ನಮ್ಮ ಹಳೆಯ ದುಷ್ಮನಗಳೆಲ್ಲಾ ಮಲಗಿ ಬಿಟ್ಟಿವೆ, ಹೊಸ ದುಷ್ಮನಗಳು ನಮಗೂ ಬೇಕು..
ರಾಜಕೀಯ ಷೇರು ಮಾರುಕಟ್ಟೆಯಂತೆ, ಕಾದಾಟ ಇರಲೇಬೇಕು..
ಸಚಿವ ಸತೀಶ ಜಾರಕಿಹೊಳಿ..
ಬೆಳಗಾವಿ : ಲೋಕಸಭಾ ಚುನಾವಣೆಯ ನಂತರ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಪಕ್ಷದಲ್ಲಿಯೇ ಆರೋಪ ಪ್ರತ್ಯಾರೋಪಗಳ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರು, ಕಳೆದ 30 ವರ್ಷಗಳಿಂದ ಇದ್ದ ನಮ್ಮ ರಾಜಕೀಯ ದುಷ್ಮನಗಳು ಈಗ ಮಲಗಿಬಿಟ್ಟಿವೆ, ಹೊಸ ದುಷ್ಮನಗಳು ಹುಟ್ಟಿಕೊಂಡಿವೆ, ನಮಗೂ ದುಷ್ಮನಗಳು ಇರಬೇಕು ಎಂದು ಮಾರ್ಮಿಕವಾಗಿ ತಮ್ಮ ವಿರೋಧಿಗಳ ಮಂತ್ರಕ್ಕೆ ತಾವು ತಿರುಮಂತ್ರ ಕೊಡಲು ಸಿದ್ಧರಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ..
ಅಥಣಿ ಮತಕ್ಷೇತ್ರದಲ್ಲಿ ನಮಗೆ 10 ಸಾವಿರ ಲೀಡ್ ಸಿಕ್ಕರೂ ಸಂತೋಷ ಇತ್ತು. ಆದರೆ 7 ಸಾವಿರ ಮೈನಸ್ಸ್ ಆಗಿದ್ದರಿಂದ ನೋವಾಗಿದೆ. ಅನಾವಶ್ಯಕವಾಗಿ ನಾವು ಯಾರನ್ನು ಟಾರ್ಗೆಟ್ ಮಾಡಿಲ್ಲ. ಅಥಣಿ, ಕುಡಚಿ ಮತಕ್ಷೇತ್ರದಲ್ಲಿ ಏಕೆ ಸಮಸ್ಯೆಯಾಗಿದೆ ಎಂಬುವುದನ್ನು ಸ್ವತಃ ಕಣ್ಣಾರೇ ಕಂಡಿದ್ದೇನೆ ಎಂದಿದ್ದಾರೆ..

ನಗರದ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಶಾಸಕ ಮಹೇಂದ್ರ ತಮ್ಮಣ್ಣವರ್ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ಚುನಾವಣೆ ಇನ್ನೆರಡು ದಿನ ಇರುವಾಗ ಸ್ವತಃ ಕುಡಚಿಯಲ್ಲಿ ನಾನೆ ಟಿಕಾಣಿ ಹುಡಿದರೂ ಶಾಸಕ ಮಹೇಂದ್ರ ತಮ್ಮಣ್ಣವರ್ ನನ್ನ ಕೈಗೆ ಸಿಕ್ಕಿಲ್ಲ. ಇನ್ನು ಅಥಣಿಯಲ್ಲಿ 77 ಸಾವಿರ ವಿಧಾನಸಭೆ ಚುನಾವಣೆಯಲ್ಲಿ ಲೀಡ್ ಸಿಕ್ಕಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ 7 ಸಾವಿರ ಮೈನಸ್ಸ್ ಆಗಿದೆ. ಕನಿಷ್ಠ 10 ಸಾವಿರ ಲೀಡ್ ಸಿಕ್ಕರೂ ಸಂತೋಷ ಇತ್ತು. ಮೈನಸ್ಸ್ ಆಗಿದ್ದರಿಂದ ನಾನು ಕಾರ್ಯಕರ್ತರಿಗೆ ಅಲ್ಲಿ ನಡೆದ ಬೆಳವಣಿಗೆಗಳನ್ನು ತಿಳಿಸಿದ್ದೇನೆಂದರು.
ಇನ್ನು ಶಾಸಕರಾದ ಲಕ್ಷ್ಮಣ ಸವದಿ, ಮಹೇಂದ್ರ ತಮ್ಮಣ್ಣವರ್ ಅಥಣಿಯಲ್ಲಿ ಸೇರಿದ್ದ ಬಗ್ಗೆ ಮಾತನಾಡಿದ ಅವರು, ಜನ, ಕಾರ್ಯಕರ್ತರು, ಪಕ್ಷ ನಮ್ಮ ಪರ ಇದೆ. ನಮ್ಮನ್ನು ವಿರೋಧಿಸಲು ಅವರು ಯಾರು ಎಂದು ಪ್ರಶ್ನಿಸಿದರು. ತಾವು ಎನು ಮಾಡಿದ್ದಾರೆ ಎಂದು ಮನವರಿಕೆ ಮಾಡಿಕೊಳ್ಳಬೇಕು. ಶಾಸಕರ ಬಗ್ಗೆ ದೂರು ನೀಡಲ್ಲ. ದೂರು ನೀಡಿದರೂ ನಮ್ಮಲ್ಲಿ ಇನ್ನುವರೆಗೆ ಯಾರ ಮೇಲೆಯೂ ಕ್ರಮವಾಗಿಲ್ಲ. ಇವರು ಮಾಡಿದ್ದರ ಬಗ್ಗೆ ಜನಕ್ಕೆ ತಿಳಿಸುತ್ತೇನೆಂದರು ಹೇಳಿದರು.
ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಎಲ್ಲಾ ಕಾಂಗ್ರೆಸ್ ಶಾಸಕರು ಲೀಡ್ ಕೊಟ್ಟಿದ್ದಾರೆ. ಅಥಣಿಯಲ್ಲಿ ಶಾಸಕ ಸವದಿ ಅವರು ಲೀಡ್ ಕೊಟ್ಟಿದ್ದರೆ ಅವರ ನಮ್ಮ ಬಾಂಧವ್ಯ ಚೆನ್ನಾಗಿ ಉಳಿಯತ್ತಿತ್ತು. ಆದರೆ ಈಗ ನಮ್ಮಿಂದ ಅಂತರ ಕಾಯ್ದುಕೊಂಡಿದ್ದಾರೆ. ಚುನಾವಣೆಕ್ಕಿಂತ ಮುಂಚೆ ಪ್ರಿಯಂಕಾಗೆ ಲೀಡ್ ಕೊಡುತ್ತೇನೆ ಎಂದು ಅವರೇ ಸ್ವತಃ ಹೇಳಿದ್ದರು. ಆದರೆ 7 ಸಾವಿರ ಮೈನಸ್ಸ್ ಆಗಿದ್ದರಿಂದ ಅಥಣಿ ಜನತೆ ಅವರನ್ನೇ ಪ್ರಶ್ನಿಸುತ್ತಿದ್ದಾರೆ. ಜನಕ್ಕೆ ಅವರ
ಮೂರು ಜಿಲ್ಲೆಗಳು ಆಗಬೇಕು: ಬೆಳಗಾವಿ ವಿಭಜಿಸಿ ಚಿಕ್ಕೋಡಿ, ಗೋಕಾಕ ಕೇಂದ್ರವಾಗಿ ಇನ್ನೆರಡು ಹೊಸ ಜಿಲ್ಲೆಗಳಾಗಬೇಕು. ಬೆಳಗಾವಿ ಜಿಲ್ಲೆ ಪ್ರಾದೇಶಿಕವಾಗಿ ಬಹಳ ದೊಡ್ಡದಿದೆ. ಆಡಳಿತದ ದೃಷ್ಟಿಯಿಂದ ಇದು ಸರಿಯಲ್ಲ. ಜಿಲ್ಲೆ ವಿಭಜನೆ ಆಗಬೇಕು ಎಂದು ನಾನು ಹಿಂದೆಯೂ ಹೇಳಿದ್ದೆ. ಈಗಲೂ ಅಷ್ಟೇ. ಆಡಳಿತ ಸುಗಮವಾಗಲು ಗೋಕಾಕ- ಚಿಕ್ಕೋಡಿಯನ್ನು ಜಿಲ್ಲೆಯನ್ನಾಗಿ ಮಾಡಬೇಕಿದೆ ಎಂದರು.
ಬೆಳಗಾವಿ ಜಿಲ್ಲೆಯನ್ನು ಗೋಕಾಕ್, ಚಿಕ್ಕೋಡಿ ಹಾಗೂ ಬೆಳಗಾವಿ ಎಂಬ ಮೂರು ಜಿಲ್ಲೆಗಳನ್ನಾಗಿ ಮಾಡಲು ಒತ್ತಡ ಮೊದಲಿನಿಂದಲೇ ಇದ್ದೇ ಇದೆ. ಬೆಳಗಾವಿಯು ರಾಜ್ಯದ ಅತೀ ದೊಡ್ಡ ಜಿಲ್ಲೆಯಾಗಿದೆ. ಉಡುಪಿಯಂತ ಜಿಲ್ಲೆಯಲ್ಲಿ 9 ಲಕ್ಷ ಜನ ಇದ್ದಾರೆ. ಆದರೆ ಬೆಳಗಾವಿ ತಾಲೂಕಿನಲ್ಲೇ 9 ಲಕ್ಷ ಜನ ಇದ್ದಾರೆ. ಆದ್ದರಿಂದ 18 ವಿಧಾನಸಭಾ ಕ್ಷೇತ್ರಗಳ ಭಾಗವನ್ನು ವ್ಯಾಪಿಸಿರುವ ಕರ್ನಾಟಕದ ಅತಿದೊಡ್ಡ ಜಿಲ್ಲೆಯಾದ ಬೆಳಗಾವಿಯನ್ನು ಮೂರು ಭಾಗಗಳಾಗಿ ವಿಭಜಿಸುವ ಬಗ್ಗೆ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.
ಬೆಳಗಾವಿಯ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರ ಸೋಲಿನ ಕುರಿತು ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ವೈಯಕ್ತಿಕ ಜವಾಬ್ದಾರಿ ವಿಷಯವನ್ನೂ ಒತ್ತಿ ಹೇಳಿದರು. ಹೆಬ್ಬಾಳ್ಕರ್ ಅವರ ಸೋಲಿಗೆ ಯಾರೂ ಜವಾಬ್ದಾರರಲ್ಲ. ಅವರು ತಮ್ಮ ಜವಾಬ್ದಾರಿಯನ್ನು ತಾವೇ ಹೊರಬೇಕೆಂದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಜಿಲ್ಲಾ ಅಧ್ಯಕ್ಷ ವಿನಯ ನಾವಲಗಟ್ಟಿ, ಕಾಂಗ್ರೆಸ್ ಮುಖಂಡರಾದ ಸೈಯದ್ ಮನಸೂರ ಸೇರಿದಂತೆ ಹಲವು ಮುಖಂಡರಿದ್ದರು.
ವರದಿ ಪ್ರಕಾಶ ಬಸಪ್ಪ ಕುರಗುಂದ..