ನರ್ಸಿಂಗ್ ಪದವಿದರರಿಗೆ ಜರ್ಮನ್ ದೇಶದಲ್ಲಿ ಉದ್ಯೋಗಕ್ಕಾಗಿ ಸುವರ್ಣವಕಾಶ..

ನರ್ಸಿಂಗ್ ಪದವಿದರರಿಗೆ ಜರ್ಮನ್ ದೇಶದಲ್ಲಿ ಉದ್ಯೋಗಕ್ಕಾಗಿ ಸುವರ್ಣವಕಾಶ..

ಡಾ. ರವಿ ಪಾಟೀಲ್ ಆರೋಗ್ಯ ಹಾಗೂ ಶಿಕ್ಷಣ ಸೇವಾ ಸಂಸ್ಥೆಯಿಂದ ಅತ್ಯಾಧುನಿಕ ತರಬೇತಿ.

ಬೆಳಗಾವಿ : ಕಳೆದ ತಿಂಗಳಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಶ್ರೀ ನರೇಂದ್ರ ಮೋದಿ ಜೀ ಜರ್ಮನ ದೇಶದ ಚಾನ್ಸಲರ್ ಅವರೊಂದಿಗೆ ಸುಮಾರು ಒಪ್ಪಂದಗಳನ್ನು ಮಾಡಲಾಗಿದ್ದು, ಅದರಲ್ಲಿ ಬಹುಮುಖ್ಯವಾಗಿ ಜರ್ಮನ್ ದೇಶವು ಭಾರತೀಯ skilled professionals ಗಾಗಿ VISA ವೀಸಾ ಸಂಖ್ಯೆಯನ್ನು 20,000 ದಿಂದ 90,000 ಗೆ ಹೆಚ್ಚಿಸಿದೆ.
ನರ್ಸಿಂಗ್ ವಿಧ್ಯಾರ್ಥಿಗಳಿಗೆ ಜರ್ಮನಿಯಲ್ಲಿ ತುಂಬಾ ಬೇಡಿಕೆ ಇರುವುದರಿಂದ ಇದೊಂದು ಸುವರ್ಣಾವಕಾಶ. ಭಾರತದ ನರ್ಸಿಂಗ್ ಪದವಿದರರು ಜರ್ಮನ್ ದೇಶದಲ್ಲಿ ನರ್ಸಿಂಗ್ ಹುದ್ದೆಗೆ ಸೇರಿದ್ದಲ್ಲಿ ತಿಂಗಳಿಗೆ Rs.3,00,000/- ರಿಂದ Rs.4,00,000/- ಮಾಸಿಕ ಸಂಬಳ ಗಳಿಸುತ್ತಾರೆ.

ಈಗಾಗಲೇ ಡಾ.ರವಿ ಪಾಟೀಲ್ ಆರೋಗ್ಯ ಹಾಗೂ ಶಿಕ್ಷಣ ಸಂಸ್ಥೆಯಿಂದ 20 ವಿಧ್ಯಾರ್ಥಿಗಳು ಜರ್ಮನಿಯಲ್ಲಿ ನರ್ಸಿಂಗ್ ಹುದ್ದೆಯಲ್ಲಿದ್ದಾರೆ. ಈಗ ಬರುವ ಶೈಕ್ಷಣಿಕ ವರ್ಷದಲ್ಲಿ ಈ ಸಂಖ್ಯೆಯು 50 ರಿಂದ 60 ವರೆಗೆ ತಲುಪಲಿದೆ.

ಈ ನಿಟ್ಟಿನಲ್ಲಿ ಡಾ. ರವಿ ಪಾಟೀಲ್ ಆರೋಗ್ಯ ಹಾಗೂ ಶಿಕ್ಷಣ ಸೇವಾ ಸಂಸ್ಥೆಯಿಂದ ಅತ್ಯಾಧುನಿಕ ತರಬೇತಿಯನ್ನು ನೀಡಲು ಜರ್ಮನ್ ಸರಕಾರದ ಮಾನ್ಯತೆ ಪಡೆದ ಜರ್ಮನಿಯ MEDITOS ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ.
ತರಬೇತಿಯಲ್ಲಿ ಜರ್ಮನಿ ಭಾಷೆ, ವೈದ್ಯಕೀಯ ಶಿಕ್ಷಣ, ನರ್ಸಿಂಗ್ ಶಿಕ್ಷಣ, ಜರ್ಮನ್ ಆಸ್ಪತ್ರೆಯ ನಿಯಮಗಳು, ರೋಗಿಯ ಹಕ್ಕುಗಳು ಮತ್ತು ಅಂತಾರಾಷ್ಟ್ರೀಯ ವೈದ್ಯಕೀಯ ನೀತಿ ನಿಯಮಾವಳಿ ಯನ್ನು ಕಲಿಸಿಕೊಡಲಾಗುವದು.
ಹಾಸ್ಟೆಲ್ ಹಾಗೂ mess ಸೌಕರ್ಯ ವದಗಿಸಲಾಗುವದು.
ಪದವಿದರರ ಜರ್ಮನ್ ಪ್ರವೇಶ ಪರೀಕ್ಷೆ ಮೊತ್ತು, ವೀಸಾ, ವಿಮಾನ ಪ್ರಯಾಣ ವೆಚ್ಚಗಳನ್ನು ಮತ್ತು ಶೈಕ್ಷಣಿಕ ವೇತನವನ್ನು MEDITOS ಜರ್ಮನ್ & ಡಾ. ರವಿ ಪಾಟೀಲ್ ಆರೋಗ್ಯ ಹಾಗೂ ಶಿಕ್ಷಣ ಸೇವಾ ಸಂಸ್ಥೆ ನೀಡುವುದು.

ಈ ತರಬೇತಿಯ ನೋಂದಣಿ ದಿನಾಂಕ 01/12/2024 ರಿಂದ 25/12/2024 ವರೆಗೆ ಇರುತ್ತದೆ.
ತ್ವರೆಮಾಡಿ ಸುವರ್ಣಾವಕಾಶವನ್ನು ಪಡೆದುಕೊಳ್ಳಬೇಕು.

ಡಾ. ರವಿ ಪಾಟೀಲ್ M.S ORTHO
ನಿರ್ದೇಶಕರು VOTC
& ಡಾ. ರವಿ ಪಾಟೀಲ್ ಆರೋಗ್ಯ ಹಾಗೂ ಶಿಕ್ಷಣ ಸೇವಾ ಸಂಸ್ಥೆ.