ನೋ ರಜೆ, ನೋ ಹಬ್ಬ, ಒನ್ಲಿ ಡ್ಯುಟಿ…
ಕಡಿಮೆ ಕಾರ್ಯಕ್ಷಮತೆ ಕಂಡುಬಂದರೆ ಅಮಾನತ್ತು..
ಬರೀ ಮಾತಿನಲ್ಲಿ ಮಾಡಿದ ಕೆಲಸ ಬೇಕಿಲ್ಲ, ನಿಮ್ಮ ಕೆಲಸ ದಾಖಲೆ ರೂಪದಲ್ಲಿ ಇರಬೇಕು..
ಪಾಲಿಕೆಯ ಕಂದಾಯ ಆಯುಕ್ತೆ ರೇಷ್ಮಾ ತಾಳಿಕೋಟೆ ಅವರಿಂದ ಖಡಕ್ ಎಚ್ಚರಿಕೆ..

ಬೆಳಗಾವಿ : ಶನಿವಾರ ಬೆಳಗಾವಿ ಮಹಾನಗರ ಪಾಲಿಕೆಯ ಕಂದಾಯ ವಿಭಾಗದ ಸಿಬ್ಬಂದಿಗಳು ಸಮಯ ವ್ಯಯ ಮಾಡದೇ ತಮ್ಮ ಕಚೇರಿಯಲ್ಲಿ ಕಾರ್ಯ ನಿರ್ವಹಿಸುವ ದೃಶ್ಯ ಅತೀ ಅಪರೂಪವೇನಿಸುತ್ತಿತ್ತು, ಈ ಬದಲಾವಣೆಗೆ ಮುಖ್ಯ ಕಾರಣವೆಂದರೆ ಕಂದಾಯ ಆಯುಕ್ತೆಯವರಾದ ರೇಷ್ಮಾ ತಾಳಿಕೋಟೆ ಅವರು.
ತಿಂಗಳ ನಾಲ್ಕನೆಯ ಶನಿವಾರ ರಜಾ ದಿನವಿದ್ದರೂ ಹಾಗೂ ಮನೆಯಲ್ಲಿ ಗಣೇಶ ಹಬ್ಬವಿದ್ದರೂ ಅದನ್ನೆಲ್ಲಾ ಬದಿಗಿಟ್ಟು, ಕಚೇರಿಯ ಕೆಲಸದಲ್ಲಿ ಭಾಗಿಯಾಗಿ, ಇಲಾಖೆಯಿಂದ ಕೊಟ್ಟ ಗುರಿಯನ್ನು ನಿಗದಿತ ಸಮಯದಲ್ಲಿ ಸಾಧಿಸಲು, ಪಾಲಿಕೆಯ ಇಡೀ ಕಂದಾಯ ವಿಭಾಗದ ಸಿಬ್ಬಂದಿಯೇ ಇಲ್ಲಿ ಕಾರ್ಯಪ್ರವರ್ತರಗಿದ್ದರು..
ಈ ವೇಳೆ ಮುಂಜಾನೆಯಿಂದಲೇ ಪಾಲಿಕೆಯ ನಾಲ್ಕೂ ಕಂದಾಯ ಶಾಖೆಗಳಿಗೆ (ರಿಷಿಲ್ದಾರ ಗಲ್ಲಿ, ಕೊಂವಾಳ ಗಲ್ಲಿ, ಗೋವಾವೆಸ್ ಹಾಗೂ ಅಶೋಕ್ ನಗರ) ಬೇಟಿ ನೀಡಿ, ಕೆಲಸದ ಪರಿಶೀಲನೆ ನಡೆಸಿದ ಕಂದಾಯ ಆಯುಕ್ತರಾದ ರೇಷ್ಮಾ ತಾಳಿಕೋಟೆ ಅವರು, ಅಶೋಕ್ ನಗರದ ಪಾಲಿಕೆಯ ಕಚೇರಿಯಲ್ಲಿ ಆಗಮಿಸಿ ಸಿಬ್ಬಂದಿಗಳನ್ನು ಉದ್ದೇಶಿಸಿ ಕೆಲ ಸೂಚನೆ ನೀಡಿದ್ದು, ಇನ್ನು ಎರಡು ದಿನ ಬೇರೆ ಯಾವುದೇ ಕೆಲಸ ಮಾಡದೆ ಆಸ್ತಿ ಕಣಜದ ಗಣಕೀಕರಣ ಕಾರ್ಯ ನಡೆಯಬೇಕು ಎಂದರು.

ಕಚೇರಿ ಒಳಗೆ ಬಂದ ಕೂಡಲೇ, ಏನು ಮಾಡ್ತಾ ಇದೀರಿ, ಡಾಟಾ ಪ್ಲೋಪರೇಟರ್ಸ್ ಎಲ್ಲಿ, ಸಾರ್ವಜನಿಕರು ಏಕೆ ಇದ್ದಾರೆ, ಎಂದು ಪ್ರಶ್ನಿಸುತ್ತಾ, ನಿಮ್ಮ ನಿಮ್ಮ ವಾರ್ಡುಗಳಲ್ಲಿ ಪ್ರತಿ ದಿನಾ ಶೇಕಡಾ ಇಪ್ಪತ್ತರಷ್ಟು ಆಸ್ತಿಗಳ ಎಣಿಕೆ ಹಾಗೂ ನೋಂದಣಿ ಆಗಬೇಕು, ಬೆಂಗಳೂರಿನ ಮೇಲಾಧಿಕಾರಿಗಳು ನಮಗೆ ಹೇಳಿದ ಮಾತು ನಿಮಗೆ ಹೇಳಲು ಆಗುವುದಿಲ್ಲ, ಇಲಾಖಾ ಅಧಿಕಾರಿಗಳು ತುಂಬಾ ಅಸಮಾಧಾನಗೊಂಡಿದ್ದು, ಪರಿಸ್ಥಿತಿ ತುಂಬಾ ಗಂಭೀರವಿದೆ ಆದಕಾರಣ ಎಲ್ಲರೂ ಶ್ರದ್ದೆಯಿಂದ ಕಾರ್ಯ ಮಾಡಿ ಎಂದರು..
ಈ ಹಿಂದೆ ಏನು ಮಾಡಿದಿರಿ ಅದು ನನಗೆ ಬೇಕಿಲ್ಲ, ನಿಮ್ಮ ಮಾತಿನಲ್ಲಿ ಆದ ಕೆಲಸ ಲೆಕ್ಕಕ್ಕೆ ಬರೋಲ್ಲ, ನನಗೆ ನೀವು ಮಾಡಿದ ದಾಖಲೆ ರೂಪದ ಕೆಲಸ ನೀಡಿ, ಮೇಲಾಧಿಕಾರಿಗಳು ಅದನ್ನೇ ಕೇಳೋದು, ಈ ವಿಷಯದಲ್ಲಿ ಕೆಲಸ ಮಾಡದ, ಬಿಲ್ಲ ಕಲೆಕ್ಟರ್, ಕಂದಾಯ ನಿರೀಕ್ಷಕ, ಉಪ ಕಂದಾಯ ಅಧಿಕಾರಿ, ಕಂದಾಯ ಅಧಿಕಾರಿ ಇವರ ಬಗ್ಗೆ ಮಾಹಿತಿ ನೀಡಿ, ಬೆಂಗಳೂರಿನಿಂದ ನಾವೇ ಅಮಾನತ್ತು ಮಾಡುತ್ತೇವೆ ಎಂದು ಅಧಿಕಾರಿಗಳು ಖಡಕ್ ವಾರ್ನಿಂಗ್ ಮಾಡಿದ್ದಾರೆ ಎಂದರು..

ಆಧುನಿಕ ತಂತ್ರಜ್ಞಾನ ಬಳಸಿಕೊಂಡು, ಸಮಯ ಉಳಿಸಿ, ಇಲ್ಲೇ ಕುಳಿತು ಮೊಬೈಲ್ ಮೂಲಕ ಮಾಹಿತಿ ತರಿಸಿಕೊಂಡು, ಕೆಲಸ ಮಾಡಿದರೆ ಬೇಗ ಮುಗಿಯುತ್ತೆ, ಆದರೆ ನೀವು ಜಿಪಿಎಸ್ ಅಂತ ಹೊರಗೆ ಹೋಗೋದು, ಊಟಕ್ಕೆ ಅಂತಾ ಹೊರಗೆ ಹೋಗೋದು ಮಾಡದೇ, ಇಲ್ಲಿಯೇ ಊಟ ತರಿಸಿಕೊಂಡು ಕೆಲಸ ಮಾಡಿ, ಬೆಳಿಗ್ಗೆಯಿಂದ ನಾನು ಎಲ್ಲಾ ಕಡೆಗೆ ಪರಿಶೀಲನೆ ಮಾಡುತ್ತಿದ್ದೇನೆ ಎಂದರೆ ಪರಿಸ್ಥಿತಿಯ ಗಂಭೀರತೆಯ ಬಗ್ಗೆ ತಿಳಿದು ಕೆಲಸ ಮಾಡಿ ಎಂದರು..
ಈ ಆಸ್ತಿ ಕಣಜ ಗಣಕೀಕರಣ ಕಾರ್ಯದಲ್ಲಿ ಕಡಿಮೆ ಕಾರ್ಯಕ್ಷಮತೆ ತೋರಿದ ಯಾರೇ ಸಿಬ್ಬಂದಿ ಇರಲಿ, ಅವರ ವಿಕೆಟ್ ಮಾತ್ರ ಗ್ಯಾರಂಟಿ ಬೀಳುತ್ತದೆ ಎಂದರು..

ತಮಗೆ ಒದಗಿ ಬಂದ ಈ ಸವಾಲನ್ನು ಕಂದಾಯ ವಿಭಾಗದ ಸಿಬ್ಬಂದಿಗಳು ಯಾವ ರೀತಿಯಲ್ಲಿ ಕಾರ್ಯಮಾಡಿ, ಗುಣಮಟ್ಟ ಕಾಪಾಡಿಕೊಂಡು, ಯಶಸ್ವಿ ಆಗುವರೋ ಕಾದು ನೋಡಬೇಕಿದೆ..
ವರದಿ ಪ್ರಕಾಶ ಕುರಗುಂದ..