ನಗರದ ಎಲ್ಲಾ ಕಾಲುವೆಗಳು ಆದಷ್ಟು ಬೇಗ ಸ್ವಚ್ಛವಾಗಬೇಕು..
ವಿದ್ಯುತ್ ದ್ವೀಪ ಹಾಗೂ ರಸ್ತೆಗಳ ದುರಸ್ತಿ ಸಮಸ್ಯೆ ನಿವಾರಿಸಬೇಕು..
ಜಯತೀರ್ಥ ಸವದತ್ತಿ, ಅಧ್ಯಕ್ಷರು, ಲೋಕೋಪಯೋಗಿ ಹಾಗೂ ಅಭಿವೃಧಿ ಸ್ಥಾಯಿ ಸಮಿತಿ ಮಹಾನಗರ ಪಾಲಿಕೆ ಬೆಳಗಾವಿ..
ಬೆಳಗಾವಿ : ಮಳೆಗಾಲ ಆರಂಭವಾಗಿದ್ದು, ನಗರದಲ್ಲಿರುವ ನಾಲಾಗಳ ಶುಚಿತ್ವಕ್ಕೆ ಹಣಕಾಸು ನಿಧಿ ಕೊಡಲಾಗಿದ್ದು. ಇನ್ನೂ ಕೂಡಾ ಕೆಲ ನಾಲಾಗಳು ಸ್ವಚ್ಛತಾ ಬಾಕಿ ಉಳಿದುದ್ದು ಅವುಗಳನ್ನು ಶುಚಿಗೊಳಿಸಬೇಕೆಂದು ಲೋಕೋಪಯೋಗಿ ಇಲಾಖೆ ಸ್ಥಾಯಿ ಸಮಿತಿಯ ಅಧ್ಯಕ್ಷ ಜಯತೀರ್ಥ ಸವದತ್ತಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಶುಕ್ರವಾರ ಬೆಳಗಾವಿ ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ಲೋಕೋಪಯೋಗಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಜಯತೀರ್ಥ ಸವದತ್ತಿ ಅವರು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಎಲ್ಲೆಲ್ಲಿ ನಾಲೆಗಳು ಇವೆಯೋ ಅಲ್ಲಿ ನಗರ ಸದಸ್ಯರನ್ನು ಕರೆದುಕೊಂಡು ಹೋಗಿ ನಾಲಾ ಶುಚಿಗೊಳಿಸಬೇಕು,
ನಗರದಲ್ಲಿರುವ ಅನೇಕ ಕಡೆಗಳಲ್ಲಿ ವಿದ್ಯುತ್ ಸಂಪರ್ಕ ಇಲ್ಲ. ಸುಮಾರು 15-20 ವಾರ್ಡುಗಳಲ್ಲಿ ವಿದ್ಯುತ್ ಕಂಬಗಳಿಲ್ಲ. ಅಲ್ಲಿ ವಿದ್ಯುತ್ ಕಂಬ ಅಳವಡಿಸಿ ಬೀದಿ ದೀಪದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ನಿರ್ಧಾರ ತೆಗೆದುಕೊಳ್ಳಲಾಯಿತು.
ಮಳೆಗಾಲದ ಪೂರ್ವದಲ್ಲಿ ರಸ್ತೆಗಳ ಹಾಳಾಗಿರುವುದನ್ನು ದುರಸ್ತಿ ಮಾಡಬೇಕು. ಒಳಚರಂಡಿಯ ಸಮಸ್ಯೆಯನ್ನು ಬಗೆ ಹರಿಸಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಿದರು.
ಅಧಿಕಾರಿಗಳು ಸಭೆಗೆ ಆಗಮಿಸುತ್ತಿಲ್ಲ. ಸಾಕಷ್ಟು ಅಧಿಕಾರಿಗಳು ಗೈರು ಹಾಜರಾಗಿರುವದಕ್ಕೆ. ಅಸಮಾಧಾನಗೊಂಡ ಪಾಲಿಕೆ ಸದಸ್ಯರು, ತಾವು ಪತ್ರ ಬರೆದರೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂಬ ದೂರುಗಳನ್ನು ಪ್ರಸ್ತಾಪಿಸಿದರು. ಇನ್ನೊಂದು ಸಾರಿ ಈ ರೀತಿ ಆಗದಂತೆ ನೋಡಿಕೊಳ್ಳಬೇಕು ಎಂದರು.
ಮೇಯರ್ ಮಂಗೇಶ ಪವಾರ್, ಉಪಮೇಯರ್ ವಾಣಿ ಜೋಶಿ, ಆಡಳಿತ ಪಕ್ಷದ ನಾಯಕ ಹನುಮಂತ ಕೊಂಗಾಲಿ, ಪಾಲಿಕೆ ಅಧಿಕಾರಿ ಲಕ್ಷ್ಮೀ ನಿಪ್ಪಾಣಿಕರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.