ನೊಂದ ಕುಟುಂಬಳಿಗೆ ಸಾಂತ್ವಾನ ಹೇಳಿದ ಬಿಜೆಪಿ ಮಹಿಳಾ ರಾಜ್ಯ ಕಾರ್ಯದರ್ಶಿ…

ನೊಂದ ಕುಟುಂಬಳಿಗೆ ಸಾಂತ್ವಾನ ಹೇಳಿದ ಬಿಜೆಪಿ ಮಹಿಳಾ ರಾಜ್ಯ ಕಾರ್ಯದರ್ಶಿ..

ಸರ್ಕಾರದಿಂದ ಆರ್ಥಿಕ ಸಹಾಯಕ್ಕೆ ಪ್ರಯತ್ನಿಸುವೆ..

ಸೋನಾಲಿ ಸರ್ನೋಬತ್, ರಾಜ್ಯ ಕಾರ್ಯದರ್ಶಿ ಬಿಜೆಪಿ ಮಹಿಳಾ ಮೋರ್ಚಾ ಕರ್ನಾಟಕ.

ಬೆಳಗಾವಿ : ಸಮೀಪದ ಸುಳೇಭಾವಿ ಗ್ರಾಮದಲ್ಲಿ ಇತ್ತೀಚೆಗೆ ವಿದ್ಯುತ್ ಸ್ಪರ್ಶದಿಂದ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದರು, ಮೃತರ ಕುಟುಂಬದವರನ್ನು ಭೇಟಿ ಮಾಡಿದ ಬಿಜೆಪಿಯ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿಯಾದ ಸೋನಾಲಿ ಸರ್ನೋಬತ್ ಅವರು ಕುಟುಂಬದವರಿಗೆ ಸಾಂತ್ವನ ಹೇಳಿದರು.

ಕಲಾವತಿ ಮಾರುತಿ ಬಿದರವಾಡಿ ಮತ್ತು ಸವಿತಾ ಫಕೀರಪ್ಪ ವಟಿ ಈ ಇಬ್ಬರು ಮಹಿಳೆಯರು ತಮ್ಮ ಗ್ರಾಮದ ಮಹಿಳಾ ಮಂಡಳದವರು ಮಂದಿರದಲ್ಲಿ ಸಭೆ ನಡೆಸಿದ ನಂತರ ಲೋಹದ ಶಟರ್ ಅನ್ನು ಮುಚ್ಚುತ್ತಿದ್ದು,

ಭಾರೀ ಮಳೆಯಿಂದಾಗಿ ಶಟರ್ ಮೂಲಕ ವಿದ್ಯುತ್ ಹಾದು ಹೋಗಿದ್ದು, ಈ ಇಬ್ಬರು ಮಹಿಳೆಯರು ಪ್ರಾಣ ಕಳೆದುಕೊಂಡಿದ್ದರು. ಮೃತ ಮಹಿಳೆಯರಿಗೆ ತಲಾ ನಾಲ್ಕು ಮಕ್ಕಳಿದ್ದಾರೆ ಮತ್ತು ಅತ್ಯಂತ ಬಡತನದ ಹಿನ್ನೆಲೆಯಿಂದ ಉಳ್ಳವರಾಗಿದ್ದು, ಕಾರಣ ಸೋನಾಲಿ ಸರ್ನೋಬತ್ ರಾಜ್ಯ ಕಾರ್ಯದರ್ಶಿ ಮಹಿಳಾ ಮೋರ್ಚಾ ಬಿಜೆಪಿ ಕರ್ನಾಟಕ ಅವರು ಮೃತರ ಕುಟುಂಬಗಳಿಗೆ ಸಾಂತ್ವಾನ ಹೇಳಿ, ಸರ್ಕಾರದ ಸಹಾಯ ಕೇಳುವುದಾಗಿ ಭರವಸೆ ನೀಡಿದ್ದಾರೆ..

ಈ ವೇಳೆ ಶ್ರೀಮತಿ ಭಾಗ್ಯಶ್ರೀ ಕೋಕಿಟ್ಕರ್, ಸ್ನೇಹಲ್ ಕೋಲೇಕರ್, ಚೇತನಾ ಅಗಸೇಕರ್ ಮತ್ತು ಸ್ಥಳೀಯ ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು..

ವರದಿ ಪ್ರಕಾಶ್ ಬಸಪ್ಪ ಕುರಗುಂದ..