ನಾಗರ ಪಂಚಮಿ ಹಬ್ಬಕ್ಕೆ ಹನ್ನೆರಡು ಬಗೆಯ ಲಾಡುಗಳ ವಿಶೇಷ ಬಾಕ್ಸ್..!!!

ನಾಗರ ಪಂಚಮಿ ಹಬ್ಬಕ್ಕೆ ಹನ್ನೆರಡು ಬಗೆಯ ಲಾಡುಗಳ ವಿಶೇಷ ಬಾಕ್ಸ್..

ಹನುಮಾನ ಸ್ವೀಟ್ ಮಾರ್ಟ್ ಅವರಿಂದ ಹಬ್ಬಕ್ಕೆ ಸಿಹಿದಿನಿಸುಗಳ ಡಿಸ್ಕೌಂಟ್..

ಸುಮಾರು 50 ವರ್ಷಗಳಿಂದ ಬೆಳಗಾವಿ ಗ್ರಾಹಕರ ನಂಬಿಕೆಗೆ ಪಾತ್ರವಾದ ಸ್ವೀಟ್ ಮಾರ್ಟ್..

ಬೆಳಗಾವಿ : ಅತೀ ವಿಶಾಲವಾದ ಬೆಳಗಾವಿ ನಗರದಲ್ಲಿ ವಾಣಿಜ್ಯೋದ್ಯಮದ ದೃಷ್ಟಿಯಿಂದ ತುಂಬಾ ಅನುಕೂಲಕರ ವಾತಾವರಣವಿದೆ, ಇಲ್ಲಿ ಗುಣಮಟ್ಟದ ಯಾವುದೇ ವ್ಯಾಪಾರ ಮಾಡಿದರೂ, ಅದರಲ್ಲಿ ಯಶಸ್ವಿಯಾಗುವ ಸನ್ನಿವೇಶ ಈ ನಗರದಲ್ಲಿದೆ, ಅದಕ್ಕಾಗಿಯೇ ನಗರದ ತುಂಬೆಲ್ಲ ವ್ಯಾಪಾರ ಮತ್ತು ವಾಣಿಜ್ಯದ ಚಟುವಟಿಕೆಗಳು ಕಂಡುಬರುತ್ತವೆ..

ಬೆಳಗಾವಿಯ ಜನರು ಬೇಡಿಕೆಯ ಮನೋಭಾವದ ಅಥವಾ ಕೊಳ್ಳುವಿಕೆಯ ಸ್ವಭಾವದವರಾಗಿರುವದರಿಂದ ಇಲ್ಲಿ ಪ್ರತಿ ವ್ಯಾಪಾರವು ಲಾಭದಾಯಕವಾಗಿದೆ ಎನ್ನಬಹುದು, ಅದರಂತೆ ನಗರದಲ್ಲಿ ನೂರಾರು ಸಿಹಿ ತಿನಿಸುಗಳ ಅಂಗಡಿಗಳು ಇದ್ದು, ಕೆಲ ಅಂಗಡಿಗಳು ಗ್ರಾಹಕರ ಅಚ್ಚುಮೆಚ್ಚಿನ ಸ್ವೀಟಮಾರ್ಟ್ ಗಳಾಗಿವೆ, ಅದರಲ್ಲಿ ನಗರದ ಶನಿವಾರ ಕೂಟದಲ್ಲಿರುವ ಹನುಮಾನ ಸ್ವೀಟ ಮಾರ್ಟ್ ಕೂಡಾ ಒಂದಾಗಿದ್ದು, ತನ್ನ ಗುಣಮಟ್ಟದಿಂದ ಗ್ರಾಹಕರನ್ನು ಸೆಳೆಯುವ ಸಿಹಿ ಕಣಜವಾಗಿದೆ..

ಬೆಳಗಾವಿಯಲ್ಲಿ ಸುಮಾರು 50 ವರ್ಷಗಳಿಂದ ಸಿಹಿ ತಿಂಡಿಗಳ ಮಾರಾಟ ಮಾಡುತ್ತಾ ಬಂದಿರುವ, ಹನುಮಾನ್ ಸ್ವೀಟ್ ಮಾರ್ಟ್ ಅಂಗಡಿಯು, ಗುಣಮಟ್ಟದಲ್ಲಿ ಅತ್ಯಂತ ಗರಿಷ್ಟಮಟ್ಟದಲ್ಲಿದ್ದು, ದರದಲ್ಲಿಯೂ ಕೂಡಾ ಗ್ರಾಹಕರಿಗೆ ಹೋರೆಯಾಗದಂತೆ, ಎಲ್ಲರಿಗೂ ಅನುಕೂಲ ಆಗುವ ದರದಲ್ಲಿದ್ದುದರಿಂದ, ಸಹಜವಾಗಿ ಗ್ರಾಹಕರು ಆಕರ್ಷಿತರಾಗುತ್ತಾರೆ ಎಂಬ ಮಾತಿದೆ..

ಇನ್ನು ಈ ಹನುಮಾನ್ ಸ್ವೀಟ್ ಮಾರ್ಟ್ ನಲ್ಲಿ ದಿನಾಲೂ ಸಂಜೆ, 100 ಲೀಟರ್ ಹಾಲು ಮಾರಾಟ ಆಗುತ್ತಿದ್ದು, ಹಲವಾರು ಬಗೆ ಬಗೆಯ ಸಿಹಿತಿಂಡಿಗಳ ಇಲ್ಲಿ ಲಭ್ಯವಿರುತ್ತವೆ, ಇದರ ಜೊತೆಗೆ ಕಚೋರಿ, ಸಮೋಸ, ಪಾಪಡಿ, ಖಾರಾ, ಕುಂದಾ, ಬಾದಾಮಿ ಹಾಲು, ಗ್ರಾಹಕರು ಸವಿಯಲಿಕ್ಕೆ ಸಿದ್ದವಾಗಿಯೇ ಇರುತ್ತದೆ.

ಹನುಮಾನ ಸ್ವೀಟಮಾರ್ಟ್ ನಲ್ಲಿ ಸುಮಾರು 12 ರಿಂದ 15 ಜನ ಕಾರ್ಮಿಕರು ಕಾರ್ಯ ನಿರ್ವಹಿಸುತ್ತಿದ್ದು, ತುಂಬಾ ಸ್ವಚ್ಚತೆಯಿಂದ ಆರೋಗ್ಯಪೂರ್ಣವಾದ ಸನ್ನಿವೇಶದಲ್ಲಿ ಎಲ್ಲಾ ಸಿಹಿ ತಿಂಡಿಗಳು ತಯಾರಾಗಿ, ಗ್ರಾಹಕರಿಗೆ ಪೂರೈಕೆ ಆಗುತ್ತವೆ..

ನಾಗರ ಪಂಚಮಿಯ ವಿಶೇಷ ರಿಯಾಯತಿಯಾಗಿ, ಹನ್ನೆರಡು ವಿವಿಧ ಬಗೆಯ ಲಾಡುಗಳ ಬಾಕ್ಸ್ ತಯಾರಿಸಿದ್ದು, 120 ರೂಪಾಯಿಗಳಲ್ಲಿ ಹಾಗೂ 240 ರೂಪಾಯಿ ಕೆಜಿ ಇದ್ದ ಸಿಹಿ ಪದಾರ್ಥಗಳ ಬೆಲೆಯನ್ನು 200 ರೂಪಾಯಿ ಮಾಡಿದ್ದು, ಗ್ರಾಹಕರಿಗೆ ಹಬ್ಬದ ರಿಯಾಯತಿ ನೀಡಲಾಗಿದೆ..

ಈ ವೇಳೆ ಮಾತನಾಡಿದ ಅಂಗಡಿಯ ಮಾಲೀಕರಾದ ಹರೀಶ್ ಅವರು ಮೊದಲಿನಿಂದಲೂ ನಾವು ಗ್ರಾಹಕರಿಗಾಗಿ, ಗುಣಮಟ್ಟದ ಹಾಗೂ ಅನಕೂಲಕರ ಬೆಲೆಯಲ್ಲಿ ಸಿಹಿ ಪದಾರ್ಥಗಳ ಮಾರಾಟ ಮಾಡುತ್ತಿದ್ದು, ಇಂತಹ ಹಬ್ಬದ ದಿನಗಳಲ್ಲಿ ವಿಶೇಷ ರಿಯಾಯತಿ ನೀಡಿ, ಗ್ರಾಹಕ ಸ್ನೇಹಿಯಾಗಿ ಇರುತ್ತೇವೆ, ಅದಕ್ಕಾಗಿಯೇ ದಿನದಿಂದ ದಿನಕ್ಕೆ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ ಎಂದರು..

ವರದಿ ಪ್ರಕಾಶ ಕುರಗುಂದ..