ನೇಮಕಾತಿ ಸಮಸ್ಯೆ ಆದಷ್ಟು ಬೇಗ ಇತ್ಯರ್ಥ..
ಸಚಿವ ಸತೀಶ ಜಾರಕಿಹೊಳಿಯವರ ಭರವಸೆ..
ಬೆಂಗಳೂರು : ಸೋಮವಾರ ದಿನಾಂಕ 13-05-2024 ರಂದು ಕರ್ನಾಟಕ ಸರಕಾರ ಲೋಕೋಪಯೋಗಿ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಸತೀಶ ಜಾರಕಿಹೊಳಿಯವರ ಗೃಹ ಕಚೇರಿಗೆ ಆಗಮಿಸಿದ ಕೆಪಿಟಿಸಿಎಲ್ ಇಲಾಖೆಯ ನೇಮಕಾತಿ ಪರೀಕ್ಷೆ ಬರೆದ ಆಕಾಂಕ್ಷಿಗಳು ತಮ್ಮ ಮನವಿ ಸಲ್ಲಿಸಿದರು..
ಬೆಂಗಳೂರಿನ ಗೃಹ ಕಚೇರಿಗೆ ಆಗಮಿಸಿದ್ದ ನೂರಾರು ಅಭ್ಯರ್ಥಿಗಳು, ಕೆಪಿಟಿಸಿಎಲ್ ಜೆಇಇ ನೇಮಕಾತಿ ಪಟ್ಟಿ ಈಗಾಗಲೇ ವಿಳಂಬವಾಗಿದ್ದು, ಅದನ್ನು ಶೀಘ್ರದಲ್ಲೇ ಬಿಡುಗಡೆ ಮಾಡುವಂತೆ ಕೋರಿ ಆಕಾಂಕ್ಷಿಗಳು ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಅವರ ಅಹವಾಲು ಆಲಿಸಿದ ಸಚಿವರು ಸಂಭಂದಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ, ಶೀಘ್ರದಲ್ಲೇ ಸಮಸ್ಯೆ ಇತ್ಯರ್ಥಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ತಿಳಿಸಿದ್ದಾರೆ..
ವರದಿ ಪ್ರಕಾಶ್ ಕುರಗುಂದ..