ಪಕ್ಷದ ನಿರ್ಣಯವನ್ನು ಪ್ರಶ್ನಿಸುವ ದೊಡ್ಡ ಮನುಷ್ಯ ನಾನಲ್ಲ, ಪಕ್ಷ ಎಲ್ಲರಿಗಿಂತ ದೊಡ್ಡದು..
ಪಕ್ಷದ ವರಿಷ್ಠರ ಮನವಲಿಕೆ ಮಾಡುತ್ತೇವೆ
ಯತ್ನಾಳ ಮತ್ತೆ ಬಿಜೆಪಿಗೆ ಬಂದೆ ಬರ್ತಾರೆ..
ಶಾಸಕ ರಮೇಶ ಜಾರಕಿಹೊಳಿ ವಿಶ್ವಾಸ..
ಬೆಳಗಾವಿ : ಬಿಜೆಪಿ ಪಕ್ಷದ ನಿರ್ಣಯವನ್ನು ಪ್ರಶ್ನಿಸುವಂತ ದೊಡ್ಡ ವ್ಯಕ್ತಿ ನಾನಲ್ಲ, ಪಕ್ಷಕ್ಕಿಂತಲು ಯಾರೂ ದೊಡ್ಡವರಲ್ಲ, ಯತ್ನಾಳವರನ್ನು ಬಿಜೆಪಿ ಪಕ್ಷದಿಂದ ಉಚ್ಛಾಟನೆ ಮಾಡಿದ್ದು ಬೇಸರ ತಂದಿದೆ, ಯಾಕೆಂದರೆ ರಾಜ್ಯದ ಒಂದು ದೊಡ್ಡ ಸಮುದಾಯದ ದೊಡ್ಡ ನಾಯಕರು ಅವರು ಎಂದು ಮಾಜಿ ಸಚಿವರು ಹಾಗೂ ಹಾಲಿ ಶಾಸಕರಾದ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಗುರುವಾರ ನಗರದ ಸರ್ಕ್ಯೂಟ್ ಹೌಸನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ದೊಡ್ಡ ಸಮುದಾಯದ ಪ್ರಭಾವಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ, ಅವರನ್ನು ಬಿಜೆಪಿ ಪಕ್ಷದಿಂದ ದೂರ ಇಡುವದು ತುಂಬಾ ನೋವಿನ ವಿಷಯ, ಈ ಕುರಿತಾಗಿ ಪಕ್ಷದ ವರಿಷ್ಠರ ಜೊತೆ ಮಾತನಾಡಿ, ಅವರ ಮನವೊಲಿಸಿ, ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮತ್ತೆ ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಇದು ಮೊದಲೇ ತಿಳಿದ ವಿಷಯವಾಗಿತ್ತು, ರಾಜ್ಯದ ಜನರ ಭಾವನೆ ತಿಳಿದುಕೊಂಡು ಮಾತನಾಡಬೇಕೆಂದು ಸುಮ್ಮನಿದ್ದೆ, ಯತ್ನಾಳ ಅವರ ಆದಿಯಾಗಿ ನಾಳೆ ನಾವೆಲ್ಲರೂ ಬೆಂಗಳೂರಲ್ಲಿ ಸಭೆ ಸೇರುತ್ತೇವೆ, ಹೈಕಮಾಂಡ್ಗೆ ಯತ್ನಾಳ ಅವರಿಂದ ಒಂದು ಪತ್ರ ಬರೆದು ತಮ್ಮ ಆದೇಶವನ್ನು ಪುನ ಪರಿಶೀಲನೆ ಮಾಡಿ, ಉಚ್ಛಾಟನೆ ಹಿಂಪಡೆಯಿರಿ ಎಂದು ಪಕ್ಷದ ವರಿಷ್ಠರಿಗೆ ನಾವೆಲ್ಲಾ ಸೇರಿ ಮನವಿ ಮಾಡಿಕೊಳ್ಳುತ್ತೇವೆ ಎಂದಿದ್ದಾರೆ.

ಇಂತಹ ದೊಡ್ಡ ಸಮುದಾಯದ ನಾಯಕರನ್ನು ಪಕ್ಷ ಉಪಯೋಗಿಸಿಕೊಳ್ಳಬೇಕು, ಪಕ್ಷ ಮಾಡಿದ ಆದೇಶವನ್ನು ಹಿಂಪಡೆಯುತ್ತೆ ಎಂಬ ವಿಶ್ವಾಸವಿದೆ, ಪಕ್ಷ ಯಾರ ಮೇಲೆ ಬಹಳ ಪ್ರೀತಿ ಇಟ್ಟಿರುತ್ತೆಯೋ ಅವರ ಮೇಲೆ ಕ್ರಮ ಜರುಗಿಸುತ್ತದೆ, ಕೆಲವೊಂದು ನಾಯಕರು ಮಾತ್ರ ವರಿಷ್ಠರ ಬಳಿ ಹೋಗಿ ಮನವಿ ಮಾಡುತ್ತಿದ್ದು, ಆದಷ್ಟು ಬೇಗ ಈ ಸಮಸ್ಯೆ ನಿವಾರಣೆ ಆಗಿ ಬಿಜೆಪಿ ಪಕ್ಷ ಮತ್ತೆ ಬಲಿಷ್ಠವಾಗಿ ಗಟ್ಟಿಯಾಗುತ್ತದೆ, ಎಂದು ನಮ್ಮ ವರಿಷ್ಠರ ಮೇಲೆ ರಾಷ್ಟ್ರೀಯ ನಾಯಕರ ಮೇಲೆ ನಮಗೆ ವಿಶ್ವಾಸವಿದೆ ಎಂದಿದ್ದಾರೆ.
ಯತ್ನಾಳ ಆಗಬಹುದು, ನಾನಾಗಬಹುದು ನಮ್ಮ ತಂಡದವರು ಯಾರು ಬಿಜೆಪಿ ಬಿಡುವದಿಲ್ಲ, ಬಿಜೆಪಿಯಲ್ಲೇ ಇರುತ್ತವೆ, ಬಿಜೆಪಿಯಿಂದಲೇ ಮುಂದಿನ ಚುನಾವಣೆ ಎದುರಿಸುತ್ತೇವೆ, ಏನೂ ಗೊಂದಲವಿಲ್ಲ ಇದೊಂದು ಕೆಟ್ಟ ಗಳಿಗೆ, ಮುಂದೆ ಎಲ್ಲಾ ನಿವಾರಣೆ ಆಗುತ್ತದೆ, ವರಿಷ್ಠರ ಮೇಲೆ ಭರವಸೆ ಇದೆ, ಯತ್ನಾಳ ಒಂಟಿಯಲ್ಲ ಅವರೊಂದಿಗೆ ನಾವು ಇದ್ದೇವೆ ಎಂಬುದಕ್ಕಾಗಿ ಈ ಸುದ್ದಿಗೋಷ್ಠಿ ಎಂದಿದ್ದಾರೆ
ನಾನು ಪಕ್ಷದ ವರಿಷ್ಠರ ಜೊತೆ ಮಾತನಾಡಿದ್ದೇನೆ, ಮುಂದೆಯೂ ನಾವೆಲ್ಲಾ ಯತ್ನಾಳ ಪರವಾಗಿ ಮನವಿ ಮಾಡುತ್ತೇವೆ, ಭಾರತೀಯ ಜನತಾ ಪಕ್ಷವನ್ನು ಮತ್ತೆ ಗಟ್ಟಿಯಾಗಿ ಕಟ್ಟುತ್ತೇವೆ, ಉಚ್ಛಾಟನೆ ರದ್ದುಪಡಿಸಿ ಮತ್ತೆ ಪಕ್ಷಕ್ಕೆ ಯತ್ನಾಳ ಅವರ ಸೇವೆ ಒದಗುವಂತ ಮಾಡುತ್ತೇವೆ ಎಂದಿದ್ದಾರೆ.
ಪಕ್ಷದ ಒಳ್ಳೆಯದಕ್ಕಾಗಿ ತಂಡ ಕಟ್ಟಿ ಒಕ್ಕಟ್ಟಾಗಿ ಕೆಲಸ ಮಾಡಿದ್ದೇವೆ, ವರಿಷ್ಠರಿಗೆ ತಪ್ಪು ಅನಿಸಿದ್ದರೆ ಅವರ ಮನವರಿಕೆ ಮಾಡಿ ಸರಿಪಡಿಸುತ್ತೇವೆ, ರಾಷ್ಟ್ರ ನಾಯಕರ ಜೊತೆ ಮಾತನಾಡಿದ್ದೇನೆ, ಯತ್ನಾಳ ಬಿಜೆಪಿಯಲ್ಲಿ ಗಟ್ಟಿಯಾಗಿ ಇರ್ತಾರೆ, ಪಕ್ಷ ಕಟ್ಟುತ್ತಾರೆ, ವಿಜಯೇಂದ್ರ ಬಗ್ಗೆ ಮಾತನಾಡಲು ಇಷ್ಟ ಇಲ್ಲಾ, ದುರ್ದೈವದಿಂದ ಇಂತಹ ಘಟನೆ ಸಂಭವಿಸಿದೆ, ಎಲ್ಲಾ ಸರಿಹೋಗುತ್ತೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ವರದಿ ಪ್ರಕಾಶ್ ಬಸಪ್ಪ ಕುರಗುಂದ..