ನಿಯತಿ ಫೌಂಡೇಶನ್ ಕಡೆಯಿಂದ ಬಡ ವಿದ್ಯಾರ್ಥಿಗೆ ಸಹಾಯಹಸ್ತ..
ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ ಸರ್ನೋಬತ್ ದಂಪತಿಗಳು..
ಬೆಳಗಾವಿ : ನಗರದ ಖ್ಯಾತ ವೈದ್ಯ ದಂಪತಿಗಳಾದ ಸೋನಾಲಿ ಹಾಗೂ ಸಮೀರ್ ಸರ್ನೋಬತ್ ಇಂದು ನಗರದ ಖಾಸಗಿ ಸ್ಥಳದಲ್ಲಿ, ತಮ್ಮ ನಿಯತಿ ಫೌಂಡೇಶನ್ ಕಡೆಯಿಂದ ಬಡ ವಿದ್ಯಾರ್ಥಿ ರಚಿತ ಪಾಟೀಲ್ ಅವರಿಗೆ 8000₹ ವಿದ್ಯಾರ್ಥಿವೇತನದ ಮೂಲಕ ಧನಸಹಾಯ ಮಾಡಿದ್ದಾರೆ..
ವಿದ್ಯಾರ್ಥಿಯ ತಂದೆ ದೈಹಿಕವಾಗಿ ಅಶಕ್ತರಾಗಿದ್ದು, ತಾಯಿಯೇ ಕುಟುಂಬದ ಏಕೈಕ ಆಧಾರವಾಗಿದ್ದಾರೆ, ಇದರಿಂದ ಕುಟುಂಬದ ಆರ್ಥಿಕ ಪರಿಸ್ಥಿತಿ ಸರಿಯಾಗಿ ಇಲ್ಲದಂತಾಗಿದೆ,
ಈ ವಿದ್ಯಾರ್ಥಿ, ಬಿಇ ಶಿಕ್ಷಣ ಸೊಸೈಟಿಯ ಮಾಡರ್ನ್ ಇಂಗ್ಲೀಷ್ ಸ್ಕೂಲಿನಲ್ಲಿ 4ನೆಯ ತರಗತಿಯಲ್ಲಿ ವಿಧ್ಯಭಾಸ ಮಾಡುತ್ತಿದ್ದಾನೆ..
ಈ ಮಗುವಿನ ಶಿಕ್ಷಣಕ್ಕಾಗಿ ಇನ್ನೂ ಯಾರಾದರೂ ಸಹಾಯ ಮಾಡಲು ಬಯಸಿದರೆ, ದಯವಿಟ್ಟು ಡಾ ಸೋನಾಲಿ ಸರ್ನೋಬತ್ ಅವರನ್ನು ಸಂಪರ್ಕಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ..
ವರದಿ ಪ್ರಕಾಶ್ ಬಸಪ್ಪ ಕುರಗುಂದ..
ಛಾಯಾಚಿತ್ರದಲ್ಲಿ
ಫಲಾನುಭವಿಯ ತಾಯಿಯೊಂದಿಗೆ ಡಾ ಸೋನಾಲಿ ಮತ್ತು ಡಾ ಸಮೀರ್ ಸರ್ನೋಬತ್..