ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ರೈತರ ಬ್ರಹತ್ ಪ್ರತಿಭಟನೆ..

ನೀರಾವರಿ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿ ವರ್ತನೆಗೆ ರೈತರ ಬ್ರಹತ್ ಪ್ರತಿಭಟನೆ..

ಕೋರ್ಟ್ ಆದೇಶವಿದ್ದರೂ ಮಾತು ಕೇಳದ ಅಧಿಕಾರಿಗಳ ವಿರುದ್ಧ ಆಕ್ರೋಶ..

ಬೆಳಗಾವಿ : ಚನ್ನಮ್ಮ ವೃತ್ತದಿಂದ ನೀರಾವರಿ ಕಚೇರಿಗೆ ಎತ್ತುಗಳನ್ನು ಕರೆತಂದು ಮೆರವಣಿಗೆ ಮೂಲಕ ಆಗಮಿಸಿದ ಭೂಮಾಲೀಕರು ಸರಕಾರ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಮೊಳಗಿಸಿ, ನೀರಾವರಿ ಇಲಾಖೆಗೆ ಮುತ್ತಿಗೆ ಹಾಕಲು ಯತ್ನಿಸಿದರು.

ಕಳೆದ ಎರಡು ವರ್ಷಗಳಿಂದ 394 ಎಕರೆ ಜಮೀನಿಗೆ ಪರಿಹಾರ ನೀಡುವಂತೆ ಕಚೇರಿಯಿಂದ ಕಚೇರಿಗೆ ಅಲೆದಾಡಿದರೂ ಇಲ್ಲಿಯವರೆಗೂ ಯಾವುದೇ ಪರಿಹಾರ ನೀಡಿಲ್ಲ. ಇದರಿಂದ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆಂದು ಹರಿಹಾಯ್ದರು.

ಈ ಜಮೀನನ್ನು ಬಿಟ್ಟು ಜೀವನ ಉಪಯೋಗಕ್ಕೆ ಬೇರೆ ಯಾವುದೇ ಮೂಲಾಧಾರ ಇರುವುದಿಲ್ಲ. ನಾವೆಲ್ಲರೂ ಸಣ್ಣ ಭೂ ಮಾಲಿಕರು ಆಗಿರುತ್ತೇವೆ. ಇದರಿಂದ ನಾವೆಲ್ಲ ಸಂಕಷ್ಟದಲ್ಲಿವೆ ಆದ್ದರಿಂದ ಮುಳುಗಡೆಯಾದ ಜಮೀನಿಗೆ ತ್ವರೀತವಾಗಿ ಭೂ ಪರಿಹಾರ ಧನ ನೀಡಬೇಕೆಂದು ಆಗ್ರಹಿಸಿದರು.

ಗ್ರಾಮದ ಭೂಮಾಲೀಕ ಬಾಳೇಶ ಮಾವನೂರಿ ಮಾತನಾಡಿ
ಉಚ್ಚನ್ಯಾಯಾಲಯವು ಸಂಭಂದ ಪಟ್ಟ ನೀರಾವರಿ ಇಲಾಖೆಗೆ ಭೂ ಸ್ವಾಧೀನ ಪ್ರಸ್ತಾವನೆಯನ್ನು ಸಲ್ಲಿಸಲು ಮೂರು ತಿಂಗಳ ಗಡವು ನೀಡಿ ಆದೇಶಿಸಿರುತ್ತದೆ. ಆದಾರೂ ಕೂಡಾ ನೀರಾವರಿ ಇಲಾಖೆ ಭೂ ಸ್ವಾಧೀನ ಪ್ರಸ್ತಾವನೆ ಸಲ್ಲಿಸಿರುವುದಿರುವುದಿಲ್ಲ ಹಾಗೂ ನಕಲಿ ದಾಖಲಾತಿಗಳನ್ನು ಸೃಷ್ಟಿಸಿರುತ್ತರೆ ಎಂದು ಆರೋಪಿಸಿದರು. ಹೀಗೆ ನ್ಯಾಯಾಲಯದ ಆದೇಶವನ್ನು ನಿರ್ಲಕ್ಷಿಸಿ ನ್ಯಾಯಾಲಯಕ್ಕೆ ಅವಮಾನ ಮಾಡಿರುತ್ತಾರೆ. ಹಾಗೂ ವಿನಾಕಾರಣ ಕಾಲಹರಣ ಮಾಡಿ ಬಡ ರೈತರಾದ ನಮ್ಮನ್ನು ಸತಾಯಿಸಿದ್ದಾರೆ ಆದ್ದರಿಂದ ನೀರಾವರಿ ಇಲಾಖೆ ಅಧಿಕಾರಿಗಳ ವಿರುದ್ಧ ಶಿಸ್ತಿನ ಕ್ರಮ ಕೈಗೊಂಡು ಬಡ ರೈತರಾದ ನಮಗೆ ಸೂಕ್ತ ನ್ಯಾಯವಾದಿಗಿಸಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಿಂಗಪ್ಪ ಮಾವನೂರಿ,ನಿಂಗಪ್ಪಾ ಗೋಣಿ, ಭರಮಾ ಕಂತಿ, ಭರಮಾ ಮುಂಗಾರಿ, ಈರವ್ವ ಮಂಡೋಳಿ, ಸುನಿತಾ ಕಂದಾಳಿ, ಶೋಭಾ ಮ್ಯಾಕ್ಲಿ, ಲಗಮವ್ವ ಮದಿಗೌಡರ ಸೇರಿದಂತೆ ಇತರರು ಇದ್ದರು.

ವರದಿ ಪ್ರಕಾಶ ಕುರಗುಂದ..