ನನ್ನ ರಾಜಕೀಯ ಜೀವನದಲ್ಲಿ ಎಂದೂ ಜಾತಿಬೇಧ ಮಾಡಿಲ್ಲ, ಮುಂದೇನೂ ಮಾಡೋದಿಲ್ಲ…

ಬೆಳಗಾವಿಯಲ್ಲಿ ಭಾರತೀಯ ಕುರುಬರ 9ನೆಯ ರಾಷ್ಟ್ರೀಯ ಮಹಾ ಸಮಾವೇಶ 2023..

ನನ್ನ ರಾಜಕೀಯ ಜೀವನದಲ್ಲಿ ಎಂದೂ ಜಾತಿಬೇಧ ಮಾಡಿಲ್ಲ, ಮುಂದೇನೂ ಮಾಡೋದಿಲ್ಲ..

ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ..

ಹಾಲುಮತ ಸಮುದಾಯದ ಸಮಸ್ಯೆಗಳು ಆದಷ್ಟು ಬೇಗ ಬಗೆಹರಿಯುತ್ತದೆ..

ಸಚಿವ ಸತೀಶ್ ಜಾರಕಿಹೊಳಿ ವಿಶ್ವಾಸ..

ಬೆಳಗಾವಿ : ಮಂಗಳವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜನಸಾಗರದಲ್ಲಿ ಜರುಗಿದ ಭಾರತೀಯ ಕುರುಬರ ಒಂಬತ್ತನೆಯ ರಾಷ್ಟ್ರೀಯ ಮಹಾ ಸಮಾವೇಶ 2023, ಈ ಮಹಾ ಸಮಾವೇಶವು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶಕ್ತಿ ಪ್ರದರ್ಶನದ ಸಂಗಮ ಎನಿಸುವಂತಿತ್ತು..

ಮೊದಮೊದಲು ನಗರದ ತುಂಬಾ ಎಲ್ಲಿ ನೋಡಿದರೂ ಅಲ್ಲಿ ಹಳದಿ ಬಣ್ಣದ ಪೇಟಾ ಸುತ್ತಿಕೊಂಡು, ಹೆಗಲ ಮೇಲೆ ಕಂಬಳಿ ಹಾಕಿಕೊಂಡು, ವರ್ಚಸ್ಸಿನಿಂದ ಸಂಭ್ರಮಿಸುವ ಜನರೇ ಕಾಣುತ್ತಿದ್ದು, 11- 30 ರ ನಂತರ ನಗರದ ಕೊಲ್ಲಾಪುರ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರೆಗೂ ಕಿಕ್ಕಿರಿದ ಜನಸಮೂಹ ನೋಡಿದಾಗ, ಸಿಎಂ ಸಿದ್ದರಾಮಯ್ಯ ಅವರು ಸಮಾಜದ ಎಲ್ಲಾ ಸಮೂಹದ ನೆಚ್ಚಿನ ನಾಯಕರು ಎನ್ನುವುದರಲ್ಲಿ ಎರಡು ಮಾತಿಲ್ಲ ಎಂಬ ಸನ್ನಿವೇಶ ನಿರ್ಮಾಣವಾಗಿತ್ತು..

ಇನ್ನು ಈ ಸಮಾವೇಶದಲ್ಲಿ ಪ್ರಾಸ್ತಾವಿಕ ನುಡಿ ಆಡಿದ ಲಕ್ಷ್ಮಣರಾವ್ ಚಿಂಗಳೆ ಅವರು, ಇಂದು ಭಾರತದಲ್ಲಿ ಹನ್ನೆರಡು ಕೋಟಿಯಷ್ಟು ಜನರು ಇದ್ದು, ದೇಶಾದ್ಯಂತ ಇಲ್ಲಿವರೆಗೆ ಎಂಟು ಮಹಾ ಸಮಾವೇಶಗಳು ನಡೆದದ್ದು ಇತಿಹಾಸ ಎಂದರು, ಈ ದೇಶದಲ್ಲಿ ಬಡವ, ಹಿಂದುಳಿದ, ಶೋಷಿತರ ಪರ ಇರುವ ರಾಜಕೀಯ ನಾಯಕ ಎಂದರೆ ಅದು ಸಿದ್ದರಾಮಯ್ಯ ಅವರು, ಸಮಾಜದ ಎಲ್ಲಾ ಸಮುದಾಯದ ಜನರ ಏಳಿಗೆ ಬಯಸಿ, ಎಲ್ಲರಿಗೂ ಒಳ್ಳೆಯದನ್ನು ಮಾಡುವ ಗುಣವಿರುವ ಸಿದ್ದರಾಮಯ್ಯ ಅವರು ಈ ರಾಜ್ಯದ ಮುಖ್ಯಮಂತ್ರಿ ಆಗಿದ್ದು ನಮ್ಮೆಲ್ಲರ ಭಾಗ್ಯ ಎಂದರು..

ಇನ್ನು ಜಿಲ್ಲೆಯ ನಾಯಕರು ಹಾಗೂ ಜಿಲ್ಲಾ ಸಚಿವರಾದ ಸತೀಶ್ ಜಾರಕಿಹೊಳಿ ಅವರೂ ಕೂಡಾ ಅದೇ ಆದರ್ಶ ಹಾಗೂ ವಿಚಾರ ಹೊಂದಿದ್ದು, ಇಡೀ ಮನುಕುಲದ ಏಳಿಗೆಗಾಗಿ ಶ್ರಮಿಸುವ ನಾಯಕರು ನಮ್ಮ ಜೊತೆ ಇದ್ದಿದ್ದು ನಮಗೆ ಹೆಮ್ಮೆಯ ವಿಷಯ ಎಂದರು..

ಮಾನ್ಯ ಸಿದ್ದರಾಮಯ್ಯ ಅವರು ಜಾತಿ, ಧರ್ಮ, ಭಾಷೆ , ಗಡಿ ಮೀರಿದ ನಾಯಕರು ಅವರ ಅನುಯಾಯಿಗಳು ಎಲ್ಲಾ ಕಡೆಗೆ ಇದ್ದು ಅವರು ಜಾತ್ಯಾತೀತ ನಾಯಕರು, ಇನ್ನು ಬಹುದಿನಗಳ ಬೇಡಿಕೆಯಾದ ಕುರುಬ ಸಮುದಾಯವನ್ನು ಪರಿಶಿಷ್ಟ ಸಮುದಾಯಕ್ಕೆ ಸೇರಿಸಬೇಕು, ಅದೇ ರೀತಿ ಈ ಸಲದ ಲೋಕಸಭೆ ಚುನಾವಣೆಯಲ್ಲಿ ರಾಜ್ಯದ ಕುರುಬ ಸಮುದಾಯಕ್ಕೆ 3 ಸ್ಥಾನ ಮೀಸಲಿಡಬೇಕು ಎಂದು ಮನವಿ ಮಾಡಿದರು..

ಕಾಶ್ಮೀರದಿಂದ ಕೇರಳದವರೆಗಿನ ಇಡೀ ಭಾರತದ ಕುರುಬ ಸಮುದಾಯದ ಸ್ವಾಮೀಜಿಗಳು, ಜನಪ್ರತಿನಿಧಿಗಳು, ದೇಶದ ಕುರುಬ ಸಮುದಾಯದ ಪ್ರಮುಖರು, ಪದಾಧಿಕಾರಿಗಳು, ಸಮುದಾಯದ ವಿವಿಧ ಕ್ಷೇತ್ರಗಳ ಸಾಧಕರು ಹಾಗೂ ಸಾಮಾನ್ಯರು ಈ ಮಹಸಭಾದಲ್ಲಿ ಭಾಗಿಯಾಗಿದ್ದು, ದೇಶದ ಪೂಜ್ಯ ಸ್ವಾಮಿಗಳೇಲ್ಲರ ಅಮೃತ ಹಸ್ತದಿಂದ ಜ್ಯೋತಿ ಬೆಳಗುವ ಮೂಲಕ ಸಮಾವೇಶದ ಉದ್ಘಾಟನೆಯಾಗಿದೆ..

ಇನ್ನು ಭಾರತೀಯ ಕುರುಬ ಸಮಾವೇಶದ ಕುರಿತು ಮಾತನಾಡಿದ ರಾಜಕಾರಣಿ ಹಾಗೂ ಸಮುದಾಯದ ಮುಖಂಡರಾದ ಎಚ್ ಎಲ್ ರೇವಣ್ಣ ಅವರು ಮಾತನಾಡಿ, ಕುರುಬ ಸಮುದಾಯದ ಏಳಿಗೆಗಾಗಿ ಇರುವ ಹಲವಾರು ಬೇಡಿಕೆಗಳನ್ನು ಸಭೆಯಲ್ಲಿ ಓದಿ, ಅದಕ್ಕೆ ಎಲ್ಲರ ಒಪ್ಪಿಗೆ ಪಡೆದು, ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಿದರು..

ಇನ್ನು ಅಭಿನಂದನಾ ನುಡಿಗಳನ್ನು ನುಡಿದ ಮಾಜಿ ಸಚಿವ ವಿಶ್ವನಾಥ್ ಅವರು, ರಾಜ್ಯದ ಜನತೆಗೆ ಸಿದ್ದರಾಮಯ್ಯ ಅವರು ನೀಡಿದ ಕೊಡುಗೆ ಬಹಳ ಮಹತ್ವದ್ದು, ಎರಡನೇ ಬಾರಿಗೆ ಸಿಎಂ ಆದ ಅವರು ಘೋಷಿಸಿದ ಐದು ಗ್ಯಾರೆಂಟಿಗಳು ಜನರ ಬಾಳನ್ನು ಬೇಳಗಿಸಿದ್ದಾವೆ, ರಾಜ್ಯದ ಎಲ್ಲಾ ಜಾತಿ, ಜನಾಂಗ, ಸಮುದಾಯದ ಜೊತೆ ಅವರು ಕೆಲಸ ಮಾಡುತ್ತಾರೆ, ಸ್ವಾತಂತ್ರ ವೀರರ ನಾಡಿನಲ್ಲಿ ಈ ಒಂಬತ್ತನೇ ಸಮಾವೇಶ ನಡೆಯುತ್ತಿದ್ದು, ಇಡೀ ಕುರುಬ ಸಮುದಾಯಕ್ಕೆ ಹೆಮ್ಮೆ ಎನಿಸಿದೆ ಎಂದರು.. ನಾವು ಮುಂದೆ ಬೇಟಿ ಮಾಡೋದು, ಮುಂದಿನ ಅಧಿವೇಶನದಲ್ಲಿ ದೆಹಲಿ ರಾಮಲೀಲಾ ಮೈದಾನದಲ್ಲಿ ಅದಕ್ಕಾಗಿ ಎಲ್ಲರೂ ಸಿದ್ದರಾಗೋಣ ಎಂದಿದ್ದಾರೆ..

ಇನ್ನು ಸಚಿವ ಸತೀಶ್ ಜಾರಕಿಹೊಳಿ ಅವರು ಸಭೆ ಉದ್ದೇಶಿಸಿ ಮಾತನಾಡಿದ್ದು, ಈ ಸಮಾವೇಶ ಬೆಳಗಾವಿಯಲ್ಲಿ ಮಾಡಬೇಕು, ಸಮುದಾಯದ ಸಮಸ್ಯೆಗಳನ್ನು ಚರ್ಚೆ ಮಾಡಬೇಕು ಎಂದು ಸುಮಾರು ದಿನಗಳಿಂದ ರಾಷ್ಟ್ರೀಯ ಮತ್ತು ರಾಜ್ಯ ಅಧ್ಯಕ್ಷರು ಸೇರಿ ಸಮಾವೇಶ ಮಾಡುವ ವಿಚಾರ ಹಂಚಿಕೊಂಡಿದ್ದರು,

ಸುಮಾರು ಹನ್ನೆರೆಡು ಕೋಟಿ ಇರುವ ಈ ಸಮುದಾಯ ಬೇರೆಬೇರೆ ಕಾರ್ಯದಲ್ಲಿ ನಿರತವಾಗಿದ್ದು, ಅವರ ಸಾಕಷ್ಟು ಸಮಸ್ಯೆ, ಹಾಗೂ ಬೇಡಿಕೆ ಇದ್ದು, ಆದಷ್ಟು ಬೇಗ ಅವೆಲ್ಲಾ ಈಡೇರಲಿ, ಅದೇರೀತಿ ಎರಡನೇ ಬಾರಿಗೆ ಮುಖ್ಯಮಂತ್ರಿ ಆಗಿರುವ ಸಿದ್ದರಾಮಯ್ಯ ಅವರು, ಜನಪರ, ಸಮುದಾಯ, ಶೋಷಿತರ, ಪರವಾಗಿ ಕೆಲಸ ಮಾಡಿದ್ದು, ಹೆಚ್ಚಿನ ಅನುದಾನ ನೀಡಿ ಹಿಂದುಳಿದ ಸಮುದಾಯಕ್ಕೆ ಶಕ್ತಿ ನೀಡುವ ನಾಯಕ ಎನಿಸಿಕೊಂಡಿದ್ದಾರೆ..

ಬೆಳಗಾವಿಯಲ್ಲಿ ಕುರುಬ ಸಮುದಾಯದ ಶಾಸಕರು ಆಗಿಲ್ಲ, ಆದರೆ ಬರುವ ದಿನಗಳಲ್ಲಿ ಲೋಕಸಭೆಗೆ ಕುರುಬ ಸಮುದಾಯದ ಅಭ್ಯರ್ಥಿ ಕಳಿಸುವ ಪ್ರಯತ್ನ ಮಾಡುತ್ತೇವೆ ಎಂದರು..

ಇನ್ನು ಶಾಸಕ ಬಂಡೆಪ್ಪ ಕಾಸೆಂಪೂರ್ ಅವರು ಮಾತನಾಡಿ, ಈ ಅದ್ಬುತ ಸಮಾವೇಶವನ್ನು ಆಯೋಜನೆ ಮಾಡಿದ ಏಚ್ ಎಲ್ ರೇವಣ್ಣ ಹಾಗೂ ಏಚ್ ವಿಶ್ವನಾಥ ಅವರಿಗೆ ತುಂಬಾ ಧನ್ಯವಾದ ಎಂದರು, ರಾಜಕೀಯದಲ್ಲಿ ನಾನು ಎರಡು ಸಲ ಸಚಿವನಾಗಿದ್ದು ನಾನು ಒಬ್ಬ ಕುರುಬ ಆಗಿರುವದರಿಂದ ಎಂದರು, ನಮ್ಮದು ಕೊಡುವ ಕುಲ, ದೇಶಕ್ಕಾಗಿ ಪ್ರಾಣವನ್ನೇ ನೀಡಿದ ರಾಯಣ್ಣನ ಸಮಾಧಿಗೆ ಹೋಗಿ ಬಂದೆ, ಅಲ್ಲಿ ಹೋದರೆ ಮೈ ಜುಮ್ ಎನಿಸುತ್ತೆ ಎಂದರು..

ಇನ್ನು ಸಚಿವ ತಿಮ್ಮಾಪುರ ಅವರು ಮಾತನಾಡಿ, ಸಕ್ಕರೆ, ಚಾ ಪುಡಿಗಾಗಿ ಬೇರೆಯವರ ಬಾಗಿಲಿಗೆ ಹೋಗಿ ನಿಲ್ಲುವ ನಮ್ಮ ತಾಯಂದಿರಗೆ ಇಂದು 2000 ರೂಪಾಯಿ ನೀಡಿ, ದುರ್ಬಲರ ಶಕ್ತಿ ಆಗಿದ್ದಿರಲ್ಲ ನೀವು ನಿಜಕ್ಕೂ ಭಾಗ್ಯಗಳ ಸರದಾರ ಎಂದರು, ಎಲ್ಲಿ ನೋವು ಇದೆ ಅಲ್ಲಿ ಸಿದ್ದರಾಮಯ್ಯ ಇರುತ್ತಾರೆ ಎಂದರು..

ಇನ್ನು ಸಮಾಜದ ಗುರುಗಳಾದ ಕಾಗಿನೆಲೆ ಪೀಠಾಧಿಪತಿಗಳು ನಿರಂಜನಾನಂದ ಸ್ವಾಮೀಜಿ ಅವರು ಮಾತನಾಡಿ, ನೀವು ಇಲ್ಲಿ ಸೇರಿದ್ದಿರಾ ಅಂದ ಮೇಲೆ ಸಮಾಜಕ್ಕೆ ಒಂದು ಸಂದೇಶ ತಗೆದುಕೊಂಡು ಹೋಗಬೇಕು ಎಂದು ಎಲ್ಲರಿಂದ ಹೇಳಿಸಿ, ಕುರುಬರ ವಂಶ ಎಂತದು, ಹಿನ್ನೆಲೆ ಏನು, ಯಾವ ಪವಾಡ ಮಾಡಲಾಗಿದೆ ಎಂದು ಹೊಗಳಿಕೆಯ ಸ್ತುತಿ ಮಾಡಿಸಿದರು.

ಹಾಲುಮತದ ಸಮಾಜಕ್ಕೆ ಹುಳಿಹಿಂಡಲಿಕ್ಕೆ ಬಿಡಬೇಡಿ, ವಿಚಲಿತರಾಗಬೇಡಿ, ಅದಕ್ಕೆ ಬದಲಾಗಿ ಮೋಸರಾಗಿ ಎಂಬ ಸಂದೇಶ ನೀಡಿದರು.

ಇನ್ನು ಸಮಾವೇಶದ ಕೇಂದ್ರಬಿಂದುವಾದ ಸಿಎಂ ಸಿದ್ದರಾಮಯ್ಯ ಅವರು ಮಾತನಾಡಿ, ಇಂದು ಶಪರ್ಡ್ ಇಂಡಿಯಾ ಸಮಾವೇಶದಲ್ಲಿ ನನಗೆ ಗೌರವ ಅರ್ಪಣೆ ಮಾಡಿ ಜವಾಬ್ದಾರಿ ಹೆಚ್ಚಿಸಿದ್ದಾರೆ, ದೇಶದ ಎಲ್ಲಾ ಕಡೆಯಿಂದ ಬಂದ ಬಾಂಧವರು ಸತ್ಕರಿಸಿದ್ದಾರೆ ಅವರೆಲ್ಲರಿಗೂ ಕೃತಜ್ಞತೆ ಎಂದ ಅವರು, ಈ ಕಾರ್ಯಕ್ರಮದ ಬಗ್ಗೆ ಆಯೋಜಕರು ತಿಳಿಸಿದಾಗ, ನನಗೆ ಸನ್ಮಾನಗಳ ಬಗ್ಗೆ ಆಸಕ್ತಿ ಇಲ್ಲ ಎಂದಿದ್ದೆ, ಐತಿಹಾಸಿಕ ನೆಲದಲ್ಲಿ ನಡೆಯುವ ಈ ಸಮಾವೇಶದಲ್ಲಿ ಸಮುದಾಯದ ಎಲ್ಲರೂ ಸಂಘಟಿತರಾಗುವದು ತುಂಬಾ ಮುಖ್ಯ, ಅವಕಾಶದಿಂದ ವಂಚಿತರಾದವರು, ಸಾಮಾಜಿಕ ನ್ಯಾಯದಿಂದ ದೂರಾದವರು ಜಾತಿ ಸಮಾವೇಶ ಮಾಡುವ ಅವಶ್ಯಕತೆ ಇದೆ, ಸಂವಿಧಾನದ ಹಕ್ಕು ಪಡೆದುಕೊಳ್ಳಲು ನಾವು ಸಂಘಟಿತರಾಗಬೇಕು ಎಂದರು..

ಕರ್ನಾಟಕದಲ್ಲಿ ಮಾತ್ರ ರಾಜಕೀಯವಾಗಿ ಕುರುಬರು ಮುಂದಿದ್ದಾರೆ, ಬೇರೆ ರಾಜ್ಯದಲ್ಲಿ ಇಲ್ಲ, ಅದಕ್ಕೆ ಸಂಘಟನೆ ಹಾಗೂ ನಾಯಕತ್ವದ ಕೊರತೆಯ ಮುಖ್ಯ ಕಾರಣ, ಈ ಉದ್ದೇಶದಿಂದಲೇ ಇಂತಹ ಸಮಾವೇಶದ ಅವಶ್ಯಕತೆ ಇದೆ, ನಮ್ಮಲ್ಲಿ ಅನೇಕ ಮಹಾಪುರುಷರು ಇದ್ದರೂ ಸಂಘಟನೆಯ ಕೊರತೆಯಿಂದ ನಾವು ಹಿಂದುಳಿದಿದ್ದೇವೆ ಎನಿಸುತ್ತದೆ ಎಂದರು.

ಜಾತಿ ಆಚರಣೆ ಮಾಡುವ ಯಾವ ಮಠವನ್ನು ನಾನು ನಂಬುವುದಿಲ್ಲ, ಮಾನವೀಯತೆಗೆ ಬೆಲೆ ನೀಡುವ ಮಠ ಇರಬೇಕು, ಕಾಗಿನೆಲೆ ಮಠ ಸಮಾಜದ ತುಳಿತಕ್ಕೆ ಒಳಗಾದವರಿಗೆ ಮಾಡಿದ ಮಠ, ಅಲ್ಲಿ ಯಾರು ಬೇಕಾದವರು ಬರಬಹುದು, ನಾವು ಸರ್ಕಾರಿ ಕಾರ್ಯಕ್ರಮ ನೀಡಿದರೂ ಕೂಡಾ ಸರ್ವಜಾತಿ ಜನಾಂಗಕ್ಕೆ ಅನುಕೂಲ ಅಂತಾ ನೀಡುತ್ತೇವೆ, ಜನರ ನಡುವೆ ಬೆಂಕಿ ಹಚ್ಚಿ, ಸಂಘರ್ಷ ತರುವ ಕೆಲಸ ನಾವು ಮಾಡೋಲ್ಲ, ಇದನ್ನು ಕೆಲವರು ಸಹಿಸೋದಿಲ್ಲ, ಏನು ಮಾಡೋದು? ನನ್ನ ರಾಜಕೀಯ ಜೀವನದಲ್ಲಿ ಎಂದೂ ಜಾತಿಬೇಧ ಮಾಡಿಲ್ಲ ಮುಂದೆಯೂ ಮಾಡೋಲ್ಲ ಎಂದು ನಿಮ್ಮ ಮುಂದೆ ಹೇಳುತ್ತೇನೆ ಎಂದರು..

ನಮ್ಮ ವಿರೋಧಿಗಳು ಆಸೆ ಆಮಿಷ ತೋರಿಸಿದ್ದೇವೆ ಎಂದು ದೂರು ನೀಡಿದರು, ಆದರೆ ಅದು ಜನರ ಬಗ್ಗೆ ಇರುವ ಕಾಳಜಿ, ಅವರಿಗೆ ನೆಮ್ಮದಿ ಜೀವನ ನೀಡಬೇಕು, ಸಮಾನತೆ ಆಗಬೇಕು ಎಂಬ ಆಶಯಿಂದ ಯೋಜನೆ ನೀಡಿದ್ದೇವೆ ಅಷ್ಟೇ, ಆದರೆ ನಿಮಗೆ ಅದು ಬೇಡ, ಬಡವರು ನಿಮ್ಮ ಮುಂದೆ ಯಾವಾಗಲೂ ಕೈ ಒಡ್ಡಿ ನಿಲ್ಲಬೇಕು ಎನ್ನುವದೇ ನಿಮ್ಮ ಆಶಯ, ಆದರೆ ಬಡವ, ಹಿಂದುಳಿದ, ಶೋಷಿತರು ಯಾವತ್ತೂ ಬೇರೆಯವರಿಗೆ ಮೋಸ ಮಾಡುವ ಬುದ್ದಿ ಹೊಂದಿಲ್ಲ ಎಂದರು..

ಕೊನೆಗೆ ಅವರೇ ನೆರದಿದ್ದ ಎಲ್ಲರಿಗೂ ಧನ್ಯವಾದ ತಿಳಿಸಿ ಕಾರ್ಯಕ್ರಮಕ್ಕೆ ನಾಂದಿ ಹಾಡಿದರು..

ವರದಿ ಪ್ರಕಾಶ ಕುರಗುಂದ..