ನಾಳೆ ಸಂಸದೆ ಪ್ರಿಯಾಂಕ ಸತೀಶ್ ಜಾರಕಿಹೊಳಿ ಅವರಿಗೆ ಸನ್ಮಾನ ಕಾರ್ಯಕ್ರಮ..

ನಾಳೆ ಸಂಸದೆ ಪ್ರಿಯಾಂಕ ಸತೀಶ್ ಜಾರಕಿಹೊಳಿ ಅವರಿಗೆ ಸನ್ಮಾನ ಕಾರ್ಯಕ್ರಮ..

ಬೆಳಗಾವಿಯ ದಿ ಸೆಂಟ್ರಲ್ ಮೆಥೋಡಿಸ್ಟ್ ಚರ್ಚನಿಂದ ಸಂಸದರಿಗೆ ಅಭಿಮಾನದ ಸನ್ಮಾನ.

ಬೆಳಗಾವಿ : ನಾಳೆ ದಿನಾಂಕ 03/11/2024/ರ ರವಿವಾರದಂದು ಬೆಳಗಾವಿ ನಗರದ ಸುಪ್ರಸಿದ್ದ ಮೆಥೋಡಿಸ್ಟ್ ಎಪಿಸ್ಕೋಪಲ್ ಚರ್ಚ್ ಇನ್ ಸದರ್ನ್ ಏಷ್ಯಾ ರವರ, ದಿ ಸೆಂಟ್ರಲ್ ಮೆಥೋಡಿಸ್ಟ್ ಕನ್ನಡ ಚರ್ಚ್ ಬೆಳಗಾವಿಯ ವತಿಯಿಂದ ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದರಿಗೆ ಅಭಿಮಾನದ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ..

ಸರ್ವರ ಗೌರವಕ್ಕೆ ಪಾತ್ರರಾಗಿ, ಯುವ ಸಮೂಹದ ಆದರ್ಶರಾಗಿರುವ ಚಿಕ್ಕೋಡಿ ಲೋಕಸಭಾ ಮತಕ್ಷೇತ್ರದ ಸಂಸದೆಯರಾದ ಪ್ರಿಯಾಂಕ ಜಾರಕಿಹೊಳಿ ಅವರಿಗೆ ಬೆಳಗಾವಿಯ ಸಮಸ್ತ ಕ್ರೈಸ್ತ ಭಾಂದವರಿಂದ ಅಭಿಮಾನದ ಸನ್ಮಾನವನ್ನು ಬೆಳಗಾವಿಯ ಮೆಥೋಡಿಸ್ಟ್ ಚರ್ಚಿನಲ್ಲಿ ನಾಳೆ ಬೆಳಿಗ್ಗೆ 10-30ಕ್ಕೆ ಗಂಟೆಗೆ ಹಮ್ಮಿಕೊಳ್ಳಲಾಗಿದೆ.

ಈ ಸನ್ಮಾನ ಕಾರ್ಯಕ್ರಮದ ಮಾಹಿತಿಯನ್ನು ಚರ್ಚ್ ಸಮಿತಿ ಸದಸ್ಯರಾದ ನ್ಯಾಯವಾದಿ ಆರ್, ವಾಯ್, ನವಗ್ರಹ ಅವರು ನೀಡಿದ್ದು, ಸರ್ವರಿಗೂ ಆದರದ ಸ್ವಾಗತ ಕೋರಿದ್ದಾರೆ..

ವರದಿ ಪ್ರಕಾಶ್ ಬಸಪ್ಪ ಕುರಗುಂದ..