ನಿಮ್ಮ ಮತ ಎಂದರೆ ಮನೆಮಗಳು ಇದ್ದಂತೆ, ಅದನ್ನು ಮಾರಬೇಡಿ..
ನಿಮ್ಮ ಸೇವಕನಾಗಿ, ಸೇವೆ ಮಾಡುವ ಪ್ರಜಾಕೀಯ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ..
ಪ್ರೇಮ ಮಲ್ಲಪ್ಪ ಚೌಗುಲೆ, ಯುಪಿಪಿ ಬೆಳಗಾವಿ ಲೋಕಸಭಾ ಅಭ್ಯರ್ಥಿ..
ಬೆಳಗಾವಿ : ಬರುವ ಲೋಕಸಭಾ ಚುನಾವಣೆಯಲ್ಲಿ ಅನೇಕ ರಾಜಕೀಯ ಪಕ್ಷಗಳು ಮತದಾರರನ್ನು ಸೆಳೆಯಲು ನಾನಾ ರೀತಿಯ ಆಮಿಷಗಳನ್ನು ಒಡ್ಡುತ್ತಿದ್ದು, ಮತದಾರರು ಉತ್ತಮ ಸಮಾಜಕ್ಕಾಗಿ, ದೇಶದ ಒಳ್ಳೆಯ ಭವಿಷ್ಯಕ್ಕಾಗಿ ತಮ್ಮ ಮತವನ್ನು ತಮ್ಮ ಸೇವೆ ಮಾಡುವ ಸೂಕ್ತ ಅಭ್ಯರ್ಥಿಗೆ ನೀಡಬೇಕು, “ಮತ ಎಂದರೆ ಮನೆಮಗಳು ಇದ್ದಂತೆ ಅದನ್ನು ಮಾರಬೇಡಿ” ಎಂದು ಮತದಾರರಿಗೆ ಕಿವಿಮಾತು ಹೇಳಿದರು..
ಕಾರಣ ಪ್ರಜಾಕೀಯ ಪಕ್ಷಕ್ಕೆ ತಮ್ಮ ಅಮೂಲ್ಯವಾದ ಮತಗಳನ್ನು ಚಲಾಯಿಸುವ ಮೂಲಕ ಬೆಳಗಾವಿ ಎಂಪಿ ಯಾಗಿ ನನ್ನನ್ನು ಆಯ್ಕೆ ಮಾಡಿದರೆ ಪ್ರಾಮಾಣಿಕ ಕಾರ್ಮಿನಾಗಿ ಪ್ರಜೇಗಳ ಸೇವೆ ಮಾಡುತ್ತನೆ ಎಂದು ಪ್ರಜಾಕೀಯ ಪಕ್ಷದ ಎಂಪಿ ಅಭ್ಯರ್ಥಿ ಪ್ರೇಮ ಚೌಗಲಾ ಅವರು ಹೇಳಿದರು.

ನಗರದ ಕನ್ನಡ ಸಾಹಿತ್ಯಭವನದಲ್ಲಿ ಬುಧವಾರ ಮಾತನಾಡಿದ ಅವರು, ಉತ್ತಮ ಪ್ರಜಾಕೀಯ ಪಕ್ಷದ ಪ್ರಜಾಪತಿನಿಧಿಯ ಪ್ರಾಯವೈಖರಿ ವಿಧಾನದ ಪ್ರಕಾರ (ಎಸ್. ಒ.ಪಿ) ನಿಮ್ಮ ಜೊತೆ ಇದ್ದು, ಪ್ರಜೇಗಳ ಎಲ್ಲಾ ಬೇಡಿಕೆಗಳನ್ನು ಕಾಲ ಕಾಲಕ್ಕೆ ಪಟ್ಟಿ ಮಾಡಿಕೊಂಡು ತಜ್ಞರೊಂದಿಗೆ ಚರ್ಚಿಸಿಸುತ್ತನೆ ಎಂದು ಹೇಳಿದರು.
ಉತ್ತಮ ಪ್ರಜಾಕೀಯ ಪಕ್ಷ ಮಾತ್ರ ಆರು ತಿಂಗಳಿಗೊಮ್ಮೆ ನಡೆಸುವ ಅಧಿಕೃತ ಪೋಲಿಂಗ್/ವೊಟಿಂಗ್ ನಡೆಸಿ, ಜನಾಭಿಪ್ರಾಯದಲ್ಲಿ 50% ಕ್ಕಿಂತ ಹೆಚ್ಚು ಮತದಾರರಿಗೆ ನನ್ನ ಕಾರ್ಯವೈಖರಿ ಇಷ್ಟವಾಗದೇ ಇದ್ದರೆ, ನನ್ನ ತಿರಸ್ಕರಿಸಿದಲ್ಲಿ ಯಾವುದೆ ತಂಟೆ ತಕರಾರು ಮಾಡದೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದರು.

ತಮ್ಮ ಸೇವೆ ಮಾಡುವ ಪ್ರಜಾಕಿಯ ಪಕ್ಷದ ನಮ್ಮಂತ ಅಭ್ಯರ್ಥಿಗಳನ್ನು ಆರಿಸಿ, ಅದಕ್ಕೆ ಬದಲಾಗಿ ನಿಮ್ಮನ್ನು ಆಳುವ, ದೇಶವನ್ನು ದೋಚುವ ಅಭ್ಯರ್ಥಿಗಳಿಗೆ ತಮ್ಮ ಅಮೂಲ್ಯ ಮತವನ್ನು ನೀಡಬೇಡಿ ಎಂದರು..
ವರದಿ ಪ್ರಕಾಶ ಕುರಗುಂದ..