ನಮ್ಮಲ್ಲಿ ಸಿಂಧೂರ ಲಕ್ಷ್ಮಣ ರೀತಿ ರಮೇಶ ಜಾರಕಿಹೊಳಿ ಇದ್ದಾರೆ..
ನಾವೆಲ್ಲಾ ಅತೃಪ್ತರು ಹೊಂದಾಣಿಕೆ ಮಾಡಿಕೊಂಡಿದ್ದೇವೆ..
ಈಶ್ವರಪ್ಪ ಜೊತೆ ಕಿತ್ತೂರು ಚೆನ್ನಮ್ಮನ ವಂಶದವರಾದ ನಾವಿದ್ದೇವೆ..
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್..
ಬಾಗಲಕೋಟೆ : ಜಿಲ್ಲೆಯ ಕುಚನೂರು ಗ್ರಾಮದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು, ಬಿಜೆಪಿಯಲ್ಲಿ ನಾವೆಲ್ಲ ಕೆಲ ಅತೃಪ್ತರು ಒಂದು ಗುಂಪಾಗಿದ್ದೇವೆ, ನಾವೆಲ್ಲರೂ ಸೇರಿ ಹೊಸ ನಾಡು ಕಟ್ಟಬೇಕೆಂಬ ಚಿಂತನೆಯಿದೆ ಎಂದು ರಾಜ್ಯ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ ಎಂಬ ಮಾತಿಗೆ ಸಾಕ್ಷಿಯಾದಂತೆ ಮಾತನಾಡಿದ್ದಾರೆ..
ನಮ್ಮ ಜೊತೆ ಇನ್ನೊಬ್ಬ ಸಿಂಧೂರ ಲಕ್ಷ್ಮಣ ಇದ್ದಾರೆ, ಶಾಸಕ ರಮೇಶ ಜಾರಕಿಹೊಳಿ ಅವರು ಸಿಂಧೂರ ಲಕ್ಷ್ಮಣ ರೀತಿ ನಮ್ಮ ಜೊತೆ ಇದ್ದಾರೆ, ಬಿಜೆಪಿಯಲ್ಲಿ ನಾವೆಲ್ಲ ಅತೃಪ್ತರು ಹೊಂದಾಣಿಕೆ ಮಾಡಿಕೊಂಡಿದ್ದೇವೆ, ನಾವೆಲ್ಲ ಒಂದಾಗಿ ಹೊಸ ನಾಡು ಕಟ್ಟುವ ಚಿಂತನೆಯಲ್ಲಿ ಇದ್ದೇವೆ ಎಂದಿದ್ದಾರೆ..

ಈಶ್ವರಪ್ಪ ಅವರನ್ನು ಬಿಜೆಪಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲಾ, ನಮ್ಮ ಕೆ ಎಸ್ ಈಶ್ವರಪ್ಪ ಅವರಿಗೆ ಅನ್ಯಾಯ ಆಗಿರಬಹುದು, ನಾವು ಈಶ್ವರಪ್ಪ ಅವರನ್ನು ಬಿಟ್ಟುಕೊಡುವ ಮಕ್ಕಳಲ್ಲ, ಸಿದ್ದರಾಮಯ್ಯ ನಂತರ ರಾಜ್ಯಕ್ಕೆ ಈಶ್ವರಪ್ಪ ಅವರನ್ನು ಬಿಟ್ಟರೆ ಮತ್ಯಾರೂ ಇಲ್ಲ ಎಂದಿದ್ದಾರೆ..
ಈಶ್ವರಪ್ಪ ಅವರನ್ನು ಬಿಜೆಪಿಗೆ ವಾಪಸ್ ಕರೆದು ತರುತ್ತೇವೆ, ಅವರನ್ನು ನಾವು ಸಿಎಂ ಮಾಡೋವರೆಗೂ ಬಿಡುವದಿಲ್ಲ, ಈಶ್ವರಪ್ಪ ಅವರ ಜೊತೆಗೆ ಕಿತ್ತೂರು ಚನ್ನಮ್ಮನ ವಂಶದವರಾದ ನಾವು ಇದ್ದೇವೆ ಎಂದಿದ್ದಾರೆ..
ವರದಿ ಪ್ರಕಾಶ ಬಸಪ್ಪ ಕುರಗುಂದ..