ನಮ್ಮ ತಪ್ಪಾಗಿದೆ, ಒಂದು ಅವಕಾಶ ಕೊಡಿ ಎಂದು ಸಕ್ಕರೆ ಸಚಿವರೇ ಹೇಳಿದ್ದಾರೆ..
ಅದಕ್ಕಾಗಿಯೇ ರಾಷ್ಟ್ರೀಯ ಹೆದ್ದಾರಿ ಹೋರಾಟವನ್ನು ಹಿಂಪಡೆದಿದ್ದೇವೆ..
ಚುನ್ನಪ್ಪ ಪೂಜಾರಿ, ಕರಾರೈ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ..
ಬೆಳಗಾವಿ : ಸರ್ಕಾರಕ್ಕೆ ಗೌರವ ಕೊಡಬೇಕು ಅಂತ ನಾವು ನಮ್ಮ ಮುಂದಿನ ಹೋರಾಟ ಹಿಂಪಡೆದಿದ್ದು, ಸ್ವತಹ ಸಕ್ಕರೆ ಸಚಿವರೇ ಬಂದು ನಮ್ಮ ಬಳಿ ತಪ್ಪಾಗಿದೆ ಅವಕಾಶ ಕೊಡಿ ಸಮಸ್ಯೆ ಬಗೆಹರಿಸುವೆ ಎಂದು ಕೇಳಿದ್ದರು.
ಆದ್ದರಿಂದ ರಾಷ್ಟ್ರೀಯ ಹೆದ್ದಾರಿಗೆ ಹೋಗುವ ಹೋರಾಟವನ್ನು ನಾವು ಹಿಂಪಡೆದ್ದೇವು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಚುನ್ನಪ್ಪ ಪೂಜಾರಿ ಹೇಳಿದ್ದಾರೆ.
ಶುಕ್ರವಾರ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಗುರ್ಲಾಪುರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಪ್ಪಾಗಿದೆ ಎನ್ನುವ ಮಟ್ಟಕ್ಕೆ ಸರ್ಕಾರ ಬಂದಾಗ ಅದನ್ನ ನಾವು ಮಣ್ಣಿಸಿದೆವು.
3500 ರೂ ನಮ್ಮ ನ್ಯಾಯಯುತ ಬೇಡಿಕೆ ಇರುವದು, ಆದರೆ
ಸರ್ಕಾರ 3200 ರೂ ಕೊಡ್ತಿವಿ ಅಂತ ಹೇಳುತ್ತಿದೆ. 3400 ರೂಪಾಯಿ ಆದರೂ ಸರ್ಕಾರ ಕೊಟ್ಟು ಸಿಎಂ ಇದನ್ನ ಬಗೆಹರಿಸಬೇಕು. ಮುಖ್ಯಮಂತ್ರಿ ಈ ಸಮಸ್ಯೆ ಇತ್ಯರ್ಥ ಮಾಡಿದಿದ್ದರೆ, ಮುಂದೆ ಒಂದು ಕೋಟಿ ಜನರ ನೇತೃತ್ವದಲ್ಲಿ ಹೋರಾಟ ಮಾಡ್ತಿವಿ ಎಂದರು.
ಸ್ವಾಮೀಜಿಗಳು, ಮಾಜಿ ಸೈನಿಕರು, ವಿದ್ಯಾರ್ಥಿಗಳು, ಎಲ್ಲರೂ ಸೇರಿ ಹೋರಾಟ ಮಾಡ್ತಿವಿ. ಮುಖ್ಯಮಂತ್ರಿಗಳ ಹಣೆಬಹರ ನಾವೇ ಬರೆಯುತ್ತೆವೆ. ತೆರಿಗೆ ಹಾಗೂ ವಿವಿಧ ಮೂಲಗಳಿಂದ ಸರ್ಕಾರಕ್ಕೆ ಆದಾಯ ಬರುತ್ತಿರುವಾಗ ಈ ವಿಳಂಬ ಏಕೆ ಎಂದರು. ಕಾರ್ಖಾನೆಯವರು ಮೊಂಡುತನ ಪ್ರದರ್ಶನ ಮಾಡುತ್ತಿದ್ದಾರೆ. ಇಂದು ಸಮಸ್ಯೆ ಬಗೆಹರಿಸಿ ನಾಳೆಯೇ ಕಾರ್ಖಾನೆ ಪ್ರಾರಂಭಿಸಲಿ. ಕಾರ್ಖಾನೆಯ ಮಾಲೀಕರು ಮೊಂಡುತನ ಬಿಟ್ಟು ರೈತರನ್ನು ಉದ್ಧಾರ ಮಾಡವ ಕಾಳಜಿ ತೋರಲಿ ಎಂದರು.