ನಾವಾಗಲೇ ಚುನಾವಣೆಗೆ ಮುಂದೆ ಬರುವದಿಲ್ಲ..
ಜನರು ಸಮಸ್ಯೆ ಎಂದು ಬಂದಾಗ ನಾವು ಸುಮ್ಮನಿರೋಲ್ಲ..
ಶಾಸಕ ಬಾಲಚಂದ್ರ ಜಾರಕಿಹೊಳಿ..
ಬೆಳಗಾವಿ : ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ರಾಹುಲ್ ಜಾರಕಿಹೊಳಿ ಸ್ಪರ್ಧೆ ಮಾಡುವ ವಿಚಾರಕ್ಕೆ ಸಚಿವ ಸತೀಶ್ ಜಾರಕಿಹೊಳಿ ಅವರೊಂದಿಗೆ ಚರ್ಚೆ ನಡೆಸಿ ನಿರ್ಧರಿಸಲಾಗುವುದು ಎಂದು ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಗುರುವಾರ ಹುಕ್ಕೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ನಮ್ಮ ಮನೆತನದಲ್ಲಿ ಯಾರೂ ನಿಲ್ಲುವುದಿಲ್ಲ, ಬೆಳಗಾವಿ ಸಹಕಾರಿ ಕ್ಷೇತ್ರದಿಂದ ಯಾರನ್ನೂ ಸ್ಪರ್ಧಿಸಬೇಕು ಎಂಬ ಚರ್ಚೆ ನಡೆಸಲಾಗುತ್ತಿದೆ. ಚನ್ನರಾಜ ಹಟ್ಟಿಹೊಳಿ ಅವರು ಖಾನಾಪುರದಿಂದ ಸಿದ್ಧತೆ ನಡೆಸಿಕೊಂಡಿದ್ದಾರೆ ಎಂದರು.
ಸಾಮಾನ್ಯ ವರ್ಗದ ಕಟ್ ಬಾಕಿ ಬಂದವರ ನೋಡಿ ಚುನಾವಣೆ ಮಾಡಬಹುದು. ಸುಮಾರು 15 ಸಾವಿರ ಮತದಾರರಿಗೆ ತಡೆ ನೀಡಿದ್ದಾರೆ. ಅದನ್ನು ತೆರವುಗೊಳಿಸಿ ಮತದಾನ ಮಾಡಲು ಅವಕಾಶ ಕೊಡಲಾಗುವುದು ಎಂದರು.
ನಾವಾಗಲೇ ಚುನಾವಣೆಯಲ್ಲಿ ಮುಂದೆ ಬರುವುದಿಲ್ಲ. ಜನರು ನಮ್ಮ ಬಳಿ ಸಮಸ್ಯೆ ಹೇಳಿ ಬಂದಾಗ ಮಾತ್ರ ನಾವು ಬರೋದು ಎಂದರು.
ಮಾಜಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.