ನರಿಗಳು ನ್ಯಾಯವನ್ನು ಹೇಳುವಾಗ ಕಿವಿಗೊಟ್ಟು ಕೇಳಬೇಕಾ….???
ಭ್ರಷ್ಟ, ದುಷ್ಟರನ್ನು ದಂಡಿಸುವ ದಂಡನಾಯಕನ ರಭಸಕ್ಕೆ ಅಡ್ಡಗಾಲು ಹಾಕಿದರೆ ???
ಜನಕಲ್ಯಾಣ ಕನಸುಕಂಡ ಜನನಾಯಕನ ಕಥೆಯ ವ್ಯಥೆ…
ಬೆಳಗಾವಿ : ಕಳೆದ ಎರಡು ತಿಂಗಳ ಹಿಂದೆ ರಾಜ್ಯದ ವಿಧಾನ ಸಭೆ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದ ಜನರು ಅತೀ ಅಚ್ಚರಿಯ ತೀರ್ಪು ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿ, ಅಧಿಕಾರ ನಡೆಸಲು ಅನುಮತಿ ನೀಡಿದರು..
ಜನರ ನಿರೀಕ್ಷೆಯಂತೆಯೇ ಶುದ್ಧ ಹಸ್ತದ, ಬಡವರ ಪಾಲಿನ ಭಾಗ್ಯವಿದಾತಾ ಆದ ಸಿದ್ದರಾಮಯ್ಯ ಅವರು ರಾಜ್ಯದ ಮುಖ್ಯಮಂತ್ರಿಯಾಗಿ, ಡಿ ಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿಯಾದರು.
ಕಾಂಗ್ರೆಸ್ ಪಕ್ಷ ಜನರ ಋಣವನ್ನು ತೀರಿಸಲು ಹಾಗೂ ನುಡಿದಂತೆ ನಡೆಯಲು, ತಾವು ಚುನಾವಣೆಯಲ್ಲಿ ಕೊಟ್ಟ ಭರವಸೆಗಳನ್ನು ಒಂದೊಂದಾಗಿ ಇಡೆರಿಸುತ್ತಾ ಜನರ ಪ್ರೀತಿ, ವಿಶ್ವಾಸಕ್ಕೆ ಪಾತ್ರವಾಗುತ್ತದೆ ಮುನ್ನಡೆಯುತ್ತಲೇ ಇದೆ..
ಹೀಗಿರುವಾಗ ರಾಜ್ಯದ ಎರಡನೇ ರಾಜಧಾನಿಯಾದ ಬೆಳಗಾವಿ ಜಿಲ್ಲೆಯೂ ಕೂಡಾ ರಾಜ್ಯದ ಪ್ರಮುಖ ರಾಜಕೀಯ ಶಕ್ತಿ ಕೇಂದ್ರವಾಗಿ ಹೊರಹೊಮ್ಮಿ, ರಾಜಕಾರಣದ ಪ್ರತಿ ಹಂತದಲ್ಲಿಯೂ ತನ್ನ ಪ್ರಾಬಲ್ಯವನ್ನು ಮೆರದಿದೆ ಎನ್ನಬಹುದು..
ಬೆಳಗಾವಿ ಜಿಲ್ಲೆಯಲ್ಲಿ ಪಕ್ಷಾತೀತವಾಗಿ ಹಲವಾರು ರಾಜಕೀಯ ನಾಯಕರು ತಮ್ಮ ವೈಶಿಷ್ಟತೆ ಹಾಗೂ ಚಾಕಚಕ್ಯತೆಯಿಂದ ತುಂಬಾ ಜನಪ್ರಿಯ ನಾಯಕರಾಗಿ ಇಡೀ ಜಿಲ್ಲೆಗೆ ಉತ್ತಮ ಹೆಸರು ತಂದಿದ್ದಾರೆ, ಅದರಲ್ಲಿ ಪ್ರಮುಖವಾಗಿ, ಮುಂಚೂಣಿಯಲ್ಲಿ ಕಂಡು ಬರುವವರು ಕರ್ನಾಟಕದ ಮಾಸ್ಟರ್ ಮೈಂಡ್ ಎಂದೇ ಕರೆಸಿಕೊಳ್ಳುವ ಸತೀಶ ಜಾರಕಿಹೊಳಿ ಅವರು..
ಜಿಲ್ಲೆ ಹಾಗೂ ರಾಜ್ಯ ರಾಜಕೀಯ ನಾಯಕರ ಮಧ್ಯ ತಮ್ಮ ವಿಶೇಷ ವ್ಯಕ್ತಿತ್ವದಿಂದ ಪ್ರತ್ಯೇಕವಾಗಿ ಕಾಣುವ ಸತೀಶ ಜಾರಕಿಹೊಳಿಯವರು, ತಾವು ಮಾಡುವ ಸಮಾಜಮುಖಿ, ಮಾನವೀಯ ಹಾಗೂ ವೈಚಾರಿಕ ಯೋಚನೆಯುಳ್ಳ ಕಾರ್ಯಗಳಿಂದ ಇಡೀ ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿಯೂ ಅವರ ಸಿದ್ದಾಂತ ಮತ್ತು ವ್ಯಕ್ತಿತ್ವವನ್ನು ಬೆಂಬಲಿಸುವ ಹಿಂಬಾಲಕರಿದ್ದದ್ದು ಅವರ ಜನಪ್ರಿಯತೆಗೆ ನಿದರ್ಶನವಾಗಿದೆ..
ಬಡವರ, ದೀನದಲಿತರ, ಹಿಂದುಳಿದವರ, ಶೋಷಿತರ, ಅಲ್ಪಸಂಖ್ಯಾತರ, ನಿರ್ಗತಿಕರ, ಹೆಣ್ಣುಮಕ್ಕಳ, ಅಬಲೆಯರ, ವಿಧ್ಯಾರ್ಥಿಗಳ, ನಿರುದ್ಯೋಗಿಗಳ, ಕಲಾವಿದರ, ರೋಗಿಗಳ, ಅಸಹಾಯಕರ ದ್ವನಿಯಾಗಿ, ರಾಜ್ಯದ ಯಾವುದೇ ಮೂಲೆಯಿಂದ ಸಹಾಯ ಬೇಡಿ ಬಂದರೆ, ಅವರ ಸಮಸ್ಯ ದೂರ ಮಾಡಿ, ಸಹಾಯ ಮಾಡುವ ಮಾನವತಾವಾದಿ ಗುಣದವರು ಎಂಬ ಮಾತಿದೆ…
ಅಧಿಕಾರ ಇರಲಿ ಅಥವಾ ಇಲ್ಲದಿರಲಿ, ಯಾವುದೇ ಜಾತಿ, ಧರ್ಮ, ಭಾಷೆ, ಗಡಿ, ಮೇಲೂ ಕೀಳು, ನೋಡದೇ ಎಲ್ಲರೂ ನನ್ನವರೇ ಎಂದು ಭಾವಿಸುವ ಸಹೃದಯಿ ಆಗಿರುವದರಿಂದಲೇ ಅವರಿಗೆ ಎಲ್ಲಕಡೆಗೂ ಇಷ್ಟೊಂದು ಜನಬೆಂಬಲ, ಅದೇ ಕಾರಣಕ್ಕೆ ಮೊನ್ನೆ ಸರ್ಕಾರ ಅಸ್ಥಿತ್ವಕ್ಕೆ ಬಂದಾಗ ಕೂಡಾ ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು..
ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ನಂತರ ಜಿಲ್ಲೆಯಲ್ಲಿ ಶಿಸ್ತುಬದ್ಧ ಹಾಗೂ ಜನೋಪಕಾರಿ ಕಾರ್ಯ ಮಾಡುತ್ತಾ, ಹಿಂದೆ ನಡೆದಂಥ ಜನವಿರೋಧಿ ಹಾಗೂ ಭ್ರಷ್ಟಾಚಾರದ ವ್ಯವಹಾರಗಳನ್ನು ದಾಖಲೆಗಳೊಂದಿಗೆ ಮಾಹಿತಿ ಮದೆದು, ಮಟ್ಟಹಾಕಲು ಪ್ರಾರಂಬಿಸಿದರು, ಈ ಹಂತದಲ್ಲಿ ಕೆಲ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪ್ರಕರಣ ದಾಖಲು ಮಾಡಿಸಿ, ಭ್ರಷ್ಟ ಆರೋಪ ಹೊತ್ತಿರುವ ಅಧಿಕಾರಿಗಳನ್ನು ಅಮಾನತ್ತು ಮಾಡಲಾಯಿತು..
ಇದೇ ರೀತಿ ಜಿಲ್ಲೆ ಹಾಗೂ ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿ, ನಮಗೆ ಅಧಿಕಾರ ನೀಡಿದ ಜನರ ಏಳಿಗೆಯ ಜೊತೆಗೆ ರಾಜ್ಯವನ್ನೂ ಕೂಡಾ ಅಭಿವೃದ್ದಿಯ ಪಥದಲ್ಲಿ ಸಾಗಿಸಬೇಕು ಎಂಬ ಕನಸು ಕಾಣುತ್ತಾ ನಾನಾ ರೀತಿಯ ಆಡಳಿತ ಸುಧಾರಣೆ ಮಾಡುವ ಪ್ರಯತ್ನದಲ್ಲಿರುವ ಅವರು ಮೊನ್ನೆ ಒಂದು ಸುದ್ದಿಗೋಷ್ಟಿಯಲ್ಲಿ ತಮ್ಮ ಸ್ವಪಕ್ಷದವರ ಮೇಲಿನ ಸ್ವಲ್ಪ ಅಸಮಾಧಾನವನ್ನು ಕೂಡಾ ಹೇಳಿಕೊಂಡಿದ್ದಾರೆ..
ಭ್ರಷ್ಟತೆಯಲ್ಲಿ ಭಾಗಿಯಾಗಿರುವ, ಜನರಿಗೆ ತೊಂದರೆ ನೀಡುವ, ಬಹಳ ದಿನಗಳವರೆಗೆ ಒಂದೇ ಸ್ಥಳದಲ್ಲಿ ಕಾರ್ಯನಿರ್ವಹಿಸುವ ಕೆಲ ಅಧಿಕಾರಿಗಳನ್ನು ಬೇರೆ ಕಡೆಗೆ ವರ್ಗ ಮಾಡಲು ಶಿಪಾರಸ್ಸು ಮಾಡಿದಾಗ, ನಮ್ಮ ಪಕ್ಷದ ಕೆಲ ಪ್ರಭಾವಿ ನಾಯಕರು ಮತ್ತೆ ಅಂತಹ ಅಧಿಕಾರಿಗಳಿಗೆ ಅಲ್ಲಿಯೇ ಕೆಲಸ ಮಾಡಲು ಅನೂಕೂಲ ಮಾಡಿಕೊಟ್ಟಿರುವುದು ಸಚಿವರ ಬೇಸರಕ್ಕೆ ಕಾರಣವಾದಂತಿದೆ…
ಜನರ ನಂಬಿಕೆ ಉಳಿಸಿಕೊಂಡು, ಉತ್ತಮ ಆಡಳಿತ ನೀಡಿ, ರಾಜ್ಯದ ಅಭಿವೃದ್ದಿ ಮಾಡಿ, ಜನಕಲ್ಯಾಣ ಮಾಡುವ ಯೋಚನೆ ಇರುವ ಸತೀಶ ಜಾರಕಿಹೊಳಿ ಅಂತಹ ನಾಯಕರು ಒಂದು ಕಡೆಯಾದರೆ, ಭ್ರಷ್ಟ ಅಧಿಕಾರಿಗಳಿಗೆ ಪ್ರೋತ್ಸಾಹ ಮಾಡಿ, ಸರ್ಕಾರದ ಖಜಾನೆ ಮತ್ತು ಜನರ ಹಣವನ್ನು ಲೂಟಿ ಮಾಡುವ ಆಸೆಬುರುಕ, ಪ್ರಭಾವಿ ರಾಜಕಾರಣಿಗಳು ಮತ್ತೊಂದು ಕಡೆ…
ಸ್ವಪಕ್ಷದಲ್ಲಿರುವ ಇಂತಹ ಹುಸರವಳ್ಳಿ ಗುಣದ ರಾಜಕಾರಣಿಗಳಿಗೆ ತಕ್ಕ ಪಾಠ ಕಲಿಸಿ, ಜನರು ತಮ್ಮ ಮೇಲೆ ಇಟ್ಟ ನಂಬಿಕೆ ಉಳಿಸಿಕೊಂಡು ರಾಜ್ಯವನ್ನು ಅಭಿವೃದ್ಧಿ ಮಾಡುವ ಜಾಣತನ ಮತ್ತು ಕೌಶಲ್ಯಗಳು ಸಿಎಂ ಸಿದ್ದರಾಮಯ್ಯ ಮತ್ತು ಸಚಿವ ಸತೀಶ ಜಾರಕಿಹೊಳಿ ಅವರಂತಹ ಉತ್ತಮ ರಾಜಕಾರಣಿಗಳಿಗೆ ಗೊತ್ತಿದೆ ಎಂಬ ಅಭಿಪ್ರಾಯವನ್ನು ಅವರ ಬೆಂಬಲಿಗರು ನೀಡಿದ್ದಾರೆ…
ವರದಿ ಪ್ರಕಾಶ ಕುರಗುಂದ..
