಜಿ ಸೈನಿಕರು ಇದರ ಸದುಪಯೋಗ ಪಡೆಯಬೇಕೆಂಬ ಸಂದೇಶವನ್ನು ಆಸ್ಪತ್ರೆಯ ಪ್ರಮುಖರು ನೀಡಿದ್ದಾರೆ.
ಈ ಕಾರ್ಯಕ್ರಮವನ್ನು ಜೀವನ ವಿದ್ಯಾ ಮಿಷನ್‌ನ ವಿಶ್ವಪ್ರಾರ್ಥನೆ ಮತ್ತು ರಾಷ್ಟ್ರಗೀತೆಯ ಮೂಲಕ ಪ್ರಾರಂಭಿಸಿದ್ದು, ನೇತ್ರ ಚಿಕಿತ್ಸಾ ಶಿಬಿರದಲ್ಲಿ ಭಾಗವಹಿಸಿದ ಮಾಜಿ ಸೈನಿಕರ ಮತ್ತು ಅವರ ಕುಟುಂಬದವರ ನೇತ್ರ ಪರೀಕ್ಷೆಯನ್ನು ಉಚಿತವಾಗಿ ನೆರವೇರಿಸಿದ್ದು, ಆಗಮಿಸಿದ ಸೈನಿಕರಿಗೆ ಗೌರವಾರ್ಪನೆಯನ್ನು ಮಾಡಲಾಗಿದೆ.
ಈ ಕಾರ್ಯಕ್ರಮದಲ್ಲಿ ಜಗದೀಶ್ ಪೂಜಾರಿ, ಶಿವಬಸಪ್ಪ ಕಡಾನಾ, ಭಿಮ್ಸೆನ್ ಟೆಂಗಿ, ಗಣಪತಿ ದೇಸಾಯಿ, ಸುನೀತಾ ಪಟ್ಟಣಶೆಟ್ಟಿ ಭಾಗವಹಿಸಿದ್ದು, ಕಾರ್ಯಕ್ರಮದ ಆಯೋಜನೆಯನ್ನು ನಂದಾದೀಪ ನೇತ್ರಾಲಯದವರು ಮಾಡಿದ್ದು,
ವೈದ್ಯಕೀಯ ನಿರ್ದೇಶಕ ಮತ್ತು ಮುಖ್ಯ ನೇತ್ರಶಾಸ್ತ್ರಜ್ಞ ಡಾ.ಇರಯ್ಯ ಮಸ್ತಮರ್ಡಿ, ಅನಿರುದ್ಧ ಸೂರ್ಯವಂಶಿ, ಆನಂದ ತುಪ್ಪದ ಮತ್ತು ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ ಪ್ರಕಾಶ್ ಕುರಗುಂದ..