ನಮ್ರತೆಯಿಂದ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ 2023..

ನಮ್ರತೆಯಿಂದ ನಡೆದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ 2023..

ರಾಜ್ಯಕ್ಕೆ ಹೆಮ್ಮೆ ತರುವ ಕಾರ್ಯ ಮಾಡಿದ ಅರಣ್ಯ ಇಲಾಖೆಯ ಶಿಸ್ತು ಶ್ಲಾಘನೀಯ..

ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಹೇಳಿಕೆ..

ಬೆಳಗಾವಿ : ಸೋಮವಾರ ದಿನಾಂಕ 11/09/2023 ರಂದು, ಬೆಳಿಗ್ಗೆ 9 ಗಂಟೆಗೆ, ನಗರದ ಅರಣ್ಯ ಇಲಾಖೆಯ ಸಂಕೀರ್ಣದಲ್ಲಿ 2023ರ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯನ್ನು ಅತ್ಯಂತ ನಮ್ರತಾ ಭಾವದಿಂದ ಆಚರಣೆ ಮಾಡಲಾಯಿತು..

ನಾಡಿನ ಅರಣ್ಯ ಮತ್ತು ವನ್ಯಜೀವಿ ಸಂಪತ್ತನ್ನು ಸಂರಕ್ಷಿಸಲು ಪ್ರಾಣತ್ಯಾಗ ಮಾಡಿದ, ಅರಣ್ಯ ಇಲಾಖೆಯ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸುವ ಈ ಅರ್ಥಪೂರ್ಣ ಕಾರ್ಯಕ್ರಮವು ಮೊದಲಿಗೆ ಗಣ್ಯರು ಹಾಗೂ ಅರಣ್ಯ ಅಧಿಕಾರಿಗಳು ಹುತಾತ್ಮರಿಗೆ ಹೂಗುಚ್ಚ ಸಮರ್ಪಿಸುವದರ ಕಾರ್ಯಕ್ರಮದ ಆರಂಭವಾಯಿತು..

ನಂತರ ರಾಷ್ಟ್ರಗೀತೆ ಮತ್ತು ಕುಶಾಲ ತೋಪು ಹಾರಿಸುವದರ ಮೂಲಕ, ಹುತಾತ್ಮರರಿಗೆ ನಮನ ಸಲ್ಲಿಸಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಾದ ಮಂಜುನಾಥ ಚೌಹಾಣ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಅರಣ್ಯ ರಕ್ಷಿಸುವ, ಹೋರಾಟ ಮಾಡುವ, ಅದರಲ್ಲಿ ಹುತಾತ್ಮರಾದ ಹಲವು ಮಹನೀಯರ ಕಥೆ ಹೇಳಿ, ಅವರ ತ್ಯಾಗ ಬಲಿದಾನದಿಂದ ಇಂದು ನಮ್ಮ ಪೀಳಿಗೆ ಹಸಿರು ಕಾಣುತ್ತಿದೆ ಎಂದರು..

ಉಪ ಅರಣ್ಯ ಸಂರಕ್ಷಣಾಧಿಕಾರಿಯಾದ ಶಂಕರ ಕಲ್ಲೋಳಿಕರ ಅವರು ಮಾತನಾಡಿ, ರಾಜ್ಯದಲ್ಲಿ ಈವರೆಗೆ ಓಟ್ಟು 58 ಹಾಗೂ ಜಿಲ್ಲೆಯಲ್ಲಿ 5 ಹಸಿರು ಯೋಧರು, ಅರಣ್ಯ ಸಂರಕ್ಷಣೆ ಮಾಡುವಲ್ಲಿ ತಮ್ಮ ಪ್ರಾಣ ನೀಡಿರುವ ಬಗ್ಗೆ ಮಾಹಿತಿ ನೀಡಿದರು.

ಇನ್ನು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ, ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ, ಶ್ರೀಮತಿ ಎಲ್ ವಿಜಯಲಕ್ಷ್ಮಿ ದೇವಿ ಅವರು ಮಾತನಾಡಿ, ಚಿಪ್ಕೊ ಚಳುವಳಿಯಿಂದ ಇಲ್ಲಿವರೆಗೂ ಅನೇಕ ಅರಣ್ಯ ಪ್ರೇಮಿಗಳು, ಅರಣ್ಯ ಯೋಧರು ಈ ಹಸಿರು ಭೂಮಿಯನ್ನು ಕಾಯುವ ಕೆಲಸ ಮಾಡುತ್ತಾ ಬಂದು, ಕೊನೆಗೆ ತಮ್ಮ ಪ್ರಾಣ ನೀಡಿ, ಹುತಾತ್ಮರಾಗಿದ್ದಾರೆ ಅಂತವರಿಗೆ ನಮ್ಮ ನಮನಗಳು, ಇನ್ನೂ ಅರಣ್ಯ ನಾಶ ಮಾಡುವ ಒಂದು ದೊಡ್ಡ ಜಾಲವೇ ನಮ್ಮ ನಡುವೆ ಇದೆ, ಅಂತಹ ಕಾಡುಗಳ್ಳರ ಬಗ್ಗೆ ಇಲಾಖೆ ಅತೀ ಎಚ್ಚರದಿಂದ ಇದ್ದು, ಅವರನ್ನು ಮಟ್ಟ ಹಾಕಬೇಕು, ಮುಂದೆ ನ್ಯಾಯಾಲಯದಲ್ಲಿ ಅವರು ಯಾವುದೇ ರೀತಿಯಲ್ಲಿ ಪಾರಾಗುವ ಅವಕಾಶ ಇಲ್ಲದಂತೆ ತನಿಖಾ ವರದಿ ಹಾಕಬೇಕು ಎಂದರು..

ಇನ್ನು ಜಿಲ್ಲಾಧಿಕಾರಿಗಳಾದ ನಿತೇಶ್ ಪಾಟೀಲ್ ಅವರು ಮಾತನಾಡಿ, ಹುತಾತ್ಮರಿಗೆ ನಮನ ಸಲ್ಲಿಸುತ್ತಾ, ರಾಜ್ಯ ಅರಣ್ಯ ಇಲಾಖೆಯ ಸಿಬ್ಬಂದಿಗಳು ಮಾಡುವ ಶಿಸ್ತಿನ ಕಾರ್ಯದಿಂದ ಇಂದು ರಾಜ್ಯಕ್ಕೆ ಹೆಮ್ಮೆಯಾಗಿದೆ, ದೇಶದಲ್ಲಿ ಬೇರೆ ರಾಜ್ಯದಲ್ಲಿ ಕಾಡು ಕಡಿಮೆಯಾಗುತ್ತಾ ಇದ್ದರೆ, ಕರ್ನಾಟಕದಲ್ಲಿ ಹೆಚ್ಚಾಗಿದೆ, ದೇಶದಲ್ಲಿಯೇ ಹೆಚ್ಚು ಆನೆಗಳನ್ನು ಹೊಂದಿದ ರಾಜ್ಯ ನಮ್ಮದಾಗಿದೆ, ಹುಲಿಗಳ ಸಂರಕ್ಷಣೆಯಲ್ಲಿ ನಮಗೆ ಎರಡನೇ ಸ್ಥಾನ, ಅರಣ್ಯ ವಿಭಾಗದಲ್ಲಿ ಹೀಗೆಲ್ಲ ಸಾಧನೆ ಮಾಡಿದ ನಮ್ಮ ಅರಣ್ಯ ಸಿಬ್ಬಂದಿಯನ್ನು ನಾವು ಮೆಚ್ಚಲೇಬೇಕು ಎಂದರು..

ಇನ್ನು ಬೆಳಗಾವಿಯ ಬ್ರಿಗೇಡಿಯರ್ ಸಿ ದಾಯಾಲನ ಹಾಗೂ ಜಿಲ್ಲಾ ಪಂಚಾಯತಿಯ ಸಿಇಒ ಹರ್ಷಲ್ ಭೋಯಲ ಅವರುಗಳು ಮಾತನಾಡಿ, ಅರಣ್ಯ ಹುತಾತ್ಮರಿಗೆ ನುಡಿನಮನ ಸಲ್ಲಿಸಿ, ಈಗಿರುವ ಸಿಬ್ಬಂದಿಗೆ ಸ್ಫೂರ್ತಿಯ ನುಡಿಗಳನ್ನು ಆಡಿದರು..

ಕೊನೆಗೆ ಕಾರ್ಯಕ್ರಮದಲ್ಲಿ ಭಾಗಿಯಾದ ಅತಿಥಿಗಳಾದ, ನ್ಯಾಯಾಂಗ, ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಪೊಲೀಸ್, ಇಲಾಖೆಗಳ ಅಧಿಕಾರಿಗಳು, ಹಾಗೂ ಸಿಬ್ಬಂದಿ, ಆಯೋಜನೆ ಮಾಡಿರುವ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಎಲ್ಲರೂ ಸೇರಿ ಎರಡು ನಿಮಿಷಗಳ ಮೌನ ಆಚರಣೆ ಮಾಡುವ ಮೂಲಕ ಹುತಾತ್ಮರಿಗೆ ಶ್ರದ್ಧಾಂಜಲಿ ಸಲ್ಲಿಸಿ, ಕಾರ್ಯಕ್ರಮ ಸಮಾಪ್ತಿ ಗೊಳಿಸಿದರು..

ವರದಿ ಪ್ರಕಾಶ ಕುರಗುಂದ….